ತೊಕ್ಕೊಟ್ಟು: ತೊಕ್ಕೊಟ್ಟುವಿನಲ್ಲಿ 3.5 ವರ್ಷದ ಮಗವಿನ ಮೇಲೆ ಲೈಂಗಿಕ ಶೋಷಣೆ ನಡೆದಿರುವುದು ಅತ್ಯಂತ ಹೀನ ಕೃತ್ಯ. ಇದರಿಂದ ಬುದ್ಧಿವಂತರ ಜಿಲ್ಲೆಗೆ ಅಪಮಾನ ಮಾಡಿದಂತಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಕೃತ್ಯದ ಬಗ್ಗೆ ಮಾತನಾಡದೇ ಇರುವುದು ಅವರ ಕಾಯವೈಖರಿಯನ್ನು ತೋರಿಸುತ್ತದೆ ಎಂದು ಎಸ್ ಎಸ್ ಎಫ್ ರಾಜ್ಯ ಸದಸ್ಯ ಕೆ.ಎಂ.ಸಿದ್ದೀಖ್ ಮೋಂಟುಗೋಳಿ ಹೇಳಿದ್ದಾರೆ.
ಅವರು ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಎಸ್ ಎಸ್ ಎಫ್ ಉಳ್ಳಾಲ ಡಿವಿಷನ್ ವತಿಯಿಂದ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದಬ್ಬಾಳಿಕೆಯ ವಿರುದ್ಧ, ಕೋಮು ದ್ವೇಷದ ವಿಷ ಬೀಜ ಬಿತ್ತುವುದನ್ನು ಖಂಡಿಸಿ, ಮುಗ್ಧ ಹೆಣ್ಣು ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ, ಅಲ್ಪಸಂಖ್ಯಾತರ ಆರಾಧನಾಲಯಗಳ ಮೇಲೆ ನಡೆಯುವ ದಾಳಿಗಳ ವಿರುದ್ಧ ಬುಧವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಎಸ್ ಎಸ್ ಎಫ್ ಜಿಲ್ಲಾ ಅಧ್ಯಕ್ಷ ಯಾಕೂಬ್ ಸಅದಿ ನಾವೂರು, ಎಸ್ ಎಸ್ ಎಫ್ ರಾಜ್ಯ ಸದಸ್ಯರಾದ ಇಸ್ಮಾಯಿಲ್ ಸಅದಿ ಕಿನ್ಯಾ, ಎಸ್ ಎಸ್ ಎಫ್ ಜಿಲ್ಲಾ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮನೆ, ಎಸ್ ಎಸ್ ಎಫ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ರಜ್ವಿ ಕಲ್ಕಟ್ಟ, ಎಸ್ ಎಸ್ ಎಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಉಮರ್ ಅಹ್ಸನಿ, ಇಸ್ಮಾಯಿಲ್ ಮಾಸ್ತರ್, ಅಲ್ತಾಫ್ ಕುಂಪಲ, ರಫೀಕ್ ಕೆ.ಸಿ.ಎಫ್, ಮುನೀರ್ ಸಖಾಫಿ, ಫಾರೂಕ್ ಸಖಾಫಿ, ಜಮಾಲುದ್ದೀನ್ ಸಖಾಫಿ, ಸವiದ್ ಅಹ್ಸನಿ, ಜಾಫರ್ ಯು. ಮೊದಲಾದವರು ಉಪಸ್ಥಿತರಿದ್ದರು.




