UN NETWORKS
ಪಜೀರು : ಸ್ವಚ್ಛ ಪಜೀರು ಗ್ರಾಮ ನಿರ್ಮಾಣ ಕಾರ್ಯದಲ್ಲಿ ಗ್ರಾಮಸ್ಥರು ಪಕ್ಷಭೇದ ಮರೆತು ಭಾಗವಹಿಸುತ್ತಿದ್ದು, ಗ್ರಾಮಸ್ಥರ ಬೆಂಬಲವಿದ್ದರೆ ಸ್ವಚ್ಛ ಗ್ರಾಮದೊಂದಿಗೆ ಮಾದರಿ ಗ್ರಾಮ ನಿರ್ಮಾನ ಸಾಧ್ಯ ಎಂದು ಪಜೀರು ಗ್ರಾಮ ಪಂಚಾಯತ್ ಅದ್ಯಕ್ಷ ಸೀತಾರಾಮ ಶೆಟ್ಟಿ ಮುಗುಳಿ ಅಭಿಪ್ರಾಯಪಟ್ಟರು.
ಅವರು ಪಜೀರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಪದವು ಶ್ರೀ ದೇವಿನಗರ ನಾಗರಿಕರ ಹಿತರಕ್ಷಣಾ ಸಮಿತಿ ಇದರ ಆಶ್ರಯದಲ್ಲಿ ಸ್ವಚ್ಛ ಭಾರತದಡಿಯಲ್ಲಿ ` ನಮ್ಮ ಗ್ರಾಮ – ಸ್ವಚ್ಛ ಪಜೀರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಗ್ರಾಮ- ಸ್ವಚ್ಛ ಪಜೀರು ಸ್ವಚ್ಛತಾ ಆಂದೋಲನಕ್ಕೆ ಈಗಾಗಲೇ ಚಾಲನೆಯನ್ನು ನೀಡಿ ಪ್ರತೀ ವಾರ ಗ್ರಾಮದ ಒಂದೊಂದು ವಾರ್ಡ್‍ಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತೀ ವಾರ್ಡ್‍ಗಳ ಜನರು ಸ್ವ ಇಚ್ಚೆಯೊಂದಿಗೆ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಕಸ ರಹಿತ ಪಜೀರು ಗ್ರಾಮದ ಕನಸನ್ನು ನನಸು ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷೆ ಡಾ| ಸ್ಮೃತಿ ಯು. ವಹಿಸಿದ್ದರು, ತಾಲೂಕು ಪಂಚಾಯತ್ ಸದಸ್ಯ ನವೀನ್ ಕುಮಾರ್ ಪಾದಲ್ಪಾಡಿ, ಶ್ರೀ ದುರ್ಗಾಕಾಳಿ ದೇವಸ್ಥಾನದ ಸಂಚಾಲಕ ಜಯಂತ್ ಶೆಟ್ಟಿ ಪೆರ್ಣ ದೊಡ್ಡಮನೆ, ಪಜೀರು ಗ್ರಾಮ ಪಂಚಾಯಯತ್ ಸದಸ್ಯ ಮಹಮ್ಮದ್ ರಫೀಕ್, ಕೇಶವ ದೇವಿನಗರ, ರಾಕೇಶ್ ದೇವಿನಗರ, ಹರೀಶ್ ಆಚಾರ್ಯ ದೇವಿನಗರ, ಸತೀಶ್ ಶೆಟ್ಟಿ ಪೆರ್ಣ ಮುಗುಳಿ , ಉಷಾ ಅಶೋಕ್ ಶೆಟ್ಟಿ , ಉಷಾ ಮಂಜುನಾಥ್ ರೈ, ಕಂಬಳಪದವು ಶಾಲಾ ಮುಖ್ಯ ಶಿಕ್ಷಕಿ ವಿಮಲ ಟೀಚರ್, ಲೋಲಾಕ್ಷಿ ದೇವಿನಗರ, ಮಹೇಶ್ವರೀ ಯತೀಶ್ ಶೆಟ್ಟಿ ದೇವಿನಗರ, ಸುರೇಶ್ ಬಳ್ಳಾಲ್, ಪ್ರಮೋದ್ ದೇವಿನಗರ ಮತ್ತಿತರರು ಉಪಸ್ಥಿತರಿದ್ದರು.




