ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಅಂತಿಮಯಾತ್ರೆ ಇದೀಗ ಎ.ಜೆ.ಆಸ್ಪತ್ರೆಯಿಂದ ಹೊರಟಿದ್ದು, ಗಣ್ಯರ ಸಮೇತ ಸಾವಿರಾರು ಕಾರ್ಯಕರ್ತರ ಜಮಾವಣೆಯೊಂದಿಗೆ ಅಂತಿಮ ಯಾತ್ರೆ ಪೊಲೀಸ್ ಬಿಗಿಬಂದೋಬಸ್ತಿನೊಂದಿಗೆ ಆರಂಭವಾಗಿದೆ.
ನಂತೂರು, ಪಡೀಲ್, ಅಡ್ಯಾರ್, ಫರಂಗಿಪೇಟೆ ಮಾರ್ಗವಾಗಿ ತೆರಳಲಿರುವ ಅಂತಿಮ ಯಾತ್ರೆಯಲ್ಲಿ ಬಿಜೆಪಿಯ ರಾಜ್ಯ ಹಾಗೂ ಜಿಲ್ಲಾ ನಾಯಕರು ಪಾಲ್ಗೊಂಡಿದ್ದಾರೆ.
ನಿನ್ನೆ ಸಾವು: ಎರಡು ದಿನಗಳ ಹಿಂದೆ ಅಪರಿಚಿತರ ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಶರತ್ (28) ಮೃತಪಟ್ಟಿದ್ದಾರೆ .ಅವರು ಮೃತಪಟ್ಟಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಮೊನ್ನೆ ಸಂಜೆಯಿಂದ ಹರಿಯಲು ಆರಂಭಿಸಿತ್ತು. ಶರತ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಅಸ್ಪತ್ರೆಯಾಗಲಿ ಅಥವಾ ಶರತ್ ಅವರ ಕುಟುಂಬದವರಾಗಲಿ ಈ ಸುದ್ದಿಯನ್ನು ಖಚಿತ ಪಡಿಸಿರಲಿಲ್ಲ. ಅದರೆ ನಿನ್ನೆ ರಾತ್ರಿ 8.30ರ ಸುಮಾರಿಗೆ ಅವರು ಮೃತಪಟ್ಟಿರುವುದನ್ನು ಆಸ್ಪತ್ರೆ ಮೂಲಗಳು ಖಚಿತ ಪಡಿಸಿವೆ.
ಹಲ್ಲೆಯಾದ ಸ್ಥಳದಿಂದ ತುಂಬೆ ಆಸ್ಫತ್ರೆಗೆ ಶರತ್ ಅವರನ್ನು ಕರೆದುಕೊಂಡು ಹೋಗುವಾಗಲೇ ಅವರ ಜೀವ ಹಾರಿ ಹೋಗಿತ್ತು ಎಂಬ ಆರೋಪವು ಈಗ ಕೇಳಿ ಬಂದಿದೆ.ಇದೀಗ ಮನೆಯ ಆಧಾರ ಸ್ತಂಭವೇ ಕಳಚಿ ಬಿದ್ದಂತಾಗಿದೆ.ಜುಲೈ 4ರಂದು ರಾತ್ರಿ ಅವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.
ಶರತ್ ಮೂಲತಃ ಕೃಷಿ ಕುಟುಂಬದವರಾಗಿದ್ದು ಕುಟುಂಬಕ್ಕೆ ಒಬ್ಬನೇ ಮಗನಾಗಿ ಆಧಾರಸ್ತಂಭವಾಗಿದ್ದರು. ಕೃಷಿಯಿಂದ ಬರುವ ಆದಾಯ ಸಾಲುತ್ತಿಲ್ಲ ಎನ್ನುವ ಉದ್ದೇಶದಿಂದ ಬಿ.ಸಿ.ರೋಡಿನಲ್ಲಿ ಲಾಂಡ್ರಿ ಅಂಗಡಿಯನ್ನು ತೆರೆದಿದ್ದರು. ಆರ್ ಎಸ್ ಎಸ್ ನ ಕಾರ್ಯಕರ್ತನಾಗಿದ್ದು, ಸಂಘದ ಚಟುವಟಿಕೆಗಳಲ್ಲಿ ನಿರಂತರ ಭಾಗಿಯಾಗುತ್ತಿದ್ದರು ಹೀಗಾಗಿಯೇ ಶರತ್ ಅವರನ್ನು ಗುರಿಯಾಗಿಸಿ ಕೊಲೆ ಯತ್ನ ನಡೆಸಲಾಗಿತ್ತು.
ಘಟನೆಯ ಹಿನ್ನಲೆ : ಬಿ.ಸಿ.ರೋಡಿನಲ್ಲಿ ಮಂಗಳವಾರ ರಾತ್ರಿ 9.30 ರ ಸಮಯದಲ್ಲಿ ಶರತ್ ಅಂಗಡಿಯತ್ತ ತೆರಳಿ ಒಬ್ಬನೇ ಇರುವ ವೇಳೆ ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಇರಿದು ಪರಾರಿಯಾಗಿದ್ದರು. ಈ ದಾಳಿಗೆ ಒಳಗಾಗಿದ್ದ ಶರತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಮತಾಂಧ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಶರತ್ ಬದುಕಿದ್ದೆ ಹಾಗೆ. ಸ್ವಂತಕ್ಕೆ ಕಮ್ಮಿ ಸಮಾಜಕ್ಕೆ ಹೆಚ್ಚು ಸಂಘದ ವಿಚಾರದಾರೆಯನ್ನು ಅನೂಚೂನಾವಾಗಿ ಪಾಲಿಸುತ್ತಿದ್ದವರು ಶರತ್. ಸಾಮಾಜಿಕ ಕಾರ್ಯಗಳಿಗಾಗಿ ತನ್ನ ದುಡಿಮೆಯ ಒಂದು ಭಾಗವನ್ನು ಎತ್ತಿಡುತ್ತಿದ್ದರು.
ಆದರೆ ಕೇವಲ 28 ನೇ ವಯಸ್ಸಿನಲ್ಲಿ ಬದುಕು ಮುಗಿಸಿ ಹೋಗುತ್ತಿರುವಾಗ ತನ್ನ ಅಗಾಂಗಳನ್ನು ದಾನ ಮಾಡಿ ಅಪರೂಪದ ಅದರ್ಶವನ್ನು ಶರತ್ ಮತ್ತು ಅವರ ಕುಟುಂಬ ಮೆರೆದಿದೆ. ಎದೆ ಎತ್ತರಕ್ಕೆ ಬೆಳೆದು , ಮನೆಯ ಅಧ ರಸ್ಥಂಭವೇ ಕುಸಿದು ಬಿದ್ದ ಈ ಸಂದರ್ಭದಲ್ಲೂ ಅಗಾಂಗ ದಾನ ಮಾಡುವ ಶರತ್ ತಂದೆ ತಾಯಿಯ ನಿರ್ಧಾರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಅತೀವ ದುಃಖದ ಸಂದರ್ಭದಲ್ಲೂ ಮನೆಯವರು ಗಟ್ಟಿ ಧೈರ್ಯವು ಸಮಾಜಕ್ಕೆ ಮಾದರಿಯಾಗಿದೆ.











