ಉಳ್ಳಾಲ ನ್ಯೂಸ್ ನೆಟ್ ವರ್ಕ್
ತಲಪಾಡಿ: ವಾಟಾಳ್ ನಾಗರಾಜ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ವಿವಿಧ ಬೇಡಿಕೆಗಳ ಜೊತೆಗೆ ಪ್ರಮುಖವಾಗಿ ಗಡಿನಾಡು ಕನ್ನಡಿಗರ ಮೇಲಿನ ದೌರ್ಜನ್ಯ ಹಾಗೂ ಕಾಸರಗೋಡಿನಲ್ಲಿ ಮಲಯಾಳಂ ಕಡ್ಡಾಯ ನೀತಿಯನ್ನು ಖಂಡಿಸಿ ಸೋಮವಾರದಂದು ಕರೆ ನೀಡಿದ ಕರ್ನಾಟಕ ಬಂದ್ ಕೇರಳ ಹಾಗೂ ಕರ್ನಾಟಕದ ಗಡಿನಾಡು ತಲಪಾಡಿಯಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ.
ಕೇರಳ ಕರ್ನಾಟಕ ಗಡಿಪ್ರದೇಶವಾಗಿರುವ ತಲಪಾಡಿಯಲ್ಲಿ ಬಂದ್ ಗೆ ಯಾವುದೇ ರೀತಿಯ ಬೆಂಬಲ ಸಿಗದೇ ಎಂದಿನಂತೆ ಜನಜೀವನ ಹಾಗೂ ಬಸ್ಸು ಸಂಚಾರ ಯಥಾಸ್ಥಿತಿಯಲ್ಲಿ ಇದ್ದುದರಿಂದ ಗಡಿನಾಡಿನಲ್ಲಿ ಬಂದ್ ಸಂಪೂರ್ಣ ವಿಫಲವಾಗಿದೆ.
ಜೂ.8ರಂದು ಗಡಿನಾಡಿನ ಜನರಿಗೆ ವಾಟಾಳ್ ನಾಗರಾಜ್ ಹಾಗೂ ಪ್ರವೀಣ್ ಶೆಟ್ಟಿ ಬಣ ಗಡುನಾಡು ತಲಪಾಡಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿತ್ತು. ಇದೇ ವೇಳೆ ಪ್ರಮುಖ ಬೇಡಿಕೆಯಾಗಿ ಕೇರಳ ಸರಕಾರದ ಗಡಿನಾಡು ಕಾಸರಗೋಡಿನಲ್ಲಿ ಕಡ್ಡಾಯ ಮಲಯಾಳಂ ಭಾಷಾ ನೀತಿಯನ್ನು ಖಂಡಿಸಿ ಜೂ. 12 ರಂದು ಬಂದ್ ಗೆ ಘೋಷಣೆಯನ್ನು ನೀಡಿದ್ದರು. ಆದರೆ ಪ್ರತಿಭಟನೆಯ ವೇಳೆ ಗಡಿನಾಡಿನ ಜನರ ಉಪಸ್ಥಿತಿ ಹೆಚ್ಚು ಕಂಡುಬಂದಿರಲಿಲ್ಲ. ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಸಕ್ರಿಯವಾಗಿರುವುದರಿಂದ ಸ್ಥಳೀಯರ ಅನುಪಸ್ಥಿತಿ ಎದ್ದುಕಾಣುತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಸೋಮವಾರದಂದು ಕರ್ನಾಟಕ ಬಂದ್‍ನ ವೇಳೆ ಗಡಿನಾಡಲ್ಲಿ ಜನರು ಬೆಂಬ¯ ಸೂಚಿಸದೆ ವಿಫಲಗೊಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.



