UN NETWORKS
ಕುಂಪಲ: ಡಾಮರೀಕರಣದ ಜನರ ಬಹಳ ವರ್ಷದ ಬೇಡಿಕೆ ಈಡೇರಿದೆ, ಮುಂದಿನ ದಿನಗಳಲ್ಲಿ ಸೋಮೇಶ್ವರ ಗ್ರಾಮ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು,ಹೆಚ್ಚುವರಿ ಅನುದಾನ ಸಿಗುವುದರಿಂದ ಈ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ದೊರಕಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಕುಂಪಲ ವಿಜಯ ನಗರ ಲಕ್ಷ್ಮಿಗುಡ್ಡೆ ಸಂಪರ್ಕಿಸುವ ರಸ್ತೆಗೆ ಡಾಮರೀಕರಣಕ್ಕೆ ಚಾಲನೆ ಮಾತನಾಡಿ ಈಗಾಗಲೇ ಆಶ್ರಯ ಕಾಲನಿಯಲ್ಲಿ 25 ಲಕ್ಷ ಅನುದಾನದ ಕಾಮಗಾರಿ ಪ್ರಗತಿಯಲ್ಲಿದೆ. ಯೇನೆಪೊಯದಿಂದ ಆಶ್ರಯ ಕಾಲನಿ ರಸ್ತೆ ಅಭಿವೃದ್ಧಿ, ವಿದ್ಯಾನಗರ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲಿದ್ದು, ಮುಂದಿನ ದಿನಗಳಲ್ಲಿ ಅಡ್ಡ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಊರಿನ ಹಿರಿಯರಾದ ನಾರಾಯಣ್ ಶಿಲಾನ್ಯಾಸ ನೆವೇರಿಸಿದರು. ಈ ಸಂದರ್ಭದಲ್ಲಿ ಕಿಶೋರ್, ಅರುಣ್ ಆಚಾರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಸದಾಶಿವ ಉಳ್ಳಾಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಹಿಂದುಳಿದ ವರ್ಗಗಳ ಅಧ್ಯಕ್ಷ ದಿನೇಶ್ ಕುಂಪಲ, ಪಂಚಾಯತ್ ಸದಸ್ಯ ದೀಪಕ್ ಪಿಲಾರ್, ಪುರುಷೋತ್ತಮ ಶೆಟ್ಟಿ, ಬಶೀರ್ ಮುಂಡೋಳಿ, ಶ್ರೀಧರ್ ಆಳ್ವ, ಸ್ಥಳೀಯರಾದ ಕುಸುಮ ಕಮಲಾಕ್ಷ, ರುಕ್ಮಯ ಬಂಗೇರ, ಮುನೀರ್ ಬಾವ ಮತ್ತಿತರರು ಉಪಸ್ಥಿತರಿದ್ದರು.


