ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ :ಉಳ್ಳಾಲ ದರ್ಗಾ ಆಡಳಿತ ಸಮಿತಿ ಸದಸ್ಯ, ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಬಾವ ಫಕೀರ್ ಸಾಹೇಬ್(85) ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.
ಮೂವತ್ತು ವರ್ಷಗಳಿಗಿಂತಲೂ ಸುಧೀರ್ಘ ಅವಧಿಯಲ್ಲಿ ಮೇಲಂಗಡಿ ಮಸೀದಿ ಅಧ್ಯಕ್ಷರಾಗಿ, 60 ವರ್ಷಗಳಿಂತಲೂ ಅಧಿಕ ಕಾಲ ದರ್ಗಾ ಸಮಿತಿ ಹಾಗೂ ಚಾರಿಟೇಬಲ್ ಟ್ರಸ್ಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ದರ್ಗಾ ಅಧೀನದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಸತತ ಪರಿಶ್ರಮ ವಹಿಸಿದ್ದರು. ಅವರ ನಿಧನಕ್ಕೆ ಮೇಲಂಗಡಿ ಮಸೀದಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಸಂತಾಪ ಸೂಚಿಸಿದ್ದಾರೆ.


