UN NETWORKS
ದೇರಳಕಟ್ಟೆ: ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನಲ್ಲಿ ಇದುವರೆಗೆ ಉಪಾಧ್ಯಕ್ಷರಲ್ಲಿ ಓರ್ವನಾಗಿ ಕಾರ್ಯ ನಿರ್ವಹಿಸುತ್ತಿದ್ದ “ಮರಾಠಿಮೂಲೆ ಮೊಯ್ದೀನ್ ಕುಂಞ ಹಾಜಿ”ಯವರು ಹಠಾತ್ ನಿಧನ ಹೊಂದಿದ ಕಾರಣ ಅವರ ತೆರವಾದ ಸ್ನಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಉಪಾಧ್ಯಕ್ಷ ರಲ್ಲಿ ಓರ್ವನಾಗಿ ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೊಣಾಜೆ ಯವರನ್ನು ಆಯ್ಕೆ ಮಾಡಲಾಗಿದೆ.
ಇಂದು ಮಂಗಳೂರಿನಲ್ಲಿ ಜಿಲ್ಲಾಧ್ಯಕ್ಷರಾದ ಐ. ಮೊಯ್ದಿನಬ್ಬ ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯ್ತು.


