ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕಿನ್ಯ:ತುಳುನಾಡಿನ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕೆಲಸ ಸಂಘಟನೆಗಳ ಕರ್ತವ್ಯ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಅಲ್ಲಲ್ಲಿ ಪರಂಪರೆಯನ್ನು ಬಿಂಬಿಸುವ ಕೂಟವನ್ನು ಆಯೋಜಿಸುವ ಮೂಲಕ ಮಹತ್ವದ ಪಾತ್ರ ವಹಿಸಬೇಕು ಎಂದು ಬಾಬು ಶಾಸ್ತಾ ಕಿನ್ಯ ಅಭಿಪ್ರಾಯ ಪಟ್ಟರು.
ಅವರು ಶ್ರೀ ಮಹಮ್ಮಾಯಿ ಮಾತೃ ಮಂಡಳಿ ಕಿನ್ಯ ಬೆಳರಿಂಗೆ ಇದರ ದ್ವಿತೀಯ ವರ್ಷದ ಆಟಿದ ಕೂಟ ಗೌಜಿ ಗಮ್ಮತ್ತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಲ್ಕಟ್ಟ ಶಾಲೆ ಇದರ ಶಿಕ್ಷಕಿ ನಂದನ ಅಧ್ಯಕತೆ ವಹಿಸಿದ್ದರು.ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಭಂಡಾರಮನೆಯ ಪಾತ್ರಿಗಳಾದ ರವಿ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಿನ್ಯ ಭಂಡಾರಮನೆಯ ಪಾತ್ರಿಗಳಾದ ಯಾದವ ಪೂಜಾರಿ, ಕಿಶೋರ್ ಪೂಜಾರಿ, ಶಿಕ್ಷಕ ಪ್ರಭಾಕರ ಜೋಗಿ, ವಾಮನಪೂಜಾರಿ ಕಿನ್ಯ, ಜಯಂತ ಪೂಜಾರಿ, ನಾರಾಯಣ ಪೂಜಾರಿ, ಸದಾಶಿವ ಬಟ್ಯಡ್ಕ, ಹರೀಶ್ ಕಿನ್ಯ, ಸ್ವರ್ಣಲತಾ ಕಿನ್ಯ ಉಪಸ್ಥಿತರಿದ್ದರು.
ರವಿ ಕಿನ್ಯ ಸ್ವಾಗತಿಸಿದರು. ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.



