ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ:ಸ್ಕೂಟಿಗೆ ಏಸ್ ಟೆಂಪೋ ಡಿಕ್ಕಿ ಹೊಡೆದು ತಾಯಿ ಮಗ ಗಂಬೀರ ಗಾಯಗೊಂಡಿರುವ ಘಟನೆ ರಾ.ಹೆ. 66ರ ಕಾಪಿಕಾಡು ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ.
ಉರ್ವಸ್ಟೋರ್ ನಿವಾಸಿ ರೋಹಿತ್ ಮತ್ತವರ ತಾಯಿ ಗಂಭೀರವಾಗಿ ಗಾಯಗೊಂಡವರು. ಇಬ್ಬರು ಬೈಕಿನಲ್ಲಿ ಕುಂಪಲ ದಲ್ಲಿ ನಡೆದಿದ್ದ ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಸುಕಿನ ಜಾವ ಮಂಗಳೂರಿನ ಮನೆ ಕಡೆಗೆ ತೆರಳುವ ಸಂದರ್ಭ ಅದೇ ಧಿಕ್ಕಿನಲ್ಲಿ ಸಾಗುತ್ತಿದ್ದ ಏಸ್ ವಾಹನ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ಉಳ್ಳಾಲ ಪೊಲೀಸರು ಸಹಕರಿಸಿದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ








