UN NETWORKS
ಉಳ್ಳಾಲ: ಹಿಂದು ಯುವಕರಿಬ್ಬರ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಐವರನ್ನು ಎಸಿಪಿ ನೇತೃತ್ವದ ವಿಶೇಷ ಪೊಲೀಸ್ ತಂಡ, ಉಳ್ಳಾಲ ಪೊಲೀಸರ ದಸಹಕಾರದೊಂ ದಿಗೆ ಬಂಧಿಸಿದೆ.
ಮದನಿನಗರ ನಿವಾಸಿಗಳಾದ ತಸ್ಲೀಂ(24), ಅಂಬ್ಲಮೊಗರು ನೌಷಾದ್ (32), ರಮೀಜ್ (20), ಖುರ್ಷಿದ್ (20), ನವಾಝ್ (24) ಬಂಧಿತರು.
ಜೂ.18, 2017 ರಂದು ಆರೋಪಿಗಳು ಕುತ್ತಾರು ಸಮೀಪ ಗಂಗಾಧರ್ ಎಂಬವರ ತಲೆಗೆ ಸೋಡಾ ಬಾಟಲಿಯಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದರು. ಆದರೆ ಆರೋಪಿಗಳಿಂದ ತಪ್ಪಿಸಿದ್ದ ಗಂಗಾಧರ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಆರೋಪಿಗಳು ಎ.26, ,2016 ರಂದು ಉಳ್ಳಾಲದ ತಂಡ ದಿಂದ ಹತ್ಯೆಗೀಡಾದ ಪಿಲಾರು ನಿವಾಸಿ ಸಫ್ವಾನ್ (22) ಕೊಲೆಗೆ ಪ್ರತೀಕಾರವಾಗಿ , ಇಬ್ಬರು ಹಿಂದು ಯುವಕರ ಹತ್ಯೆಗೆ ಸಂಚು ರೂಪಿಸಿದ್ದರು. ಅಂಬ್ಲಮೊಗರು ಮತ್ತು ಕುತ್ತಾರು ಮೂಲದ ಇಬ್ಬರು ಹಿಂದು ಯುವಕರ ಹತ್ಯೆಗೆ ಸಂಚು ರೂಪಿಸಿದ್ದರೂ, ಪೊಲೀಸರ ಪತ್ತೆಯಿಂದ ಅದು ಅಸಾಧ್ಯವಾಗಿದೆ.
ರಾಣಿಪುರ ಸಮೀಪ ಆರ್ ಎಸ್ ಎಸ್ ಕಾರ್ಯಕರ್ತ ರಾಮಮೋಹನ್ ಮತ್ತು ಚಿರಂಜೀವಿ ಎಂಬವರನ್ನು ತಲವಾರಿನಿಂದ ಕಡಿದು ಹತ್ಯೆಗೆ ಯತ್ನಿಸಲಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ. ಉಳ್ಳಾಲ ಪೊಲೀಸರ ವಶದಲ್ಲಿರುವ ಆರೋ ಪಿಗಳ ವಿಚಾರಣೆ ಮುಂದುವರಿದಿದೆ.


