ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಕಾರ ಹಾಗೂ ಖಾಸಗಿ ಸಂಸ್ಥೆಗಳಿಂದ ನೀಡುವ ವಿದ್ಯಾರ್ಥಿ ವೇತನದ ಅರ್ಜಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಕಾರ್ಡು ವಿತರಿಸುವ ಮೂಲಕ ದಯಾಮಾತೆ ಪಾನೀರು ಚರ್ಚ್ ವಿನಲ್ಲಿ ಹೊಸ ಆಂದೋಲನ ರೂಪಿಸಲಾಗಿದೆ ಎಂದು ಕೆಥೋಲಿಕ್ ಸಭಾ ಅಧ್ಯಕ್ಷರಾದ ಆಲ್ವಿನ್ ಡಿಸೋಜ ಹೇಳಿದ್ದಾರೆ.
ಅವರು ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಪಾನೀರು ಘಟಕದ ವತಿಯಿಂದ ಭಾನುವಾರ ಪಾನೀರು ದಯಾಮಾತೆ ಚರ್ಚ್ ವಠಾರದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿನ ಸೇರ್ಪಡೆಗೆ ನೋಂದಾವಣೆ ಆಂದೋಲನವನ್ನು ಮಾಡಲಾಗಿದೆ. ಈ ಮೂಲಕ 60 ವಿದ್ಯಾರ್ಥಿಗಳು ಈ ಬಾರಿಯ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಪಸಂಖ್ಯಾತ ಇಲಾಖೆ, ಜಿಂದಾಲ್, ರಿಲಾಯನ್ಸ್ ವತಿಯಿಂದ ನೀಡಲ್ಪಡುವ ವಿದ್ಯಾಥಿವೇತನದ ಅರ್ಜಿಗಳನ್ನು ವಿತರಿಸಲಾಗಿದೆ. ಇದರ ಜತೆಗೆ ವಿವಿಧ ಆಸ್ಪತ್ರೆಗಳ ಆರೋಗ್ಯ ಕಾರ್ಡನ್ನು ವಿತರಿಸಲಾಗಿದ್ದು, ಈ ಮೂಲಕ ಚರ್ಚ್ ವ್ಯಾಪ್ತಿಯ ಜನರಿಗೆ ಅನುಕೂಲವಾಗುವಂತೆ ಚರ್ಚ್ ವತಿಯಿಂದ ಹೊಸ ಆಂದೋಲನವನ್ನು ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚ್ ಧರ್ಮಗುರು ಫಾ.ಡೆನಿಸ್ ಸುವಾರಿಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನಿಸ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ಉರ್ಬಾನ್ ಫೆರಾವೋ, , ಪ್ರತಿಭಾ ಪುರಸ್ಕಾರ ಸಮಿತಿ ಸಂಚಾಲಕ ಫಿಲಿಪ್ ಡಿಸೋಜ ಮುಖ್ಯ ಅತಿಥಿಗಳಾಗಿದ್ದರು.
ಸರಿಟಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು. ಕೆಥೋಲಿಕ್ ಸಭಾ ಕಾರ್ಯದರ್ಶಿ ರೇಷ್ಮಾ ಸಂತ ಸೇಟ್ ವಂದಿಸಿದರು.













