UN NETWORKS
ಉಳ್ಳಾಲ: ಉಚ್ಚಿಲ ಫುಟ್ ಬಾಲ್ ಫ್ಯಾನ್ಸ್ ನೇತೃತ್ವದಲ್ಲಿ ನಡೆಯುವ ಉಚ್ಚಿಲ ಫುಟ್ಬಾಲ್ ಲೀಗ್ 2018ರ ಸಮಾರೋಪ ಕಾರ್ಯಕ್ರಮದಲ್ಲಿ ಬ್ರದರ್ಸ್ ಉಚ್ಚಿಲ ಇದರ ಮಾಜಿ ತರಬೇತುದಾರರಾದ ನಾಗೇಶ್ ಉಚ್ಚಿಲ್,ಯುವ ಕ್ರೀಡಾಪಟು ಸಫ್ವಾನ್ ಮತ್ತು ಅನಾನ್ ಅವರನ್ನು ಸನ್ಮಾನಿಸಲಾಯಿತು.
ಯು.ಆರ್.ಅಕಾಡೆಮಿ ಆಫ್ ಸೋಕರ್ ಇದರ ಸಂಚಾಲಕ ಉಮೇಶ್ ಉಚ್ಚಿಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆಯಿಂದ ತಂಡ ಶಕ್ತಿ,ಉತ್ತಮ ಆರೋಗ್ಯ,ಮತ್ತು ಶಿಸ್ತನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.

ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಕೋಟೆಕಾರ್,ಮುಹ್ಸಿನ್ ರಹ್ಮಾನ್,ಶಾಬುದ್ದೀನ್,ಝಾಹಿದ್ ಹುಸೈನ್,ಶಾಹುಲ್ ಹಮೀದ್, ಮುಝಪರ್ ಅಹ್ಮದ್, ಅಬ್ಬಾಸ್,ಹಿದಾಯತ್,ನಕೀಬ್,ಇಸ್ಮಾಯಿಲ್ ನಾಗತೋಟ,ಉಚ್ಚಿಲ ಫುಟ್ ಬಾಲ್ ಲೀಗ್ ಇದರ ಸಂಯೋಜಕರಾದ ಆರೀಫ್ ಉಚ್ಚಿಲ್,ಕರೀಮ್ ಉಚ್ಚಿಲ್,ಸಮೀರ್ ಉಚ್ಚಿಲ್,ಸವಾದ್ ಉಚ್ಚಿಲ್ ಉಪಸ್ಥಿತರಿದ್ದರು.ಬಿಬಿ.ಜಿ ಉಚ್ಚಿಲ ಪ್ರಥಮ ಸ್ಥಾನ ಮತ್ತು ಎನ್. ಫ್ಯೂ .ಗೋ .ಎಫ್.ಸಿ ದ್ವಿತೀಯ ಸ್ಥಾನ ಪಡೆಯಿತು.


