ಉಳ್ಳಾಲ ನ್ಯೂಸ್ ನೆಟ್ವರ್ಕ್
ಕೊಣಾಜೆ: ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಂಗಳೂರು ವಿ.ವಿ ಮುಖ್ಯ ಗೇಟಿನ ಎದುರುಗಡೆ ಮಂಗಳವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ಪ್ರತೀಕ್ ಮಾತನಾಡಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಾಗಿ ಆತ್ಮಹತ್ಯೆ ನಡೆಸುತ್ತಿದ್ದಾರೆ. ಕ್ರೀಡಾಪಟುಗಳ ಜೀವಕ್ಕೆ ಬೆಲೆ ಇಲ್ಲದಿದ್ದಲ್ಲಿ ಕಾವ್ಯಾ ಸಾವು ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಬೇಸರದ ಸಂಗತಿಯಾಗಿದೆ. ಇಡೀ ಘಟನೆಯನ್ನು ಖಂಡಿಸುತ್ತೇವೆ. ವಿದ್ಯಾರ್ಥಿನಿ ಹೊರಗೆ, ಒಳಗೆ ಹೋಗುವ ಸಿಸಿಟಿವಿ ದೃಶ್ಯವನ್ನು ತೋರಿಸುತ್ತಾರೆ. ಆದರೆ ಮೃತದೇಹ ಕೊಂಡೊಯ್ಯುವ ದೃಶ್ಯವನ್ನು ತೋರಿಸುತ್ತಿಲ್ಲ. ಹಿಂದೆಯೂ ಹಲವು ವಿದ್ಯಾರ್ಥಿನಿಯರು ಆತ್ಮಹತ್ಯೆಗೈದಿದ್ದಾರೆ. ಬಲವಾದ ಕಾರಣಗಳಿಂದಲೇ ವಿದ್ಯಾರ್ಥಿನಿ ನಿಯಲದಲ್ಲೇಢ ಆತ್ಮಹತ್ಯೆಗಳು ನಡೆಯುತ್ತಿವೆ. ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರಿಸುವ ಕಾಲೇಜಿನಲ್ಲೇ ವಿದ್ಯಾರ್ಥಿಗಳಿಗೆ ಬೆಲೆ ಇಲ್ಲದಿರುವುದು ಖಂಡನೀಯ. ಶೀಘ್ರವೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕಿದೆ.
ವಿದ್ಯಾರ್ಥಿ ಸಿರಾಜ್ ಮಾತನಾಡಿ ಕಾವ್ಯಾ ಸಾವಿನ ಬಗ್ಗೆ ಸಂಶಯವಿದೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕಿದ್ದು, ಜಿಲ್ಲೆಯಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆ ಕೊಡಬೇಕಿದೆ. ಶಿಕ್ಷಣ ಸಂಸ್ಥೆಯ ವಿರುದ್ಧದ ಪ್ರತಿಭಟನೆಯಲ್ಲ, ಕಾವ್ಯಾಳ ಹೆತ್ತವರಿಗೆ ನ್ಯಾಂiÀi ಸಿಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಎಂದರು.
ಹರೀಶ್ ಎಂ ಮಾತನಾಡಿ ಸಾಮಾಜಿಕ ನ್ಯಾಯ ಸಿಗುವ ದೃಷ್ಟಿಕೋನದಿಂದ ಎಲ್ಲರೂ ಸೇರಿದ್ದೇವೆ. ಸಂಸ್ಥೆಯ, ವ್ಯಕ್ತಿಯ ವಿರುದ್ಧದ ಪ್ರತಿಭಟನೆಯಲ್ಲ. ಅಂಬೇಡ್ಕರ್ ಬರೆದ ಪುಸ್ತಕದಲ್ಲಿ ಪ್ರತಿಭಟನೆಯ ಹಕ್ಕುಗಳ ಬಗ್ಗೆ ಉಲ್ಲೇಖವಿದೆ. ಅದರ ಜಾತಿ ಪ್ರಜ್ಞೆ, ಧರ್ಮ ಪ್ರಜ್ಞೆ ದೂರವಿಟ್ಟು ಪ್ರತಿಭಟನೆ ನಡೆಸಿ ಸಾಮಾಜಿಕ ನ್ಯಾಯ ಸಿಗುವಂತೆ ಹೋರಾಡುತ್ತಿದ್ದೇವೆ ಎಂದರು.
ವಿದ್ಯಾರ್ಥಿನಿ ಶುಭದಾ ಮಾತನಾಡಿ ಆತ್ಮಹತ್ಯೆ ಕಾರಣವನ್ನು ಬಹಿರಂಗಪಡಿಸಬೇಕಿದೆ. ಅದಕ್ಕಾಗಿ ಸಿಬಿಐಗೆ ಪ್ರಕರಣವನ್ನು ಒಪ್ಪಿಸಬೇಕಿದೆ ಎಂದರು.
ಕೊಣಾಜೆ ಮಂಗಳೂರು ವಿ.ವಿ ಮುಖ್ಯ ಗೇಟಿನಲ್ಲಿ ನಡೆದ ಪ್ರತಿಭಟನೆಗೆ ಮುನ್ನ ವಿದ್ಯಾರ್ಥಿಗಳು ವಿ.ವಿ ಆವರಣದೊಳಗೆ ಪ್ರತಿಭಟನಾ ಜಾಥಾ ನಡೆಸಿದರು.

















































