ಕೊಣಾಜೆ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶ್ವಮಂಗಳ ಸಭಾ ಭವನದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ| ಕೆ. ಕೃಷ್ಣ ಶರ್ಮ, ಉಪನ್ಯಾಸಕರಾದ ತಿರುಮಲೇಶ್ವರ ಪ್ರಸಾದ್ ಇವರು ಯೋಗಾಸನಗಳ ಮಹತ್ವ ಮತ್ತು ಪರಿಣಾಮದ ಬಗ್ಗೆ ವಿವರಿಸಿದರು.
ಶಾಲಾ ಮಕ್ಕಳಿಗೆ ಕೆಲವು ಸರಳ ಆಸನಗಳನ್ನು ಹೇಳಿ ಕೊಡಲಾಯಿತು. ಶಾಲಾ ಸಹ ಶಿಕ್ಷಕಿಯಾದ ಮಾನಸರವರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶ್ವಮಂಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಬಿ. ಇಸ್ಮಾಯಿಲ್, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಶರೀನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮ ಶೆಟ್ಟಿ, ಪ್ರೌಢ ಶಾಲಾ ಮುಖ್ಯಸ್ಥೆ ಪ್ರಿಯ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಶೋಭಾವತಿ, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಅಂತು ಡಿ’ಸೋಜರವರು ಉಪಸ್ಥಿತರಿದ್ದರು. ಶಾಲಾ ನಾಯಕಿ ಧನ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.


