UN NETWORKS
ಕೊಣಾಜೆ: ಶ್ರೀ ನಾಗಬ್ರಹ್ಮ ಭಜನಾ ಮಂಡಳಿ(ರಿ) ಪಟ್ಟೋರಿ, ಕೊಣಾಜೆ ಇದರ ಆಶ್ರಯದಲ್ಲಿ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಬಡಾಜೆಬೀಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರ ಮಾರ್ಗದರ್ಶನದಲ್ಲಿ ಫೆ.3ರಿಂದ 10ರವರೆಗೆ ನಡೆಯಲಿರುವ ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬುಧವಾರ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಖಂಡ ಭಜನಾ ಸಮಿತಿಯ ಅಧ್ಯಕ್ಷರಾದ ರಘುರಾಮ ಕಾಜವ ಅವರು, ಪಟ್ಟೋರಿಯ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನವು ಪುರಾತನವಾದ ದೈವಸ್ಥಾನವಾಗಿದ್ದು, ಕಳೆದ ಹಲವಾರು ವರ್ಷದಿಂದ ಇಲ್ಲಿ ಭಜನಾ ಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಾಗೆಯೇ ಈ ಭಾರಿ ಅಖಂಡ ಭಜನಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದ್ದು ಈ ಪುಣ್ಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಪ್ರತಿಯೊಬ್ಬರ ಸಹಕಾರವೂ ಅತ್ಯಗತ್ಯವಾಗಿದ್ದು ಭಕ್ತಿಪೂರ್ವಕವಾಗಿ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಕಾರ್ಯಾಧ್ಯಕ್ಷರಾದ ಕರುಣಾಕರ ಕಾನ ಅವರು ಮಾತನಾಡಿ ಈಗಾಗಲೇ ಅಖಂಡ ಭಜನಾ ಸಪ್ತಾಹದ ಅಂಗವಾಗಿ ವಿವಿದ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೆ ಈ ಭಜನಾ ಸಪ್ತಾಹಕ್ಕೆ ವಿವಿದ ಕಡೆಯ ಭಜನಾ ಮಂಡಳಿಗಳು ಕೂಡಾ ಸಹಕಾರವನ್ನು ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ತಿರುಮಲೇಶ್ವರ ಭಟ್, ಶ್ರೀನಿವಾಸ ಕಾಜವ ಪಟ್ಟೋರಿ, ದಿವಾಕರ ಭಂಡಾರಿ, ಸತ್ಯನಾರಾಯಣ ಭಟ್, ಸುಬ್ಬಣ್ಣ ಭಟ್, ಪ್ರಧಾನ ಸಂಚಾಲಕರಾದ ರಾಮಕೃಷ್ಣ ಪಟ್ಟೋರಿ, ಕೋಶಾಧಿಕಾರಿ ಬಂಟು.ಕೆ.ಕಾಟುಕೋಡಿ, ನಾಗಬ್ರಹ್ಮ ಭಜನಾ ಮಂಡಳಿಯ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಟ್ಟೋರಿ ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನ ಸಂಚಾಲಕ ರಾಮಕೃಷ್ಣ ಪಟ್ಟೋರಿ ಸ್ವಾಗತಿಸಿದರು. ಪ್ರವೀಣ್ ಪಟ್ಟೋರಿ ವಂದಿಸಿದರು. ಸಾಂಸ್ಕøತಿಕ ಕಾರ್ಯದರ್ಶಿ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.


