UN NETWORKS
ಉಳ್ಳಾಲ: ದೇಶಕ್ಕಾಗಿ ಬದುಕೋಣ, ದೇಶದ ಸತ್ಪ್ರಜೆಯಾಗಿ ಬದುಕಿ ದೇಶ ಸೇವೆ ಮಾಡೋಣ, ಇತಿಹಾಸದಿಂದ ಸ್ಪೂರ್ತಿ ಪಡೆದು, ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳೋಣ, ಕ್ರಾಂತಿಕಾರಿಗಳಲ್ಲಿ ಒಬ್ಬರಾದ ವಾಸುದೇವ ಬಲವಂತ ಪಡ್ಕೆಯಂತಹ ಆದರ್ಶ ವ್ಯಕ್ತಿತ್ವವನ್ನು ನಮ್ಮದಾಗಿಸೋಣ ಎಂದು ಬೆಂಗಳೂರಿನ ಐಬಿಯಂ ಸಾಫ್ಟ್ವೇರ್ ಕಂಪನಿಯ ಉದ್ಯೋಗಿ ರವಿತೇಜ ಶಾಸ್ತ್ರಿ ಹೇಳಿದರು.
ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಜರುಗಿದ 71ನೇಯ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಸಾರುವ ವೀರ್ ಸಾವರ್ಕರ್ ರವರ ಜೀವನದ ಕುರಿತಾದ ನಾಟಕ, ದೇಶಭಕ್ತಿಗೀತೆಗಳು ಪ್ರದರ್ಶಿಸಲ್ಪಟ್ಟವು. ವಿದ್ಯಾರ್ಥಿನಿ ಮಾನಸಿ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಶಿಕ್ಷಕಿ ಶ್ರೀಮತಿ ವರ್ಷ ಅಥಿತಿಗಳನ್ನು ಸ್ವಾಗತಿಸಿದರು ಮತ್ತು ವಿದ್ಯಾರ್ಥಿ ರುದ್ರ ಪಾಟೀಲ್ ವಂದಿಸಿದರು.





