UN NETWORKS
ಮಂಗಳೂರು: ಮೋದಿ ಬಳಿಕ ನಾನು ದೇಶದ ಪ್ರಧಾನಿಯಾಗುತ್ತೇನೆ. ಮುಂಬರುವ ಚುನಾವಣೆಯಲ್ಲಿ ಹುಚ್ಚ ವೆಂಕಟ ಸೇನೆ ಸ್ಪರ್ಧಿಸಲಿದೆ ಎಂದು ಬಿಗ್‌ಬಾಸ್ ಖ್ಯಾಾತಿಯ ಹುಚ್ಚ ವೆಂಕಟೇಶ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಹೊಸ ಪಕ್ಷ ಸ್ಥಾಪಿಸಬೇಕಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಆಗಿಲ್ಲ. ನನ್ನ ಹುಚ್ಚ ವೆಂಕಟ್ ಸೇನೆ ಸಕ್ರಿಯವಾಗಿದೆ. ಅದನ್ನು ಮುಂದಿನ ಚುನಾವಣೆ ವೇಳೆಯಾದರೂ ರಾಜಕೀಯ ಪಕ್ಷವನ್ನಾಗಿಸಬೇಕು. ಮೋದಿ ಇನ್ನು ಸ್ವಲ್ಪ ವರ್ಷ ದೇಶದ ಪ್ರಧಾನಿಯಾಗಿರುತ್ತಾರೆ. ಅವರ ನಂತರ ನಾನು ದೇಶದ ಪ್ರಧಾನಿಯಾಗುವೆ ಎಂದರು.


