UN NETWORKS
ಬಾಳೆಪುಣಿ: ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಸರಕಾರಗಳು ಇಚ್ಛಾಶಕ್ತಿ ಹಾಗೂ ಸಮಯವಕಾಶ ಮಾಡಿಕೊಂಡು ಅದಕ್ಕೆ ಪೂರಕವಾದ ಕಾನೂನು ರೂಪಿಸಿಕೊಂಡು ಹಕ್ಕುಪತ್ರ ಕೊಡಲು ಮನಸ್ಸು ಮಾಡಿದ್ದರೆ ಅದೆಷ್ಟೋ ಸಂಖ್ಯೆಯ ಅರ್ಹ ಕುಟುಂಬಕ್ಕೆ ಅದಾಗಲೇ ಹಕ್ಕುಪತ್ರ ಪಡೆಯುವ ಅವಕಾಶ ಲಭ್ಯವಾಗುತ್ತಿತ್ತು. ಆದರೆ ಆ ಸರಕಾರ ಅದಕ್ಕೆ ಅವಕಾಶ ಕೊಡಲಿಲ್ಲ. ಆದರೆ ಅಂತಹ ಮಹತ್ತರ ಕಾರ್ಯವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದ ಎಲ್ಲ ಭಾಗದಲ್ಲೂ ಕಾರ್ಯಗತ ಮಾಡಿದ್ದು ತಮ್ಮದೇ ನಿವೇಶನ ಹಕ್ಕು ಸ್ಥಾಪಿಸಲು ಸಾಧ್ಯವಾಗಿದೆ ಎಂದು ಆಹಾರ ಹಾಗೂ ನಾಗರೀಕ ಪೂರೈಕೆ ಸಚಿವ ಯು. ಟಿ. ಖಾದರ್ ನುಡಿದರು.
ಬಾಳೆಪುಣಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸೋಮವಾರ ನಡೆದ 94ಸಿ ಹಾಗೂ 94ಸಿಸಿ ಅಡಿಯಲ್ಲಿ ಮಂಗಳೂರು ಕ್ಷೇತ್ರದ ಬಾಳೆಪುಣಿ, ಪಜೀರು, ಇರಾ, ಕುರ್ನಾಡು ಕೈರಂಗಳ, ನರಿಂಗಾನ ಗ್ರಾಮದ ಅರ್ಹ ಫಲಾನುಭವಿಗಳಿಗೆ ಹಕ್ಕಪತ್ರ ವಿತರಿಸಿ ಮಾತನಾಡಿದರು.
ನಿಜವಾಗಿಯೂ ಬಡವರಿಗೆ ಹಕ್ಕುಪತ್ರ ವಿತರಿಸಲು ಸರಕಾರಕ್ಕೆ ಯಾವುದೇ ಖರ್ಚು ಇಲ್ಲ. ಬಡವರ ನೆಲೆಗೆ ಒಂದು ಆಧಾರ ಅ„ಕಾರ ಕಲ್ಪಿಸಿಕೊಡಬೇಕು ಎಂಬ ಮನಸ್ಸು ಬೇಕು ಅಷ್ಟೆ. ಕಾಂಗ್ರೆಸ್ ಸರಕಾರ ಚುನಾವಣ ಪೂರ್ವ ಕೊಟ್ಟ 95ಶೇ. ಭರವಸೆ ಈಡೇರಿಸಿದೆ. ಬಡವರು ಮಾತ್ರ ಕೆಲಸ ಮಾಡಬೇಕು ಶ್ರೀಮಂತರು ಎಸಿ ಕೊಠಡಿಯಲ್ಲಿ ಕುಳಿತು ಕಾಲಹರಣ ಮಾಡಬೇಕು ಎಂಬ ಕಾನೂನು ಎಲ್ಲೂ ಇಲ್ಲ. ಬಡವರು ಸ್ವಲ್ಪ ವಿಶ್ರಾಂತಿ ಪಡೆಯಲಿ ಎಂದರು.
ಭಾಗ್ಯಲಕ್ಷ್ಮಿ ಯೋಜನೆಯಡಿಲ್ಲಿ ಅರ್ಹ ಬಡ ಕುಟುಂಬಕ್ಕೆ 18ಯುನಿಟ್ ವಿದ್ಯುತ್ ಬಳಕೆಯ ಮಿತಿಯನ್ನು ಈಗ 42ಕ್ಕೆ ಏರಿಸಲಾಗಿದೆ. ಅನ್ನ ಭಾಗ್ಯ ಯೋಜನೆ ಕೇಂದ್ರ ಸರಕಾರದ ಯೋಜನೆ ನಮ್ಮ ಭಾಗ್ಯ ಎಂದು ಹೇಳುವ ಬಿಜೆಪಿಗರು ಆ ಯೋಜನೆ ಬಿಜೆಪಿ ಸರಕಾರ ಇರುವ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶದಲ್ಲಿ ಯಾಕಿಲ್ಲ ಎಂಬುದಕ್ಕೆ ಉತ್ತರಿಸಲು ಎಂದು ಪ್ರಶ್ನಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಜಿಲ್ಲಾ ಚುನಾವಣಾ ಉಸ್ತುವಾರಿ ರಾಜಶೇಖರ್ ಕೋಟ್ಯಾನ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಬಾಳೆಪುಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವನಿತಾ ರೈ , ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಜೀರು, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ವಕ್ಪ್ ಸಲಹಾ ಸಮಿತಿ ಸದಸ್ಯ ಉಮ್ಮರ್ ಪಜೀರು, ಕರಾವಳಿ ಕರ್ನಾಟಕ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯ ಎನ್. ಪದ್ಮನಾಭ ನರಿಂಗಾನ, ಕುರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವದಾಸ ಭಂಡಾರಿ ಕುರ್ನಾಡು, ಜಗದೀಶ್ ಪಾನೆಲ, ಮಂಗಳೂರು ಕ್ಷೇತ್ರ ಅಕ್ರಮ ಅಕ್ರಮ ಸಮಿತಿ ಅಧ್ಯಕ್ಷ ಸಿದ್ದಿಕ್ ಪಾರೆ, ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಅಸೈ, ಕೋಟೆಕಾರು ಪಟ್ಟಣ ಪಂಚಾಯತ್ ನಾಮಕರಣ ಸಮಿತಿ ಸದಸ್ಯ ಪುರುಷೋತ್ತಮ ಪೂಜಾರಿ, ದೀಪಕ್ , ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ ರಾಜಗೋಪಾಲ್ ಭಟ್, ಜಗದೀಶ್ ಪೊಲಾಯಿ, ಗ್ರಂಥಾಲಯ ಅಧಿಕಾರಿ ಸವಿತಾ, ನಾಸಿರ್, ಸರಿತಾ, ಖಾದರ್, ಅಬ್ದುಲ್ ರಹಮಾನ್ , ಶೆರೀಫ್ ಹಾಗೂ ಜನಾರ್ದನ್ ಕುಲಾಲ್ ಕೈರಂಗಳ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬಾಳೆಪುಣಿ ಪಂಚಾಯತ್ ವಠಾರದಲ್ಲಿ ಸುಮಾರು ಹತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗ್ರಂಥಾಲಯಕ್ಕೆ ಶಂಕುಸ್ಥಾಪನೆಗೈದರು.
ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯ ಬಶೀರ್ ಕಾರ್ಯಕ್ರಮ ನಿರೂಪಿಸಿದರು.
**ಬಡವರು ಐದು ಅಥವಾ ಹತ್ತು ಸಾವಿರ ರೂ. ಬ್ಯಾಂಕ್ ಗೆ ಸಾಲ ಇರಿಸಿಕೊಂಡರೆ ಬ್ಯಾಂಕ್ ಸುಮ್ಮನಿರುತ್ತದಾ, ನೀರವ್ ಮೋದಿ ಮೇಲೆ ಯಾಕೆ ಮೌನ?
**ನೀರವ್ ಮೋದಿ ಮೇಲೆ ದೂರು ದಾಖಲಾಗಿದ್ದರೂ ಅವರು ಮೋದಿ ಜೊತೆ ನಿಯೋಗದಲ್ಲಿ ದಾವೂಸ್ ಗೆ ಹೋದ ಬಗೆ ಹೇಗೆ? ಮತ್ತೆ ವಿದೇಶಕ್ಕೆ ಪಲಾಯನ ಹೇಗೆ ಸಾಧ್ಯವಾಯಿತು?
**ಇಂದಿರಾ ಗಾಂ ಜಾರಿಗೆ ತಂದ ಪಡಿತರ ಚೀಟಿ ಪಡೆಯಲು ಕೇವಲ ಆಧಾರ್ ಕಾರ್ಡ್ ಮೂಲಕ ಅರ್ಜಿ ಹಾಕಿ ಅದರಿಂದ ಸಿಗುವ ಪತ್ರವೊಂದರ ಮೂಲಕ ರೇಶನ್ ಪಡೆಯಬಹುದು. ಬೀದಿ ಬದಿಯಲ್ಲಿ ಜೀವನ ಸಾಗಿಸುವರು ಅಲೆಮಾರಿಗಳು ಪಡಿತರ ಚೀಟಿ ಪಡೆಯಬಹುದು.




