UN NETWORKS
ಮುಡಿಪು: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಇದರ ಎಸ್ವೈಎಸ್ ಮುಡಿಪು ಸೆಂಟರ್ ವತಿಯಿಂದ ಹತ್ತು ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ನಂದರಪಡ್ಪುವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಎಸ್.ಕೆ.ಮಲ್ಟಿ ಪರ್ಪಸ್ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮವು ನಡೆಯಿತು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಿಖಾಹ್ ನೇತೃತ್ವವನ್ನು ವಹಿಸಿ ಮಾತನಾಡಿದ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಅವರು, ಎಸ್ವೈಎಸ್ ವತಿಯಿಂದ ಕೆಲವು ವರ್ಷಗಳಿಂದ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರತೀ ವರ್ಷವೂ ಭಾಗವಹಿಸುತ್ತಿದ್ದೇನೆ. ಸಾಮೂಹಿಕ ವಿವಾಹದಂತಹ ಕಾರ್ಯಕ್ರಮವು ಮಾದರಿ ಕಾರ್ಯಕ್ರಮವಾಗಿದ್ದು ಪುಣ್ಯದ ಕಾರ್ಯವಾಗಿದೆ. ಇಂತಹ ಸಮಾಜದ ಬಡಜನರಿಗೆ ಅನುಕೂಲವಾಗುವಂತಹ ಕೆಲಸಗಳು ಹೆಚ್ಚೆಚ್ಚು ನಡೆಯಬೇಕಿದೆ. ಮುಸ್ಲಿಂ ಸಮುದಾಯ ಸರಳ ವಿವಾಹ ಕಾರ್ಯಕ್ಕೆ ಆದ್ಯತೆ ನೀಡುವುದರೊಂದಿಗೆ ಇಂತಹ ಮಾದರಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಖಾಝಿ ಇಬ್ರಾಹಿಂ ಬೇಕಲ್ ಉಸ್ತಾದ್ ಅವರು, ದಾನ ಮಾಡುವರು ಪ್ರಥಮವಾಗಿ ತಮ್ಮ ಕುಟುಂಬದಲ್ಲಿರುವವರಿಗೆ ದಾನ ಮಾಡಬೇಕು. ಪ್ರವಾದಿಯವರು ತಿಳಿಸಿದಂತೆ ಇನ್ನೊಂದು ಕಾಲ ಬರುತ್ತದೆ. ಅಲ್ಲಿ ದಾನ ಕೊಡುವವರು ತುಂಬಾ ಜನ ಇರುತ್ತಾರೆ, ಆದರೆ ತೆಗೆದುಕೊಳ್ಳುವವರು ಇರುವುದಿಲ್ಲ. ಆದ್ದರಿಂದ ನಾವು ಈಗ ಆದಷ್ಟು ದಾನದಂತಹ ಪುಣ್ಯ ಕಾರ್ಯದಲ್ಲಿ ತೊಡಗಿಕೊಂಡು ಮುನ್ನಡೆಯಬೇಕು. ಮೊದಲಿಗೆ ನಮ್ಮನ್ನು ಸಲಹಿದ ತಂದೆ ತಾಯಿ, ಬಳಿಕ ಕುಟುಂಬ ನಂತರ ಹೊರಗಿನವರಿಗೆ ದಾನ ಮಾಡಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮಲ್ಲಿ ಅಶ್ರಫ್ ತಂಙಳ್ ಆದೂರು ಅವರು ಉಪಸ್ಥಿತರಿದ್ದರು. ಕೆ.ಸಿ.ರೋಡ್ ಹುಸೈನ್ ಸಅದಿಯವರು ಪ್ರಭಾಷಣವನ್ನು ನೆರವೇರಿಸಿದರು.ಕಾರ್ಯಕ್ರಮದಲ್ಲಿ ಬಿ.ಕೆ.ಪೈಝಿ ಬಾಳೆಪುಣಿ, ಅಬ್ಬಾಸ್ ಉಸ್ತಾದ್ ಅಲ್ ಮದೀನ, ಕಿನ್ಯಾ ತಂಙಳ್, ತಲಕಿ ತಂಙಳ್, ರಾಜ್ಯ ಆಹಾರ ಸಚಿವ ಯು.ಟಿ.ಖಾದರ್, ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮಾಜಿ ಮೇಯರ್ ಅಶ್ರಫ್, ಎಸ್ವೈಎಸ್ ರಾಜ್ಯಾಧ್ಕಕ್ಷ ಜಿ.ಎಂ.ಕಾಮಿಲ್ ಸಖಾಫಿ, ಹೈದರ್ ಪರ್ತಿಪ್ಪಾಡಿ, ಎಸ್.ವೈಎಸ್ ಮುಡಿಪು ಸೆಂಟರ್ ಅಧ್ಯಕ್ಷ ಸಿ.ಎಚ್.ಮಹಮ್ಮದ್ ಹಾಜಿ, ಕಾರ್ಯದರ್ಶಿ ಬಾವಾ ಹಾಜಿ ನಡುಪದವು, ಎಸ್.ಕೆ.ಮಲ್ಟಿ ಪರ್ಪಸ್ ಹಾಲ್ ಮಾಲಕರಾದ ಎಸ್.ಕೆ.ಅಬ್ದುಲ್ ಖಾದರ್ ಹಾಜಿ, ಮ್ಯಾರೇಜ್ ಕಮಿಟಿ ಅಧ್ಯಕ್ಷ ಅಬ್ಬು ಹಾಜಿ ಮಧ್ಯನಡ್ಕ, ಎಸ್ವೈಎಸ್ ಉಪಾಧ್ಯಕ್ಷ ಎಂ.ಎ.ಸಿದ್ದೀಕ್ ಸಖಾಪಿ, ಅಬೂಬಕ್ಕರ್ ಮದ್ಯನಡ್ಕ, ಮೊಯ್ದಿನ್ ಕುಂಞ, ಎಂ.ಎ.ಬಶೀರ್ ಮುಡಿಪು, ಎಂ.ಬಿ.ಅಬೂಬಕ್ಕರ್ ಸಖಾಪಿ ಬಾಳೆಪುಣಿ, ಅಲಿಕುಂಞ ಮರಿಕ್ಕಳ ಮಹಮ್ಮದ್ ಶಾಲಿಮಾರ್, ರಫೀಕ್ ಮುದುಂಗಾರು ಕಟ್ಟೆ. ಇಬ್ರಾಹಿಂ ಮುಡಿಪು ಮೊದಲಾದವರು ಉಪಸ್ಥಿತರಿದ್ದರು.
ಸಾಮೂಹಿಕ ವಿವಾಹದೊಂದಿಗೆ ನೂತನ ಸಭಾಂಗಣ ಉದ್ಘಾಟನೆ
ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮವು ಮುಡಿಪುವಿನ ಮೈದಾನದಲ್ಲಿ ಏರ್ಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಎಸ್.ಕೆ.ಖಾದರ್ ಹಾಜಿ ಅವರು ನಂದರಪಡ್ಪುವಿನಲ್ಲಿ ನಿರ್ಮಿಸಿದ ಎಸ್.ಕೆ.ಮಲ್ಟಿಪರ್ಪಸ್ ಸಭಾಂಗಣದಲ್ಲಿ ಉದ್ಘಾಟನೆಯ ದಿನದಂದೇ ಏರ್ಪಡಿಸಲಾಗಿತ್ತು. ನೂತನ ಸಭಾಂಗಣವನ್ನು ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಅವರು ನೆರವೇರಿಸಿದರು.
ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿಟ್ಟವರು
ಉಮ್ಮರ್ ಪಾರೂಕ್-ಸಫ್ರಿನಾ, ಅಹ್ಮದ್ ಆಸೀಫ್-ಮಿಶ್ರಿಯಾ, ಅಬ್ದುರ್ರಹ್ಮಾನ್-ಝೀನತ್, ನಾಫಿಲ್-ಸೈನಾಝಿ, ಮಹಮ್ಮದ್ ರಫೀಕ್-ತ್ವಾಹಿರ, ಹಿದಾಯುತ್ತುಲ್ಲ-ಸೈನಾಝ್, ಅಶ್ಪಕ್-ಸಲೂಲ, ರೋಶನ್ ಜಮೀರ್-ಮರಿಯಮ್ಮ, ನಯಾಝ್ ಜಾನ್-ಸುಮಯ್ಯ.


