UN NETWORKS
ಉಳ್ಳಾಲ: ಉಳ್ಳಾಲ ವಿದ್ಯಾರಣ್ಯ ನಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಡಾ| ಸದಾಶಿವ ಪೊಳ್ನಾಯ ಇವರನ್ನು ಆಯ್ಕೆಮಾಡಲಾಯಿತು.
ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ಎಮ್.ಜಿ. ಶೆಣೈ, ಉಪಾಧ್ಯಕ್ಷರಾಗಿ ಸಲೀಂ ಮತ್ತು ಯೋಗೀಶ್, ಪ್ರಧಾನ ಕಾರ್ಯದರ್ಶಿಯಾಗಿ ಜಾನಕಿ ಪುತ್ರನ್, ಜತೆ ಕಾರ್ಯದರ್ಶಿಗಳಾಗಿ ಡಾ| ಸುಧೀರ್ ಉಪಾಧ್ಯಾಯ ಮತ್ತು ಇಕ್ಬಾಲ್ ಹಾಗೂ ಕೋಶಾಧಿಕಾರಿಯಾಗಿ ಸುಧೇಶ್ ಮರೋಳಿ ಆಯ್ಕೆಯಾಗಿದ್ದಾರೆ .
ಸಭೆಯಲ್ಲಿ ಉದ್ಯಾನವನದ ಅಭಿವೃದ್ಧಿ, ಸಭಾ ಭವನದ ನಿರ್ಮಾಣ, ಕಾಂಕ್ರಿಟ್ ರಸ್ತೆಯ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಕೌನ್ಸಿಲರ್ ಮುಸ್ತಾಫ ಸಲಹೆ ಸೂಚನೆಗಳನ್ನು ನೀಡಿದರು.
ಡಾ| ಸದಾಶಿವ ಪೊಳ್ನಾಯರು ಸ್ವಾಗತಿಸಿ, ಪ್ರಸ್ತಾವನೆಗೈದರು. ಡಾ| ಸುಧೀರ್ ಉಪಾಧ್ಯಾಯರು ವಂದಿಸಿದರು. ಸಂಘದ ಮುನ್ನಡೆಯಲ್ಲಿ ಬಹುಕಾಲದಿಂದ ಶ್ರಮಿಸುತ್ತಿದ್ದ ಎಮ್.ಜಿ. ಶೆಣೈ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಎಂ. ವಾಸುದೇವ ರಾವ್ ಕಾರ್ಯಕ್ರಮ ನಿರೂಪಿಸಿದರು.


