ಉಳ್ಳಾಲ ನ್ಯೂಸ್ ನೆಟ್ವರ್ಕ್
ಬಿ.ಸಿ.ರೋಡ್: ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಶವ ಯಾತ್ರೆ ಮೆಲ್ಕಾರ್ ತಲುಪುತ್ತಿದ್ದಂತೆ ಕೈಕಂಬದಲ್ಲಿ ಕಲ್ಲುತೂರಾಟ ನಡೆದಿದ್ದು, ಯುವಕನೊರ್ವನ ಗಂಭೀರ ಗಾಯಗೊಂಡ ಘಟನೆ ನಡೆದಿದೆ.




ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಶವ ಯಾತ್ರೆ ಮೆಲ್ಕಾರ್ ತಲುಪುತ್ತಿದ್ದಂತೆ ಕೈಕಂಬ ಸಮೀಪ ಹಲವು ವಾಹನಗಳಿಗೆ ಕಲ್ಲುತೂರಾಟ ನಡೆದಿದ್ದು, ಘಟನೆಯಿಂದಾಗಿ ಯುವಕನೊರ್ವ ಗಂಭೀರ ಗಾಯಗೊಂಡು ಬಿ.ಸಿ.ರೋಡ್, ಮೆಲ್ಕಾರ್ ಪ್ರದೇಶದಾದ್ಯಂತ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ. ಗಲಭೆಗೆ ಸಂಬಂಧಿಸಿ ಹಲವರ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.
ಶರತ್ ಪಾರ್ಥೀವ ಶರೀರದ ಯಾತ್ರೆ ಬಿ.ಸಿ.ರೋಡ್ ತಲುಪುತ್ತಿದ್ದಂತೆಯೇ ದುಷ್ಕರ್ಮಿಗಳ ತಂಡವೊಂದು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿತ್ತು. ಇದರಿಂದ ಇತ್ತಂಡಗಳ ನಡುವೆ ಕಲ್ಲು ತೂರಾಟ ನಡೆದು, ಹಲವು ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳ ಗಾಜುಗಳು ಪುಡಿಯಾಗಿವೆ. ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು.
ಕಲ್ಲು ತೂರಾಟ ನಡೆದ ಜಾಗದಿಂದ 5 ಮಂದಿಯನ್ನು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಕಟ್ಟಡದ ಒಳಗಿನಿಂದ ಅವಿತುಕೊಂಡಿರುವ ಇನ್ನಷ್ಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ವಗ್ರಾದ ತಲುಪಿದ ಪಾರ್ಥಿವ ಶರೀರ:
ದುಷ್ಕರ್ಮಿಗಳಿಂದ ಹತ್ಯೆಕ್ಕೀಡಾಗಿರುವ ಶರತ್ ಮಡಿವಾಳ ಪಾರ್ಥಿವ ಶರೀರ ಅವರ ಹುಟ್ಟೂರಾಗಿರುವ ಕೆಂದೂರಿಗೆ ತಲುಪಿದ್ದು, ಅಂತಿಮ ದರ್ಶನಕ್ಕಾಗಿ ಸಾವಿರಾರು ಜನರು ಜಮಾಯಿಸಿದ್ದಾರೆ.
















