UN NETWORKS
ಕೊಣಾಜೆ: ಮಂಗಳೂರು ವಿವಿಯಲ್ಲಿ ಸುಮಾರು 4.80ಕೋಟಿ ರೂ. ಅವ್ಯವಹಾರ ನಡೆದ ಕುರಿತಾಗಿ ಸರಕಾರದ ಮಟ್ಟದಲ್ಲಿ ತನಿಖೆ ನಡೆಯುತ್ತಿದ್ದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ರಾಜ್ಯದ ನಂ. 1ವಿವಿ ಎಂದು ಹೊಗಳ್ಪಟ್ಟ ಮಂಗಳೂರು ವಿವಿಯ ಅವ್ಯವಹಾರದ ಕುರಿತಾಗಿ ಸಿದ್ಧರಾಮಯ್ಯನವರ ಸರಕಾರದ ತಂಡವೇ ತನಿಖೆ ನಡೆಸುವ ಹಂತಕ್ಕೆ ತಲುಪಿದ್ದು ಮಂಗಳೂರಿಗರ ಪಾಲಿಗೆ ಬೇಸರ ತರುವಂತದ್ದು, ಅದಕ್ಕೆ ಕಾರಣೀಕರ್ತರಾದ ವಿವಿಯ ಕುಲಪತಿ ಪ್ರೋ . ಕೆ. ಭೈರಪ್ಪ ಮಂಗಳೂರು ವಿವಿಗೆ ಕಳಂಕ ಎಂದು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಅಶೋಕ್ ಕೊಂಚಾಡಿ ಅಭಿಪ್ರಾಯಪಟ್ಟರು.
ಕೆಲಸದಿಂದ ವಜಾಗೊಳಿಸಿದ ಕಾರ್ಮಿಕರನ್ನು ಸೇವೆಗೆ ನಿಯುಕ್ತಿಗೊಳಿಸಬೇಕು, ಕಾರ್ಮಿಕ ವಿರೋಧಿ ಕ್ಯಾನನ್ ಏಜೆನ್ಸಿಯನ್ನು ತಕ್ಷಣ ಬದಲಾಯಿಸಬೇಕು, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕುಲಪತಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಿಐಟಿಯು ಉಳ್ಳಾಲ ವಲಯ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳೂರು ವಿವಿಯ ಆಡಳಿತ ಸೌಧದ ಬಳಿ ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಂಗಳೂರು ವಿವಿಯಲ್ಲಿ ನಡೆದ ಎರಡು ಬೃಹತ್ ಅವ್ಯವಹಾರದ ಕಳಂಕ ಕುಲಪತಿ ತಲೆ ಮೇಲಿದೆ. ವಿವಿಗೆ ತಾತ್ಕಾಲಿಕವಗಿ ಆಯ್ಕೆಯಾದ ಕಾರ್ಮಿಕರ ನೇಮಕಾತಿ ಕುರಿತಾಗಿ ಆಯ್ಕೆಯ ಸಂದರ್ಭ ಯಾವುದೇ ಪತ್ರಿಕೆಯಗಲೀ ಇತರ ಮಾಧ್ಯಮದಲ್ಲಿಪ್ರಕಟಣೆ ನೀಡದೆ ಜಿಲ್ಲೆಯ ಕಾರ್ಮಿಕರಿಗೆ ವಂಚಿಸಿದ್ದಾರೆ. ಜಿಲಲೆಯ ಅದೆಷ್ಟೋ ಸಂಖ್ಯೆಯ ಉದ್ಯೋಗಾಕಾಂಕ್ಷಿ ಯುವಕರಿಗೆ ಅವಕಾಶದಿಂದ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಕುಲಪತಿ ಭೈರಪ್ಪ ಅವರು ತಮಗೆ ಆತ್ಮೀಯರೆನಿಸಿದ ತಮ್ಮ ಊರಿನವರನ್ನು ಮಂಗಳೂರು ವಿವಿಯಲ್ಲಿ ಕೆಲಸಕ್ಕೆಂದು ತಂದಿದ್ದಾರೆ. ಅವರಿಂದ ಕಮಿಷನ್ ಸಿಕ್ಕಿದೆ ಆ ಕೆಲಸ ಮಾಡಲು ಸಾಧ್ಯವಿಲ್ಲ. ಕುಲತಿಗಳ ಈ ಕ್ರಮದಿಂದ ಮಂಗಳೂರಿನ ಅದೆಷ್ಟೋ ಸಂಖ್ಯೆಯ ನಿರುದ್ಯೋಗಿಗಳು ಅರ್ಜಿ ಹಾಕಿದ್ದರೂ ಸ್ಪಂದಿಸಿಲ್ಲ. ಹಾಗೆಯೇ ಕುಲಪತಿಗಳ ಅವ್ಯವಹಾರದ ಕುರಿತು ಯಾರದರೂ ಸ್ವರ ತೆಗೆದರೆ ಅವರಿಗೆ ನೋಟೀಸು ಜಾರಿ ಮಾಡುತ್ತಾರೆ, ಅಥವಾ ವರ್ಗಾವಣೆ ಮಾಡುತ್ತಾರೆ. ಅಷ್ಟಕ್ಕೂ ಅವರಿಗೆ ಅಧಿಕಾರ ಕೊಟ್ಟಿದ್ದು ಮಂಗಳೂರು ವಿವಿಯಲ್ಲಿ ದರ್ಪ ತೋರಿಸಲಿಲಕ್ಕಲ್ಲ. ಪವಿತ್ರವಾದ ವಿದ್ಯಾಮಂದಿರಕ್ಕೆ ಕಳಂಕ ತಂದಿದ್ದಾರೆ. ಹಾಗಾಗಿ ಕುಲಪತಿಗಳು ಮಂಗಳೂರು ವಿವಿಯಲ್ಲಿ ಇಲ್ಲಿರುವುದು ಸೂಕ್ತವಲ್ಲ. ಕಳೆದ ಹಲವು ವರ್ಷಗಳಿಂದ ಮಂಗಳೂರು ವಿವಿಗೆ ಒಳ್ಳೆಯ ಹೆಸರು ಇದ್ದು ಅದು ಹಾಳಾಗುವುದು ಬೇಡ. ಕುಲಪತಿಗಳಿಗೆ ಮಾನ ಮರ್ಯದೆ ನಾಚಿಕೆ ಇದ್ದರೆ ರಾಜೀನಾಮೆ ಕೊಟ್ಟು ತೆರಳಲಿ ಎಂದರು.
ಕ್ಯಾನನ್ ಸಂಸ್ಥೆ ಇಲ್ಲಿನ ಕಾರ್ಮಿಕರಿಗೆ ವಿವಿಧ ಬಗೆಯಲ್ಲಿ ದ್ರೋಹ ಬಗೆದಿದ್ದರೂ ಕುಲಪತಿಗಳಿಗೆ ಆ ಬಗ್ಗೆ ಚಿಂತೆ ಇಲ್ಲ. ಇಎಸೈ, ಭವಿಷ್ಯನಿಧಿ ಯಾವ ಸೌಲಭ್ಯ ಕೊಡದಿದ್ದರೂ ಅದನ್ನು ಪ್ರಶ್ನಿಸುವುದಿಲ್ಲ. ಇದೀಗ ಕಳೆದ ಬಾರಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡು ತಮ್ಮಜ ಹಕ್ಕನ್ನು ಮಂಡಿಸಿದ ಕಾರ್ಮಿಕರ ಹೊಟ್ಟೆಗೆ ಹೊಡೆದಿದ್ದು ಅವರನ್ನು ಕೆಲಸದಿಂದ ತೆಗೆದು ಹಾಕಿರುವುದು ಉದ್ದೇಶ ಪೂರ್ವಕ ಪ್ರತೀಕಾರ ಎಂದರು.
ದಲಿತ ಸ್ವಾಭಿಮಾನಿ ವೇದಿಕೆ ಮಂಗಳೂರು ಅಧ್ಯಕ್ಷ ರಘುವೀರ್ ಸೂಟರ್ಪೇಟೆ ಮಾತನಾಡಿ ವಿವಿಯಲ್ಲಿ ಕನಿಷ್ಠ ವೇತನ ಪಡೆಯುತ್ತಿರುವ “ಡಿ’ ಗ್ರೂಪ್ ನೌಕರರ ಕಷ್ಟ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಅಲ್ಲಿಂದಲೇ ಚರ್ಚಿಸುವ ತಿಂಗಳಿಗೆ ಲಕ್ಷಗಟ್ಟಲೆ ವೇತನ ಪಡೆಯುವ ಕುಲಪತಿಗಳಿಗೆ ಹೇಗೆ ಅರ್ಥವಾಗಲು ಸಾಧ್ಯ. ಕೊಟ್ಟ ಕೆಲಸವನ್ನು ಸಮರ್ಪಕವಾಗಿ ನಿರ್ವಹಸದೆ ಮೈಸೂರು ವಿವಿಯಿಂದ ಹೊರದಬ್ಬಿದ ಕ್ಯಾನನ್ ಸಂಸ್ಥೆಗೆ ಮಾನ ಮಾರ್ಯಾದೆ ಇದೆಯಾ? ಬಡವರ ಹಣ ಕೊಳ್ಳೆಯಲು ಬಂದ ಕ್ಯಾನನ್ ಸಂಸ್ಥೆಯ ಜೊತೆ ಕುಲಪತಿಗಳಿಗೆ ಅಷ್ಟೊಂದು ಮರುಕವೂ ಬೇಡ, ಮಂಗಳೂರಿನ ಜನತೆಗೆ ಕಲಿಸಲು ಬರಬೇಡಿ ಎಂದರು.
ಗುತ್ತಿಗೆ ಆಧಾರದಡಿಯಲ್ಲಿರುವ ಕಾರ್ಮಿಕರಿಗೆ ಇಎಸ್ಐ ವ್ಯವಸ್ಥೆ ಇಲ್ಲ. ಭವಿಷ್ಯನಿಧಿಯೂ ಇಲ್ಲ. ವಿಸಿಗೆ ತೆರಳುವ ದಿನಗಳು ಸಮೀಪಿಸಿದೆ. ದಪ್ಪ ಚರ್ಮದ ಅಧಿಕಾರಿಗಳೇ ಅರ್ಥ ಮಾಡಿಕೊಳ್ಳಿ. ಇಲ್ಲದಿದ್ದರೆ ಜೈಲಿಗೆ ಹೋಗಲು ಸಿದ್ಧರಾಗಿ. ಕುಲಸಚಿವರು ರಾತ್ರಿ ಪಾಳಿಯ ಕೆಲಸಗಾರರ ಕಾರ್ಯವೈಖರಿ ಬಗ್ಗೆ ತನಿಖೆ ಮಾಡ್ತಾರೆ, ಕೆಲಸದ ದಕ್ಷತೆ ಮೇಲೆ ಕಣ್ಣಿದ್ದಾರೆ, ಆದರೆ ಸಂಬಳ ಸಿಗದೆ ಹೈರಾಣಾದ ಕಾರ್ಮಿಕರು ಬಳಲುತ್ತಿದ್ದರೆ ಅವರು ಹಣ ಕೊಳ್ಳೆ ಹೊಡೆಯುವುದನ್ನು ನಿಮಗೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಯಾಕೆ? ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳಿ. ಇಲ್ಲದಿದ್ದರೆ ಹೋರಾಟದ ಮೂಲಕವೇ ಉತ್ತರಸುತ್ತೇವೆ. ಅನುಭವಿಸಲು ಸಿದ್ಧರಾಗಿ ಎಂದರು.
ಒಂದು ಪ್ರತಿಷ್ಠಿತ ಸಂಸ್ಥೆಯ ಹೆಸರು ಹಾಳುಮಾಡಲು ಮುಂದಾದರೆ ನವು ಸಹಿಸೆವು. ಮಂಗಳೂರು ವಿವಿಯಲ್ಲಿ ಕುಲಪತಿಗಳು ಹಾಗೂ ಕುಲಸಚಿವರು ಎರಡು ಕೊಳೆ. ಅದು ತೊಲಗಿದರೆ ಮಾತ್ರ ಮಂಗಳೂರು ವಿವಿ ಉದ್ಧಾರವಾಗಲು ಸಾಧ್ಯ. ದೇವಸ್ಥಾನದಂತಿರುವ ವಿಶ್ವವಿದ್ಯಾಲಯಕ್ಕೆ ಕುಲಪತಿಗಳು ಕಪ್ಪು ಚುಕ್ಕೆ ತಂದಿದ್ದಾರೆ, ಕಳಂಕಿತ ಸಂಸ್ಥೆಯನ್ನು ತೊಲಗಿಸಲು ಮಂಗಳೂರು ಜನತೆ ಸಿದ್ದರಾಗಿದ್ದಾರೆ ಎಂದು ನುಡಿದರು.
ಸ್ಥಳೀಯ ಕಾರ್ಮಿಕ ನಾಯಕ ಸಂಕಪ್ಪ ಮೆರವಣಿಗೆ ಉದ್ಘಾಟಿಸಿದರು. ಸಿಐಟಿಯುನ ಪದ್ಮಾವತಿ ಶೆಟ್ಟಿ, ನಿರ್ಮಲ್ ಕುಮಾರ್, ಇಬ್ರಾಹಿಂ, ಜಯಂತ್ ನಾಯ್ಕ್, ಯಶೋಧಾ ಹೊಸಬೆಟ್ಟು, ಗಣೇಶ್ ಸೂಟರ್ಪೇಟೆ, ಬಾಬು ಪಿಲಾರ್, ಟಿ. ಈಶ್ವರ ಸೂಟರ್ಪೇಟೆ ಹಾಗೂ ಆನಂದ ಬೆಳ್ಳಾರೆ ಉಸ್ಥಿತರಿದ್ದರು.





