UN NETWORKS
ಮಂಗಳೂರು: ಇತಿಹಾಸ ಪ್ರಸಿದ್ಧ ಅಡ್ಯಾರ್ ಕಣ್ಣೂರು ಹಝ್ರತ್ ಶೈಖ್ ಯೂಸುಫ್ ಸಿದ್ದೀಖ್ ವಲಿಯುಲ್ಲಾಹಿ(ಖ.ಸ)ರವರ ದರ್ಗಾ ಶರೀಫ್ ಉರೂಸ್ ಮುಬಾರಕ್ ಭಾನುವಾರ ಸಮಾಪ್ತಿಗೊಂಡಿತು.ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಕಂಪ್ಯೂಟರ್ ಮೊಬೈಲ್ ತಂದ ವಿಪತ್ತು ಮತ್ತು ಅಧುನಿಕ ಯುವ ಜನಾಂಗ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣಗೈದರು.
ಕಣ್ಣೂರು ಬದ್ರಿಯ ಜುಮಾ ಮಸೀದಿ ಖತೀಬ್ ಅನ್ಸಾರ್ ಪೈಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅಸೈಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಿದರು.
ರಾಜ್ಯ ಅಹಾರ ಸಚಿವ ಯು.ಟಿ ಖಾದರ್ ಉರೂಸ್ ಗೆ ಶುಭಹಾರೈಸಿದರು.ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಪ್ರೊಫೆಸರ್ ಅಲಿಕುಟ್ಟಿ ಉಸ್ತಾದ್, ಆತ್ರಾಡಿ ಖಾಝಿ ವಿ.ಕೆ ಅಬೂಬಕ್ಕರ್ ಮುಸ್ಲಿಯಾರ್, ಪೊಸೋಟ್ ಮುದರ್ರಿಸ್ ಅಸೈಯ್ಯಿದ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್, ಮುಹಮ್ಮದ್ ಫೈಝಿ, ಅಕ್ಕರಂಗಡಿ ಖತೀಬ್ ಕೆ.ಎಸ್ ಹೈದರ್ ದಾರಿಮಿ, ಬದ್ರಿಯ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅಶ್ರದಿ, ಕಣ್ಣೂರು ಶರೀಯತ್ ಕಾಲೇಜ್ ಪ್ರಿನ್ಸಿಪಾಲ್ ಇಸ್ಮಾಯಿಲ್ ಮದನಿ, ಮಂಗಳೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್ ಮಸೂದ್, ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ರಶೀದ್ ಹಾಜಿ, ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಹುಲ್ ಹಮೀದ್ ಹಾಜಿ ಮೆಟ್ರೊ, ನಂಡೆ ಪೆಂಙಳ್ ಅಭಿಯಾನ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಉದ್ಯಮಿ ಸುಲೈಮಾನ್ ಶೇಖ್,ಝೀನತ್ ಬಕ್ಷ ಸದಸ್ಯ ಹನೀಫ್ ಹಾಜಿ, ಸಿತಾರ್ ಮಜೀದ್ ಹಾಜಿ, ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಹಾಜಿ.ಎಸ್ ಅಬ್ದುಲ್ ರಹ್ಮಾನ್, ಉಪಾಧ್ಯಕ್ಷ ಹಾಜಿ.ಕೆ.ಎಸ್ ಹಮೀದ್, ಕೋಶಾಧಿಕಾರಿ ಕೆ.ಬಿ ಅಬ್ದುಲ್ ರಹ್ಮಾನ್, ಲೆಕ್ಕ ಪರಿಶೋಧಕ ಹಾಜಿ ಡಿ.ಎಂ ಮುಹಮ್ಮದ್, ಮಾಜಿ ಅಧ್ಯಕ್ಷ ಹಾಜಿ ಎಸ್ ಅಬ್ದುಲ್ ಖಾದರ್, ಉದ್ಯಮಿಗಳಾದ ಎಸ್.ಎಚ್ ಮುಹಮ್ಮದ್, ಹಾಜಿ ಶಾಕಿರ್, ಬಿ.ಮೊಹಮ್ಮದ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆ.ಬಿ.ಎಸ್ ನೌಫಲ್ ಬಾರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಉರೂಸ್ ಸಂಚಾಲಕ ಹಮೀದ್ ಸ್ವಾಗತಿಸಿದರು.


