ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಚ್ಚಿಲ:ಕರ್ನಾಟಕ-ಕೇರಳ ಗಡಿಭಾಗದ ಉಚ್ಚಿಲ ಸಮುದ್ರ ತೀರದಲ್ಲಿನ ನದಿ ತೀರದಿಂದ ದೋಣಿ ಮೂಲಕ ಅವ್ಯಾಹತವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಗುರುವಾರ ಸ್ಥಳೀಯ ಯುವಕರ ತಂಡವೊಂದು ವಿರೋಧ ವ್ಯಕ್ತಪಡಿಸಿದರೂ ಮರಳು ಸಾಗಾಟವನ್ನು ತಂಡ ನಿಲ್ಲಿಸಿಲ್ಲ.
ಉಚ್ಚಿಲ ಎಂಡ್ ಪಾಯಿಂಟ್‍ನಲ್ಲಿರುವ ನದಿ ತಟದಿಂದ ಐದು ದೋಣಿಗಳ ಮೂಲಕ ಅವ್ಯಾಹತವಾಗಿ ಮರಳು ಸಾಗಾಟ ನಡೆಸಲಾಗುತ್ತಿದೆ. 25 ಮಂದಿಯ ತಂಡ ಮರಳುಗಾರಿಕೆ ನಡೆಸುತ್ತಿರುವುದನ್ನು ಸ್ಥಳೀಯ ಯುವಕರ ತಂಡ ಸಂಜೆ ವೇಳೆ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ದೋಣಿಯಲ್ಲಿದ್ದವರು ತೆಂಗಿನಮರದ ಬುಡಕ್ಕೆ ಮರಳು ಹಾಕಲೆಂದು ಕೊಂಡೊಯ್ಯುತ್ತಿರುವುದಾಗಿ ತಿಳಿಸಿ, ಮತ್ತೆ ಸಾಗಾಟಕ್ಕೆ ಮುಂದಾಗಿದ್ದಾರೆ. ನದಿ ತಟದಿಂದ ಮೀ.ಅಂತರ ದೂರದಲ್ಲಿ ಮರಳು ದಾಸ್ತಾನಿರಿಸಿ ಬಳಿಕ ಕೇರಳ ಕಡೆಗೆ ಸಾಗಾಟ ನಡೆಸಲಾಗುತ್ತಿದೆ ಅನ್ನುವುದು ಸ್ಥಳೀಯರ ಆರೋಪವಾಗಿದೆ.
ಸೋಮೇಶ್ವರ ಗ್ರಾಮ ಪಂಚಾಯಿತಿ ಈಗಾಗಲೇ ಎರಡು ಬಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಆದರೆ ಮರಳು ಸಾಗಾಟ ಕಂಡುಬಂದಿರಲಿಲ್ಲ. ಈ ಕುರಿತ ಲಿಖಿತ ದೂರೂ ದಾಖಲಾಗಿಲ್ಲ. ಗಡಿಪ್ರದೇಶವಾಗಿದ್ದು, ತಲಪಾಡಿ ಗ್ರಾಮ ಪಂಚಾಯಿತಿಗೆ ಸೇರಿದ್ದಾಗಿರುತ್ತದೆ. ಸೋಮೇಶ್ವರ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಎಲ್ಲಾ ರೀತಿಯ ಕಡಿವಾಣ ಹಾಕಲಾಗಿದೆ.
ರಾಜೇಶ್ ಉಚ್ಚಿಲ್
ಅಧ್ಯಕ್ಷರು
ಸೋಮೇಶ್ವರ ಗ್ರಾಮ ಪಂಚಾಯಿತಿ


