ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಶಿಕ್ಷಣ, ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾ ಅಭಿವೃದ್ಧಿಗೆ ಕೇಂದ್ರ ಸರಕಾರ ಸದಾ ಬದ್ಧ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ೪೦೨, ಉಳ್ಳಾಲ ಬಹುಮಾನ್ಯರಾದ ಖುತ್ಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ) ತಂ ..ಳ್ರವರ ೪೨೩ನೆಯ ವಾರ್ಷಿಕ ಹಾಗೂ ೨೦ನೇ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಸೋಮವಾರ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥಿಸಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.
ಪ್ರತಿಯೊಂದು ಕ್ಷೇತ್ರಗಳಲ್ಲಿ ಎಲ್ಲಾ ವರ್ಗದವರ ಬಾಳಿಗೆ ಸೈಯ್ಯದ್ ಮದನಿ ದರ್ಗಾ ಬೆಳಕಾಗುತ್ತಿರುವುದು ಶ್ಲಾಘನೀಯ. ಇಂತಹ ಕ್ಷೇತ್ರದ ಭೇಟಿ ಜೀವನದ ಮಹತ್ವದ ದಿನಗಳಲ್ಲಿ ಒಂದಾಗಿದ್ದು, ದರ್ಗಾ ಮುಹಮ್ಮದ್ ಶರೀಫುಲ್ ಅವರ ಜೀವನದ ಮೌಲ್ಯಗಳು ಮತ್ತು ಕುರ್ಆನ್ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾತ್ಮನ ಕುರಿತು ಕೇಳಿದ್ದೇನೆ. ಆದರೆ ಅವರ ಹೆಸರಿನಲ್ಲಿರುವ ದರ್ಗಾ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಇಲ್ಲಿಗೆ ಭೇಟಿ ನೀಡಿದ ಬಳಿಕ ತಿಳಿದಿದ್ದೇನೆ. ದರ್ಗಾ ವಿಚಾರದಲ್ಲಿ ಕೇಂದ್ರ ಸರಕಾರ ಇದುವರೆಗೆ ಸ್ಪಂದಿಸಿಲ್ಲ. ಆದರೆ ನೂತನ ಸರಕಾರ ಸಕಾರಾತ್ಮಕವಾಗಿ ಸ್ಪಂಧಿಸಲಿದೆ. ದರ್ಗಾದ ಅತಿ ಮುಖ್ಯ ಬೇಡಿಕೆಗಳನ್ನು ಮನಗಂಡಿದ್ದು ಅದಕ್ಕೆ ಸಂಬಂಧಿಸಿ ದರ್ಗಾಕ್ಕೆ ಇಲಾಖೆಯ ಅzಕಾರಿಗಳ ತಂಡವನ್ನು ಕಳುಹಿಸಿ ಸೌಲಭ್ಯ ಒದಗಿಸಲು ಖಂಡಿತವಾಗಿಯೂ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಕೇಂದ್ರ ಸರಕಾರ ಶಿಕ್ಷಣ ನೀಡುವುದು ಹಾಗೂ ಉದ್ಯೋಗ ಕಲ್ಪಿಸಿಕೊಡುವ ಯೋಜನೆಗಳಿಗೆ ಹೆಚ್ಚಿನ ಮನ್ನಣೆ ನೀಡಿದೆ. ಶಿಕ್ಷಣ ಪಡೆದ ಬಳಿಕ ಯಾವುದೇ ಕ್ಷೇತ್ರದಲ್ಲಿ ಅಭದ್ರತೆ ಕಾಡದಂತೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಹಾಗಾಗಿ ಉಳ್ಳಾಲ ದರ್ಗಾದ ಪುಣ್ಯ ಕಾರ್ಯಕ್ಕೆ ಸರಕಾರ ಸ್ಪಂದಿಸಲಿದೆ ಎಂದರು.
ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ಕಾರ್ಯಕ್ರಮ ಉದ್ಘಾಟಿಸಿದರು.
ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಳ್ಳಾಲ ಖಾಝಿ ಆಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್ಬುಖಾರಿ, ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟಿನ ಉಪಾಧ್ಯಕ್ಷ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಕೋಶಾಽಕಾರಿ ಮಹಮ್ಮದ್ ಹಾಜಿ ಬಿಲಾಲ್, ಲೆಕ್ಕ ಪರಿಶೋಧಕ ಹಮೀದ್ ಕಲ್ಲಾಪು, ಉಪ ಕಾರ್ಯದರ್ಶಿಗಳಾದ ಅಶ್ರಫ್ ಹಾಜಿ ಹಾಗೂ ಫಾರೂಕ್ ಮಾರ್ಗತ್ತಲೆ, ಮಹೇಶ್ ಗುಪ್ತಾ, ಹಮೀದ್ ದುಬಾಯಿ, ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎ.ಎ.ಹೈದರ್ ಪರ್ತಿಪ್ಪಾಡಿ, ಮಜೀದ್ ಹಾಜಿ ಹಾಗೂ ಉರೂಸ್ ಸಮಿತಿಯ ಎಲ್ಲ ಸದಸ್ಯರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಯ್ಯಿದ್ ಮದನಿ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ನ ಪ್ರಾಂಶುಪಾಲ ಅಬ್ದುಲ್ ಕಾಲಂ ಅಝ್ಝರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಖ್ವಿ ಅವರ ಬಗ್ಗೆ ಹೊಗಳಿದ ಗೀತೆ ಆಲಾಪಿಸಿದ ಇಬ್ಬರು ಬಾಲಕರನ್ನು ನಖ್ವಿ ಅಭಿನಂದಿಸಿದರು.











