Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಓಖಿ ಚಂಡಮಾರುತದಿಂದ ಉಳ್ಳಾಲದಲ್ಲಿ ಹಾನಿ: ಸಚಿವರ ಭೇಟಿ

UllalaVaniBy UllalaVaniDecember 21, 2017No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ಓಖಿ ಚಂಡಾಮಾರುತದ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ಕಂಡುಬಂದ ಸಮುದ್ರದ ಅಲೆಗಳ ನರ್ತನಕ್ಕೆ ಎರಡು ಮನೆಗಳು ಸಮುದ್ರ ಪಾಲಾದರೆ, ರೆಸಾರ್ಟಿಗೆ ನೀರು ನುಗ್ಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಂದಿ ದಿಕ್ಕು ಪಾಲಾಗಿ ಓಡಿ ಪಾರಾಗಿ , ಉಳ್ಳಾಲ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಹಲವು ಮನೆಗಳಿಗೆ ಅಲೆಗಳು ಅಪ್ಪಳಿಸಿ ಹಾನಿಗೀಡಾದ ಘಟನೆ ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಗ್ಗಿನವರೆಗೆ ಸಂಭವಿಸಿದೆ.

ಉಳ್ಳಾಲ ಒಂಭತ್ತುಕೆರೆಯ ಸೀಸೈಡ್ ನಿವಾಸಿ ಫಿಲೋಮಿನಾ ಫೆರ್ನಾಂಡಿಸ್ ಮತ್ತು ಎವರೆಸ್ಟ್ ಅಲ್ಫೋನ್ಸ್ ಎಂಬವರಿಗೆ ಸೇರಿದ 30 ವರ್ಷಗಳ ಹಳೇಯ ಮನೆ ಸಂಪೂರ್ಣವಾಗಿ ಸಮುದ್ರಪಾಲಾಗಿವೆ. ಉಳ್ಳಾಲದ ಮೊಗವೀರಪಟ್ನ ಸಮೀಪದ ಸಮ್ಮರ್ ಸ್ಯಾಂಡ್ ರೆಸಾರ್ಟ್‍ನಲ್ಲಿ ಶನಿವಾರ ತಡರಾತ್ರಿ ನಡೆಯುತ್ತಿದ್ದ ಸಮಾರಂಭಕ್ಕೆ ನೀರು ನುಗ್ಗಿ , ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂದಿ ಆತಂಕಗೊಂಡು ದಿಕ್ಕುಪಾಲಾಗಿ ಓಡಿರುವ ಘಟನೆಯೂ ನಡೆದಿದೆ.

ಚರ್ಚಿನಿಂದ ಬರುವಷ್ಟರಲ್ಲಿ ಮನೆಯೇ ಇರಲಿಲ್ಲ :
ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ವಿಶೇಷ ಪೂಜೆಯ ನಿಮಿತ್ತ ಶನಿವಾರ ಸಂಜೆ ಎರಡು ಮನೆಗಳ ಉರ್ಬನ್ ಫೆರ್ನಾಂಡಿಸ್, ಫಿಲೋಮಿನಾ ಫೆರ್ನಾಂಡಿಸ್ ದಂಪತಿ ಹಾಗೂ ಪುತ್ರ ಮೆಲ್ವಿನ್ ಪೆರ್ನಾಂಡಿಸ್ ಹಾಗೂ ಇನ್ನೊಂದು ಮನೆಯಲ್ಲಿದ್ದ ಎವರೆಸ್ಟ್ ಅಲ್ಫೋನ್ಸ್ ಮತ್ತು ಐರಿನ್ ಅಲ್ಫೋನ್ಸ್ ದಂಪತಿ ಪೂಜೆಗೆಂದು ತೆರಳಿದ್ದರು. ತಡರಾತ್ರಿ 9 ಗಂಟೆಯ ಸುಮಾರಿಗೆ ಮನೆಗೆಂದು ಬರುವಾಗ ಎವರೆಸ್ಟ್ ಅಲ್ಫೋನ್ಸ್ ಅವರ ಮನೆ ಭಾಗಶ: ಸಮುದ್ರಪಾಲಾಗಿದ್ದರೆ, ಉರ್ಬನ್ ಮನೆ ಸಂಪೂರ್ಣ ಸಮುದ್ರಪಾಲಾಗಿತ್ತು. ಮನೆಯೊಳಗಿದ್ದ ಟಿ.ವಿ, ರೆಫ್ರಿಜರೇಟರ್ ಇಲೆಕ್ಟ್ರಾನಿಕ್ ಸಾಮಗ್ರಿಗಳು ನಗ-ನಗದು ಹಾಗೂ ನೂತನ ಮನೆ ನಿರ್ಮಾಣಕ್ಕೆಂದು ಇರಿಸಲಾಗಿದ್ದ ರೂ. 60,000 ನಗದು ಸಂಪೂರ್ಣವಾಗಿ ಸಮುದ್ರಪಾಲಾಗಿದೆ. ಎವರೆಸ್ಟ್ ಅವರ ಮನೆಯಲ್ಲಿದ್ದ ಕೆಲ ಸಾಮಗ್ರಿಗಳು ಮಾತ್ರ ದೊರೆತಿದ್ದರೆ, ಲಕ್ಷಾಂತರ ರೂ ಬೆಲೆಬಾಳುವ ಮನೆ ಹಾಗೂ 50 ರಷ್ಟು ತೆಂಗಿನ ಮರಗಳು ಸಮುದ್ರಪಾಲಾಗಿವೆ. 30 ವರ್ಷಗಳ ಹಿಂದೆ ಮನೆ ನಿರ್ಮಾಣ ಸಂದರ್ಭ ಇದ್ದಂತಹ 50 ಎಕರೆಯಷ್ಟು ಸ್ಥಳದಲ್ಲಿ ಸದ್ಯ ಕೇವಲ 5 ಎಕರೆಯಷ್ಟು ಜಾಗ ಮಾತ್ರ ಉಳಿದಿವೆ ಎಂದು ಮನೆ ಕಳೆದುಕೊಂಡ ಮೆಲ್ವಿನ್ ಪ್ರತಿಕ್ರಿಯಿಸಿದ್ದಾರೆ.

ರೆಸಾರ್ಟಿನಿಂದ ಓಡಿದ ಜನ:
ಶನಿವಾರ ಸಂಜೆಯಿಂದ ಉಳ್ಳಾಲದ ಸಮ್ಮರ್ ಸ್ಯಾಂಡ್ ರೆಸಾರ್ಟಿನಲ್ಲಿ ಮದುವೆಯ 10 ನೇ ವರ್ಷದ ಸಮಾರಂಭವನ್ನು ಆಯೋಜಿಸಲಾಗಿತ್ತು. ರೆಸಾರ್ಟ್ ಹಿಂಭಾಗದಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಹಲವು ಮಂದಿ ಕುಣಿಯುತ್ತಿದ್ದರೆ, ಇನ್ನು ಹಲವರು ಊಟ ಮಾಡುತ್ತಿದ್ದರು. ತಡರಾತ್ರಿ 9.30 ಸುಮಾರಿಗೆ ಏಕಾಏಖಿ ಬೃಹತ್ ಗಾತ್ರದ ಅಲೆಯೊಂದು ರೆಸಾರ್ಟ್‍ಗೆ ಅಪ್ಪಳಿಸಿದ್ದು, ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಂದಿಗೆ ಅಲೆಗಳು ಬಡಿದ ಪರಿಣಾಮ ಗಾಬರಿಗೊಂಡ ಮಂದಿ ದಿಕ್ಕೂಪಾಲಾಗಿ ಓಡಿದ್ದಾರೆ. ಘಟನೆ ಕುರಿತ ದೃಶ್ಯ ರೆಸಾರ್ಟ್‍ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಸಮಾರಂಭಕ್ಕೆ ಪೊಲೀಸರು ಎಚ್ಚರಿಸಿದ್ದರಾದರೂ, ಸಮಾರಂಭದಲ್ಲಿ ಪಾಲ್ಗೊಂಡಿದ್ದವರು ಅದನ್ನು ಪಾಲಿಸಿರಿಲಿಲ್ಲ ಅನ್ನುವುದು ಪೊಲೀಸರ ಅಭಿಪ್ರಾಯವಾಗಿದೆ.

ತಾತ್ಕಾಲಿಕ ವಸತಿ : ಸಮುದ್ರ ಪ್ರಕ್ಷುಬ್ದಗೊಳ್ಳುತ್ತಿದ್ದಂತೆ ಅಪಾಯವನ್ನರಿತ ಮೀನು ತೈಲ ಸಂಸ್ಕರಣಾ ಘಟಕದ ಕಾರ್ಮಿಕರು , ಕೈಕೋ, ಖಿಲಿರಿಯಾನಗರ ನಿವಾಸಿಗಳು ಮನೆಯಿಂದ ಹೊರ ಬಂದು ಸಮುದ್ರ ಕಿನಾರೆಯಲ್ಲಿ ಜಮಾಯಿಸಿದ್ದರು, ಮನೆಗಳು ಹೋಗುವ ಭೀತಿಯಿಂದ ಹಲವರು ಮನೆಯೊಳಗಿದ್ದ ಸೊತ್ತುಗಳನ್ನು ಸಂಬಂಧಿಕರ ಮನೆಗೆ ರಾತ್ರೋರಾತ್ರಿ ಸ್ಥಳಾಂತರಿಸಿದರು. ಸುಮಾರು 100 ಕ್ಕೂ ಅಧಿಕ ಕಾರ್ಮಿಕರಿಗೆ ಉಳ್ಳಾಲ ಮೊಗವೀರ ಸಂಘದ ಮೊಗವೀರಪಟ್ನದಲ್ಲಿರುವ ಗೋಡೌನನ್ನು ಆಶ್ರಯವಾಗಿ ಕಲ್ಪಿಸಿದ್ದಾರೆ. ಉಳ್ಳಾಲ ದರ್ಗಾ ವಠಾರದಲ್ಲಿಯೂ ನಿರಾಶ್ರಿತರಿಗೆ ಆಶ್ರಯವನ್ನು ಕಲ್ಪಿಸಲಾಗಿದ್ದು, ಅವರಿಗೆ ವಸತಿ ಸಹಿತ ಊಟವನ್ನು ದರ್ಗಾ ವತಿಯಿಂದಲೇ ನೀಡಲಾಗಿತ್ತು.

ಸಚಿವ ಖಾದರ್ ಭೇಟಿ : ಅಪಾಯದಂಚಿನಲ್ಲಿರುವ ಮನೆಗಳ ಸಂರಕ್ಷಣೆಗೆ ತಾತ್ಕಾಲಿಕ ಕಾಮಗಾರಿ ಶೀಘ್ರವೇ ನಡೆಸಲಾಗುವುದು ಎಂದು ಸಚಿವ ಖಾದರ್ ಹೇಳಿದ್ದಾರೆ.

ಉಳ್ಳಾಲ ಕೈಕೋ, ಕಿಲಿರಿಯಾನಗರ ಹಾಗೂ ಉಚ್ಚಿಲ ಸಮುದ್ರದ ಅಲೆಗಳಿಂದ ಹಾನಿಗೀಡಾದ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ಮಾತನಾಡಿದರು.

ತಮಿಳುನಾಡು, ಕೇರಳ ಭಾಗ ಸೇರಿದಂತೆ ಕರಾವಳಿ ಭಾಗದಲ್ಲಿ ಓಖಿ ಚಂಡಾಮಾರುತದ ಪರಿಣಾಮ ಉಳ್ಳಾಲ ವ್ಯಾಪ್ತಿಯಲ್ಲಿಯೂ ಹಲವು ಮನೆಗಳಿಗೆ ಹಾಗೂ ಸೊತ್ತುಗಳಿಗೆ ಹಾಣಿಯಾಗಿದೆ. ದೇವರ ದಯೆಯಿಂದ ಕಡಿಮೆ ಪ್ರಮಾಣದಲ್ಲಿ ಆಗಿದೆ. ಫೋರ್ ಕಾಸ್ಟ್ ಮಾಹಿತಿ ಪ್ರಕಾರ ಚಂಡಾಮಾರುತದ ಪ್ರಭಾವ ಇನ್ನಷ್ಟು ಕಡಿಮೆಯಾಗಲಿದೆ ಅನ್ನುವ ಮಾಹಿತಿ ದೊರೆತಿದೆ.

ಉಳ್ಳಾಲ ಭಾಗದಲ್ಲಿ ಆತಂಕಿತರಾದ ಜನತೆಗೆ ಜಿಲ್ಲಾಡಳಿತ ನಿನ್ನೆ ರಾತ್ರಿಯಿಂದ ಧೈರ್ಯ ತುಂಬಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಸ್ಥಳಾಂತರಕ್ಕೆ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ. ತಾತ್ಕಾಲಿಕ ಸ್ಥಳಾಂತರ ಹಾಗೂ ಮನೆ ಕಳೆದುಕೊಂಡಿರುವವರಿಗೆ ಪರಿಹಾರ ನೀಡುವ ಚಿಂತನೆಯನ್ನು ಶೀಘ್ರವೇ ನಡೆಸಲಾಗುವುದು. ಶಾಶ್ವತ ತಡೆಗೋಡೆ ಕಾಮಗಾರಿಯಿಂದಾಗಿ ಉಳ್ಳಾಲ ಭಾಗದಲ್ಲಿನ ಬಹುತೇಕ ಮನೆಗಳು ಉಳಿದಿದೆ ಎಂದರು.

ಈ ಸಂದರ್ಭ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಸಹಾಯಕ ಆಯುಕ್ತ ಕುಮಾರನ್, ತಹಶೀಲ್ದಾರ್ ಗುರುಪ್ರಸಾದ್, ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಸ್ಥಳೀಯ ಜನಪ್ರತಿನಿದಿಗಳು ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ಗಾಬರಿ ಪಡುವ ಅವಶ್ಯಕತೆಯಿಲ್ಲ: ಜಿಲ್ಲಾಧಿಕಾರಿ

ಭಾನುವಾರ ಸಂಜೆಯೊಳಗೆ ಸಮುದ್ರ ಶಾಂತ ಸ್ಥಿತಿಗೆ ತಲುಪುವುದು. ಜನ ಆತಂಕಗೊಳ್ಳಬಹುದಾದ ಅವಶ್ಯಕತೆಯಿಲ್ಲ. ಸಮುದ್ರ ತೀರದ ಜನರನ್ನು ಸ್ಥಳಾಂತರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಸಮುದ್ರ ತೀರದ ಮಂದಿಗೆ ಸ್ಥಳಾಂತರಕ್ಕೆ ವಿನಂತಿ : ತಹಶೀಲ್ದಾರ್
ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಮೊಗವೀರಪಟ್ನ, ಖಿಲಿರಿಯಾನಗರದಲ್ಲಿ ರಾತ್ರಿ 9 ರಿಂದ ತಡರಾತ್ರಿ 3 ಗಂಟೆಯವರೆಗೆ ಅಲೆಗಳ ಅಬ್ಬರ ಹೆಚ್ಚಾಗಿತ್ತು. ತಲಪಾಡಿಯಿಂದ ಉಳ್ಳಾಲದವರೆಗೆ ಸುಮಾರು 80 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಸೋಮೇಶ್ವರ ಭಾಗದಲ್ಲಿ ಸಾಮಾನ್ಯವಾಗಿ ಮಳೆ ಸಂದರ್ಭ ಇರುವ ಕಡಲ್ಕೊರೆತದ ಪ್ರಭಾವ ಪ್ರಕೋಪದಲ್ಲಿದೆ. ಶೀಘ್ರವೇ ಕಲ್ಲುಗಳನ್ನು ಹಾಕುವ ತಾತ್ಕಾಲಿಕ ತಡೆ ಕಾಮಗಾರಿಯನ್ನು ನಡೆಸಲಾಗುವುದು. ವಿಕೋಪದ ಪ್ರಭಾವ ಇಂದು ರಾತ್ರಿ 12 ರವರೆಗೆ ಇರುವುದರಿಂದ ಸಮುದ್ರ ತೀರದವರು ಸ್ಥಳಾಂತರವಾಗಬೇಕಿದೆ ಎಂದು ಎಚ್ಚರಿಸಲಾಗಿದೆ ಎಂದು ತಹಸೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.

ತುರ್ತು ವಿಪತ್ತು ಘಟಕಕ್ಕೆ ಒತ್ತಾಯ:
ಸಮುದ್ರ ತೀರದಲ್ಲಿರುವ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಘಟಕಗಳು ಇಲ್ಲದೆ ಇರುವ ಕುರಿತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ತಡರಾತ್ರಿ ಸಮುದ್ರದ ಅಲೆಗಳು ಮನೆಗಳಿಗೆ ಬಡಿಯಲು ಆರಂಭಿಸುತ್ತಿದ್ದಂತೆ, ಸ್ತಳೀಯರು ಉಳ್ಳಾಲ ನಗರಸಭೆಗೆ ಸಹಾಯಕ್ಕೆ ಮೊರೆ ಹೋದರೂ ನಗರಸಭೆಯಲ್ಲಿ ತುರ್ತು ನಿರ್ವಹಣೆಯ ಘಟಕವಿಲ್ಲದೆ ನಗರಸಭೆ ಅಧಿಕಾರಿಗಳು ಪರದಾಡಬೇಕಾಯಿತು. ನಗರಸಭೆ ಅಧಿಕಾರಿಗಳು ಮಂಗಳೂರಿಗೆ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎರಡು ಅಗ್ನಿ ಶಾಮಕ ದಳದ ವಾಹನ ಸ್ತಳದಲ್ಲಿ ಬೀಡುಬಿಟ್ಟಿತ್ತು. ಆದರೆ ಖಾಸಗಿ ಸಂಸ್ಥೆಯವರು ಸೇರಿಕೊಂಡು ಹಲವು ಮನೆಮಂದಿಯನ್ನು ಸ್ಥಳಾಂತರಿಸುವಲ್ಲಿ ಸಹಕರಿಸಿದರು. ಆದರೆ ಸಮುದ್ರ ತೀರದಲ್ಲಿ ವಿಪತ್ತು ನಿರ್ವಹಣಾ ಘಟಕದ ಅವಶ್ಯಕವಾಗಿ ಬೇಕಿದ್ದು, ಇದು ಕಡಲ್ಕೊರೆತ ಸೇರಿದಂತೆ ವಿವಿಧ ವಿಪತ್ತು ಸಂದರ್ಭ ಕಾರ್ಯಾಚರಿಸಬೇಕಿದೆ ಅನ್ನುವ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದ 23 ಗ್ರಾಮಗಳಿಗೆ ಆಡಳಿತದ ಕಣ್ಣುಮುಚ್ಚಿದ ಆಟವೇ? ಮೂರು ಗ್ರಾಮಗಳಿಗೆ ಒಬ್ಬ VAO — ಜನರ ಸಂಕಷ್ಟಕ್ಕೆ ಹೊಣೆ ಯಾರು?

July 27, 2026

ಗರಿಷ್ಠ ಮೊತ್ತಕ್ಕೆ ಕಾಪಿಕಾಡಿನ ಸಾಯಿ ಪ್ರಸಾದ್ ಖರೀದಿ ಕಾಪಿಕಾಡು ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯ ಪ್ರತಿಭೆಗೆ ರಾಜ್ಯ ಮಟ್ಟದ ಮನ್ನಣೆ

July 25, 2026

ರಸ್ತೆ ಅವ್ಯವಸ್ಥೆ: ಅರ್ಧದಲ್ಲೇ ನಿಂತ ಆಂಬ್ಯುಲೆನ್ಸ್; ಆಟೋದಲ್ಲಿ ವೃದ್ಧೆಯ ಸಾಗಾಟ

July 24, 2026
Leave A Reply

Advertise
ಸಂಪರ್ಕಿಸಿ

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026
suddi

ಕಾರ್ಯಕರ್ತರಿಗೆ ಮೊದಲ ಬಾರಿಗೆ ಸಿಕ್ಕ ಸ್ವಾತಂತ್ರ‍್ಯ: ದಕ್ಷಿಣ ಕನ್ನಡ ಕಾಂಗ್ರೆಸ್‌ನಲ್ಲಿ ಹೊಸ ಅಧ್ಯಕ್ಷರ ನಿರೀಕ್ಷೆ..!

By UllalaVaniJuly 29, 20260

ಕಾಂಗ್ರೆಸ್ ಪಕ್ಷದ “ಸಂಘಟನಾ ಸೃಜನ್ ಅಭಿಯಾನ್” ಅಡಿಯಲ್ಲಿ ಕರ್ನಾಟಕದ ಜಿಲ್ಲಾ ಕಾಂಗ್ರೆಸ್ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ…

ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ಮೇಲೆ ದಿಢೀರ್ ಡ್ರಗ್ ಪರೀಕ್ಷೆ; ಒಬ್ಬ ವಿದ್ಯಾರ್ಥಿ ಪಾಸಿಟಿವ್…!

July 29, 2026

ವೈಭವ್ ಕುರಿತು ಆಡಿದ್ದ ಮಾತುಗಳಿಗೆ ಸ್ಪಷ್ಟನೆ ನೀಡಿದ ಆರ್.ಅಶ್ವಿನ್

July 29, 2026

ಬ್ರಹ್ಮಾವರ: ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶಕ್ಕೆ –3.84 ಲಕ್ಷ ರೂ. ಮೌಲ್ಯದ ಸೊತ್ತು ಜಪ್ತಿ

July 29, 2026
1 2 3 … 2,037 Next
Automatic YouTube Gallery

||PRAKASH KUMPALA|| ಸುಜೀತ್ ಮಾಡೂರು ಬಗ್ಗೆ ಖಾದರ್ ಸರ್ ಹೇಳಿದ್ದಾರೆ..?-ಉದ್ಯಮಿ ಪ್ರಕಾಶ್ ಕುಂಪಲ

ಸಚಿವ ಯು.ಟಿ.ಖಾದರ್ ಹೇಳಿದ್ದಂತೆ ಸುಜೀತ್ ಮಾಡೂರು ಕಾರ್ಯಕ್ರಮಕ್ಕೆ ಬಂದಿದ್ದೇನೆ; ಅವರ ಜನಪರ ಕಾರ್ಯ ಗೊತ್ತಿದೆ

ಮಾಡೂರು ಕೆಸರ್‌ಡೊಂಜಿ ಒಂಜಿ ದಿನ ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಕಾಶ್ ಕುಂಪಲ ಮಾತು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
||PRAKASH KUMPALA|| ಸುಜೀತ್ ಮಾಡೂರು ಬಗ್ಗೆ ಖಾದರ್ ಸರ್ ಹೇಳಿದ್ದಾರೆ..?-ಉದ್ಯಮಿ ಪ್ರಕಾಶ್ ಕುಂಪಲ
Now Playing
||PRAKASH KUMPALA|| ಸುಜೀತ್ ಮಾಡೂರು ಬಗ್ಗೆ ಖಾದರ್ ಸರ್ ಹೇಳಿದ್ದಾರೆ..?-ಉದ್ಯಮಿ ಪ್ರಕಾಶ್ ಕುಂಪಲ
ಸಚಿವ ಯು.ಟಿ.ಖಾದರ್ ಹೇಳಿದ್ದಂತೆ ಸುಜೀತ್ ಮಾಡೂರು ಕಾರ್ಯಕ್ರಮಕ್ಕೆ ಬಂದಿದ್ದೇನೆ; ...
ಸಚಿವ ಯು.ಟಿ.ಖಾದರ್ ಹೇಳಿದ್ದಂತೆ ಸುಜೀತ್ ಮಾಡೂರು ಕಾರ್ಯಕ್ರಮಕ್ಕೆ ಬಂದಿದ್ದೇನೆ; ಅವರ ಜನಪರ ಕಾರ್ಯ ಗೊತ್ತಿದೆ

ಮಾಡೂರು ಕೆಸರ್‌ಡೊಂಜಿ ಒಂಜಿ ದಿನ ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಕಾಶ್ ಕುಂಪಲ ಮಾತು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸಂತೋಷ್ ರೈ ಅವರ 60ನೇ ಹುಟ್ಟುಹಬ್ಬ; ಗಣ್ಯರ ನುಡಿಗಳನ್ನು ಕೇಳಿ ಅಚ್ಚರಿಗೊಂಡ ಜನರು
Now Playing
ಸಂತೋಷ್ ರೈ ಅವರ 60ನೇ ಹುಟ್ಟುಹಬ್ಬ; ಗಣ್ಯರ ನುಡಿಗಳನ್ನು ಕೇಳಿ ಅಚ್ಚರಿಗೊಂಡ ಜನರು
ಸಂತೋಷ್ ರೈ ಅವರ ಆರೋಗ್ಯ ಸುಧಾರಣೆ ಬೇಡಿದ ಪ್ರಾರ್ಥನೆಗಳು ಹಲವು; ಅವರು ಸೋತರೆ ಬಡವರು ...
ಸಂತೋಷ್ ರೈ ಅವರ ಆರೋಗ್ಯ ಸುಧಾರಣೆ ಬೇಡಿದ ಪ್ರಾರ್ಥನೆಗಳು ಹಲವು; ಅವರು ಸೋತರೆ ಬಡವರು ಸೋತಂತೆ ಎಂದ ಚಂದ್ರಹಾಸ್ ಉಳ್ಳಾಲ

ಅಷ್ಟಕ್ಕೂ ಕಾರ್ಯಕ್ರಮದಲ್ಲಿ ಹೇಳಿದ್ದೇನು..? ಆಗಿದ್ದೇನು..?


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version