UN NETWORKS
ಮಂಗಳೂರು: ಮನಪಾ ಸದಸ್ಯ ತಿಲಕ್ ರಾಜ್ ಕೃಷ್ಣಾ ಪುರ ಮೇಲೆ ಶಾಸಕ ಬಿ ಎ ಮೊಯ್ದೀನ್ ಬಾವಾನ ಕುಮ್ಮಕ್ಕಿನಿಂದ ರಾಜ್ಯ ಮಾಜಿ ಮುಖ್ಯಮಂತ್ರಿ ಜೆ ಡಿ ಎಸ್ ನಾಯಕ ಕುಮಾರ ಸ್ವಾಮಿ ಮಾಡಿದ ಆಧಾರರಹಿತ ಗುರು ತರ ಅರೋಪದ ಹಿನ್ನೆಲೆ ಕೃಷ್ಣಾ ಪುರದಲ್ಲಿ ನಾಗರಿಕರು ಬೃಹತ್ ಪ್ರತಿಭಟನೆ ನಡೆಸಿ ತಿಲಕ್ ರಾಜ್ ರವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆ ಯಲ್ಲಿ ಗ್ರಾಮದ ಹಿರಿಯರಾದ ಅಜೀಜ್ ಪ್ಯಾನ್ಸಿ, ಪಿ, ಟಿ, ರೈ ಯಾನೆ ಮಂಜುಕಾವ, ಶರೀಫ್ ಎಂ ಎಸ್, ಲೋಕೇಶ್ ಬೊಳ್ಳಾಜೆ, ಪ್ರಶಾಂತ್ ಮೂಡಾಯಿಕೊಡಿ, ನ್ಯಾಯವಾದಿ ಸದಾಶಿವ ಐತಾಳ್, ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಯಶ್ ಪಾಲ್ ಸಾಲ್ಯಾನ್, ಶಶಿಕಲಾ ಶೆಟ್ಟಿ, ಸದಾನಂದ ಸನಿಲ್ ಮುಂತಾದವರು ಉಪಸ್ಥಿತರಿದ್ದರು.



