UN NETWORKS
ತೊಕ್ಕೊಟ್ಟು: ಬೀಡಿ ಕೈಗಾರಿಕೆ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳೇ ನೇರ ಹೊಣೆಯಾಗಿದೆ ಎಂದು ಜಿಲ್ಲಾ ಸೌತ್ ಕೆನರಾ ಬೀಡಿ ಫೆಡರೇಶನ್ನಿನ ಕಾರ್ಯದರ್ಶಿ ಬಿ.ಬಾಲಕೃಷ್ಣ ಶೆಟ್ಟಿ ಹೇಳಿದರು.
ಕೋಟೆಕಾರು ಸರ್ಕಲ್ ಬೀಡಿ ಲೇಬರ್ಸ್ ಯೂನಿಯನ್ ಇದರ ವತಿಯಿಂದ ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಮಂಗಳವಾರ ನಡೆದ ಬೀಡಿ ಕಾರ್ಮಿಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. 2000 ಇಸವಿಯಲ್ಲಿ ಬೀಡಿ ನಿಷೇಧ ಕಾನೂನು ಜಾರಿ ಮಾಡಿ ಲಕ್ಷಾಂತರ ಬೀಡಿ ಕಾರ್ಮಿಕರಿಗೆ ಅನ್ಯಾಯವೆಸಗಿದ್ದರುಯ. 2015ರಲ್ಲಿ ಬೀಡಿ ನಿಷೇಧ ಕಾನೂನು ಜಾರಿ ಮಾಡಿ ಲಕ್ಷಾಂತರ ಬೀಡಿ ಕಾರ್ಮಿಕರಿಗೆ ಅನ್ಯಾಯವೆಸಗಿದ್ದರು. 2015ರಲ್ಲಿ ಬಂದ ಮೋದಿ ಸರಕಾರ ಮತ್ತಷ್ಟು ಕಟ್ಟಿನ ಕೋಪ್ಟಾ ಕಾನೂನು ಜಾರಿಗೆ ತಂದು ಬೀಡಿ ಕಾರ್ಮಿಕರ ಉದ್ಯೋಗವನ್ನು ಕಸಿಯುವ ಹಂತಕ್ಕೆ ಹೋಗಿದೆ. ಈ ನಿಟ್ಟಿನಲ್ಲಿ ಬೀಡಿ ಕಾರ್ಮಿಕರು ಸಂಘಟಿತರಾಗಬೇಕಿದೆ. ಬೀಡಿ ಉದ್ಯಮ ಬಂದ್ ಆದಲ್ಲಿ ತಿಂಗಳಿಗೆ 3,000 ಪಿಂಚಣಿ ನೀಡಬೇಕಾಗಿದೆ .
ಬೀಡಿ ಕಾರ್ಮಿಕರಿಗೆ ರೂ.1,000 ಬೀಡಿ ಸುತ್ತಿದರೆ, ರೂ.300 ಕನಿಷ್ಟ ಮಜೂರಿ ನೀಡಬೇಕಿದೆ, ವಾರದಲ್ಲಿ 6 ದಿನ ಕೆಲಸ ನೀಡಬೇಕಿದೆ. ಕೆಲಸವಿಲ್ಲದ ದಿನದಲ್ಲಿ ಸಂಬಳ ನೀಡಬೇಕಿದೆ, ಸದ್ಯ ಬೀಡಿ ಉದ್ಯಮಿಗಳು ಬಿಕ್ಕಟ್ಟಿನ ಲಾಭವನ್ನು ಪಡೆಯುತ್ತಿದ್ದಾರೆ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಒಳ್ಳೆಯ ಎಲೆಗಳನ್ನು ನೀಡದೆ ಬೀಡಿ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ರಾಜಕೀಯ ನೀತಿಗಳನ್ನು ತಿಳಿದು ಕಾರ್ಮಿಕರು ಮುಂದಿನ ಸಿಪಿಐ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ಗೆಲ್ಲಿಸಬೇಕಿದೆ ಎಂದರು.
ಈ ವೇಳೆ ಡಿವೈಎಫ್ ಐ ಮುಖಂಡ ಹಾಗೂ ಮಂಗಳೂರು ಕ್ಷೇತ್ರ ಸಿಪಿಐ ಅಭ್ಯರ್ಥಿ ನಿತಿನ್ ಕುತ್ತಾರ್, ಸಿಪಿಎಂ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಸುಂದರ ಕುಂಪಲ, ಬಾಬು ಪಿಲಾರ್, ನಾರಾಯಣ ತಲಪಾಡಿ, ಶ್ರೀನಿವಾಸ ಉಳ್ಳಾಲಬೈಲು, ರೋಹಿದಾಸ್ ಭಟ್ನಗರ, ನಳಿನಾಕ್ಷಿ ಉಳ್ಳಾಲಬೈಲು, ಜಯಂತಿ ಉಳ್ಳಾಲಬೈಲು, ಭಾರತಿ ಕುತ್ತಾರ್, ನಿರ್ಮಲ ಅಸೈಗೋಳಿ, ಮುನ್ನೂರು ಗ್ರಾ.ಪಂ ಸದಸ್ಯೆ ಶಶಿಕಲಾ ಮುನ್ನೂರು ಉಪಸ್ಥಿತರಿದ್ದರು.
ಬೀಡಿ ಸಂಘದ ಕಾರ್ಯದರ್ಶಿ ಯು.ಜಯಂತ ನಾೈಕ್ ಸ್ವಾಗತಿಸಿದರು. ವಿಲಾಸಿನಿ ತೊಕ್ಕೊಟ್ಟು ವಂದಿಸಿದರು.


