ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಪ್ಪಳ: ಯಜ್ಞ ಕುಂಡಗಳ ಊರು ಕೊಂಡೆವೂರು ಆಗಿದೆ , ಭಗವಂತ ಭಕ್ತರ ನಡುವೆ ಕೊಡುಕೊಳ್ಳುವಿಕೆಯ ವ್ಯವಹಾರವಿದ್ದು, ವೇದಗಳಲ್ಲಿ ಯಾವುದೇ ಬೇಧ-ಭಾವಗಳಿಲ್ಲದೆ ಲೋಕ ಕಲ್ಯಾಣದ ಚಿಂತನೆಯಷ್ಟೇ ಇದೆ. ಯಜ್ಞಕ್ಕೆ ನಾವು ನಮ್ಮ ಸ್ವಾರ್ಥವೆಂಬ ಪಶುತ್ವ ಬಲಿಕೊಡೋಣ, ವಂದೇಮಾತರಂ, ಜನ ಗಣ ಮನ ರಾಷ್ಟ್ರಗೀತೆಯಾದರೆ, ಗಾಯತ್ರೀ ವಿಶ್ವಗೀತೆಯಾಗಿದೆ ಎಂದು ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ವಿಶ್ವೇಶ ತೀರ್ಥ ಪಾದಂಗಳವರು ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ಆರಂಭದ ಮೊದಲದಿನ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಆಶೀರ್ವಚನ ನೀಡಿದರು.
±್ರೀ ಧಾಮ ಮಾಣಿಲದ ಪರಮಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿಯವರು “ “ಗುರುವಿನ ಗುಲಾಮನಾಗುವ ತನಕ ಮುಕ್ತಿದೊರೆಯದು, ಅಂತ: ಸತ್ವದ ಶಕ್ತಿ, ಭಾವನೆ, ಭಕ್ತಿಯ ಶಕ್ತಿ ಇದು ವಿಶ್ವದಾದ್ಯಂತ ಬೆಳಗಲಿ” ಎಂದು ಹಾರೈಸಿದರು. ದಿಕ್ಸೂಚಿ ಆಶೀರ್ವಚನ ನೀಡಿದ ಪರಮಪೂಜ್ಯ ಯೋಗಾನಂದ ಸರಸ್ವತೀ ಸ್ವಾಮೀಜಿಯವರು “ಯಾಗದ ವಿಶೇಷತೆ, ಇಲ್ಲಿ ಆಗುತ್ತಿರುವ ಹಿನ್ನೆಲೆಯ ವಿಶೇಷತೆಯ ಬಗ್ಗೆ ವಿವರಿಸಿ, ಇದೆಲ್ಲವೂ ಕಾರ್ಯಕರ್ತರ ಪರಿಶ್ರಮದಿಂದ ಆದದುಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.


ಅಧ್ಯಕ್ಷತೆ ವಹಿಸಿದ್ದ ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲ್ ಮಾತನಾಡಿ “ಕೇರಳದ ದ್ವಾರವಾದ ಉಪ್ಪಳದ ಕೊಂಡೆವೂರಿನಲ್ಲಿ ನಡೆಯುತ್ತಿರುವ ಈ ಯಾಗದ ಹೋಮ ಧೂಮ ಕೇರಳದಲ್ಲಿ ಮಾತ್ರವಲ್ಲ ಎಲ್ಲೆಡೆಗೂ ಪಸರಿಸಿ ಹಿಂದೂ ಸಮಾಜ ಎದ್ದು ನಿಲ್ಲಲಿ” ಎಂದು ಸದಾಶಯ ವ್ಯಕ್ತಪಡಿಸಿದರು.
ನಾರಾಯಣ ಹೆಗ್ಡೆ, ಸಂಜೀವ ಶೆಟ್ಟಿ ತಂಗಪ್ಪನ್ ವೈದ್ಯರ್, ನಾರಾಯಣ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋನಪ್ಪ ಭಂಡಾರಿ ಸ್ವಾಗತಿಸಿದರು , ತಾರಾನಾಥ ಕೊಟ್ಟಾರಿ ವಂದನಾರ್ಪಣೆ ಮಾಡಿದರು. ಹಾಗೂ ದಿನಕರ್ ಹೊಸಂಗಡಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಂಜೆ 5 ರಿಂದ ವಿದ್ವಾನ್ ಶ್ರೀ ಹರಿಪ್ರಸಾದ್ ಭಟ್ ರವರ “ರಾಮಾಯಣೇ ಅಶ್ವಮೇಧಯಾಗ” ದ ಕುರಿತು ಪ್ರವಚನ ಹಾಗೂ ರಾತ್ರಿ 8.30 ರಿಂದ ವಿದ್ಯಾ ಭೂಷಣ ಬೆಂಗಳೂರು ಮತ್ತು ಬಳಗದವರಿಂದ ಸುಶ್ರಾವ್ಯ ಭಕ್ತಿ ಸಂಗೀತವನ್ನು ಸೇರಿದ ಭಕ್ತಜನರು ಸವಿದರು.


