UN NETWORKS
ಉಳ್ಳಾಲ: ಆಯಾಯ ಮಸೀದಿ ಮದರಸಗಳಲ್ಲಿ ಕಾರ್ಯ ನಿರ್ವಹಿಸುವ ಉಸ್ತಾದರಿಗೆ ಮತ್ತು ಖತೀಬರಿಗೆ ಅವರ ವಾಸ್ತವ್ಯ ಪ್ರದೇಶದಲ್ಲಿ ವ್ಯಾಪಾರ ವ್ಯವಹಾರ ನಡೆಸಲು ಪೂರಕವಾಗುವಂತೆ ಶ್ರಮಶಕ್ತಿ ಯೋಜನೆಯಡಿ ದೊಡ್ಡ ಮಟ್ಟದ ಹಣ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಪ್ರಸ್ತಾವನೆ ಸರಕಾರಕ್ಕೆ ನೀಡಿದ್ದು ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು.
ಅವರು ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕ ದ.ಕ ಜಿಲ್ಲಾ ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಎನ್.ಎಸ್ ಕರೀಂರವರಿಗೆ ಮಂಜನಾಡಿ
ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೇಕ್ಸ್‍ನಲ್ಲಿ ಅಯೋಜಿಸಿದ ಅಭಿನಂದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಖತೀಬರು ಮತ್ತು ಉಸ್ತಾದರಿಗೆ ಹೊರಗಿನ ಪ್ರದೇಶದಲ್ಲಿ ಹೋಗಿ ಕೆಲಸ ಅಥವಾ ವ್ಯಾಪಾರ ನಡೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಿದ್ದು, ಫಲಾನುಭವಿಗಳನ್ನು ಗುರುತಿಸುವ ಕಾರ್ಯ ವಕ್ಪ್ ಮಂಡಳಿಗಳು ಮಾಡಬೇಕು ಎಂದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಅಲ್ಪ ಸಂಖ್ಯಾತ ಸಮುದಾಯಕ್ಕೆ ಮಹತ್ವ ನೀಡುತ್ತಿದ್ದು,ಬಜೆಟ್‍ನಲ್ಲಿ 2700 ಕೋಟಿ ಹೆಚ್ಚು ಮಾಡಿದೆ. ಅದೇ ರೀತಿ ಖತೀಬರಿಗೆ ಮತ್ತು ಉಸ್ತಾದರಿಗೆ ಧನ ಸಹಾಯವನ್ನು ಹೆಚ್ಚಿಸಿದ್ದು, ಇಲ್ಲಿ ಕಲಿಯುವ ಉಲಮಾಗಳ ಬಗ್ಗೆ ಗಮನ ಹರಿಸುವಂತೆ ಬೇಡಿಕೆ ಬಂದಿದ್ದು, ಈ ಮೌಲವಿಗಳು ಸಲಹೆ ಸೂಚನೆ ನೀಡಿದರೆ ಒಂದು ಉತ್ತಮ ಯೋಜನೆಯನ್ನು ರೂಪಿಸಲಾಗುವುದು ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ ಸಮುದಾಯಕ್ಕೆ ನೋವು ಬರದ ರೀತಿಯಲ್ಲಿ ಕಾರ್ಯ ನಿರ್ವಹಿಸಿದವರು ಎನ್‍ಎಸ್ ಕರೀಂ ಅವರಿಗೆ ಅಲ್ಪ ಸಂಖ್ಯಾತ ಸಮುದಾಯದ ದೊಡ್ಡ ಜವಾಬ್ದಾರಿಯನ್ನು ಪಕ್ಷ ನೀಡಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ನಾಲ್ವರು ಅಲ್ಪ ಸಂಖ್ಯಾತ ಶಾಸಕರಿದ್ದು, ಅವರನ್ನು ಮುಂದಿನ ದಿನಗಳಲ್ಲಿ ಗೆಲ್ಲಿಸುವ ಮಹತ್ತರ ಜವಾಬ್ದಾರಿಯಿದೆ ಎಂದ ಅವರು ಮಂಗಳೂರು ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಬಳಿಕ ಆತ್ಯಂತ ಮಹತ್ವ ಇರುವುದು ಎನ್‍ಎಸ್ ಕರೀಂ ಅವರಿಗೆ ಎಂದರು.
ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕ ದ.ಕ ಜಿಲ್ಲಾ ಅಧ್ಯಕ್ಷ ಎನ್‍ಎಸ್ ಕರೀಂ ಮಾತನಾಡಿ ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸುವ ನಿಟಿಟಿನಲ್ಲಿ ಎಲ್ಲರ ಸಹಕಾರ ಅಗತ್ಯ. ಧಾರ್ಮಿಕ ಗುರುಗಳ ಮಾರ್ಗದರ್ಶನದಲ್ಲಿ ಪಕ್ಷದ ಹಿರಿಯರ, ಕಿರಿಯರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಭರವಸೆಯನ್ನು ಹೊಂದಿದ್ದೇನೆ ಎಂದರು.
ಅಲ್-ಮದೀನಾ ವಿದ್ಯಾಸಂಸ್ಥೆಯ ಶಿಲ್ಪಿ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂಗಳೂರು ತಾ.ಪಂ ಅಧ್ಯಕ್ಷ ಮೊಹಮ್ಮದ್ ಮೋನು ಮಾತನಾಡಿ, ದ.ಕ ಕೃಷಿಕ ಸಮಾಜದ ಅಧ್ಯಕ್ಷ ಎ.ಎ ಹೈದರ್ ಪಾರ್ತಿಪ್ಪಾಡಿ, ನರಿಂಗಾನ ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್ ಮೀನಾಕೋಡಿ, ಸದಸ್ಯರಾದ ಮುರಳಿದರ್ ಶೆಟ್ಟಿ ಮೋರ್ಲ, ಅಬ್ದುಲ್ ರಹ್ಮಾನ್ ಚಂದಹಿತ್ಲು, ಅಬ್ದುಲ್ ಲತೀಫ್ ಕಾಪಿಕಾಡ್, ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮೊಹಮ್ಮದ್ ಅಸೈ, ಸದಸ್ಯ ಕುಂಞ ಬಾವ ಹಾಜಿ ಕಲ್ಕಟ್ಟ, ಹಝ್ರತ್ ಸೈಯದ್ ಮದನಿ ಉರ್ದ ಶಾಲೆ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ, ಎಸ್‍ವೈಎಸ್ ಮಂಜನಾಡಿ ಸೆಂಟರ್ ಕಾರ್ಯಕರ್ತ ಮೊಹಮೂದ್ ಹಾಜಿ ಕಂಡಿಗ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಪ್ರಿನ್ಸಿಪಾಲ್ ಮುನೀರ್ ಅಹ್ಮದ್ ಸಖಾಫಿ ಕಾರ್ಯಕ್ರಮ ನಿರೂಪಿಸದರು.








