UN NETWORKS
ಉಳ್ಳಾಲ: ದಕ್ಷಿಣ ಕನ್ನಡ ಫುಟ್ಬಾಲ್ ಅಸೊಶಿಯೇಶನ್ ವತಿಯಿಂದ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಅಹಮ್ಮದ್ ಮಾಸ್ಟರ್ ಮೆಮೊರಿಯಲ್ ದಕ್ಷಿಣ ಕನ್ನಡ ಎ ದಿವಿಶನ್ ಫುಟ್ಬಾಲ್ ಲೀಗ್ ನಲ್ಲಿ ಯೆನೆಪೋಯ ಡೀಮ್ದ್ ಟು ಬಿ ವಿಶ್ವವಿದ್ಯಾಲಯವು ಭಾಗವಹಿಸಿ ಪ್ರಥಮ ಸ್ಥಾನ ಪಡೆಯಿತು.
ತಂಡವು ಅಂತಿಮ ಪಂದ್ಯಾವಳಿಯಲ್ಲಿ ಬೆಂಗರೆ ಫುಟ್ಬಾಲ್ ತಂಡವನ್ನು 3-0 ಅಂತರದಲ್ಲಿ ಪರಾಜಯ ಗೊಳಿಸಿತು. ತಂಡವು ಬೀಬಿ ತೋಮಸ್ ರಿಂದ ತರಬೇತಿ ಪಡೆದ್ದಿತ್ತು.


