UN NETWORKS
ನರಿಂಗಾನ: ಕಪ್ಪು ಕಲ್ಲು ಸಾಗಾಟ ನಡೆಸುತ್ತಿದ್ದ ಲಾರಿಯೊಂದು ತೋಡಿಗೆ ಮಗುಚಿಬಿದ್ದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನದ ಸರ್ಕುಡೇಲು ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಸರ್ಕುಡೇಲು ಕಲ್ಲಿನ ಕೋರೆಯಿಂದ ಕಪ್ಪು ಕಲ್ಲು ಸಾಗಾಟ ನಡೆಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಅಲ್ಲೇ ಸಮೀಪದಲ್ಲೇ ತೋಡಿಗೆ ಉರುಳಿ ವಾಲಿ ನಿಂತಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಗಾಯಗಳಿಲ್ಲದೆ ಪಾರಾಗಿದ್ದಾರೆ.


