UN NETWORKS
ಉಳ್ಳಾಲ: ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ ಗುರುವಾರ ಬಾಲಯೋಗಿ ಅಮೃತಾನಂದ ಸ್ವಾಮೀಜಿಯ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಕ್ಷೇತ್ರದಲ್ಲಿ ಶ್ರೀ ಕೃಷ್ಣ ಮೂರ್ತಿಯ ಪ್ರತಿಷ್ಠೆಯೊಂದಿಗೆ ನಡೆದ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯ ಮೊಸರು ಕುಡಿಕೆಯೊಂದಿಗೆ ಸಮಾರೋಪ ಕಂಡಿತು.
ದೇವರ ನಾಮದ ಜಯಕಾರದೊಂದಿಗೆ ಕುಂಪಲದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.
ಕೃಷ್ಣನ ಮೂರ್ತಿಯೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಭಕ್ತರು ದಾರಿಯಲ್ಲಿ ಹಾಕಲಾದ ಕುಡಿಕೆ ಯನ್ನು ಒಡೆದು ಸಂಭ್ರಮಿಸಿದರು.
ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿ ನಡೆದ ವಿವಿಧ ಆಟೋಟ ಸ್ಪರ್ಧೆ ಯನ್ನು ಉದ್ಯಮಿ ದೇವೀಶ್ ಸರಳಾಯ ಕುಂಪಲ ಉದ್ಘಾಟಿಸಿದರು.
ಲಗೋರಿ, ಕಬಡ್ಡಿ, ಚೆಂಡಾಟ ಮತ್ತು ಮಡಿಕೆ ಒಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.




