ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ನಿಟ್ಟೆ ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಮಿಡ್ ವೈಫ್ ದಿನಾಚರಣೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ಫಾದರ್ ಮುಲ್ಲರ್ ಆಸ್ಪತ್ರೆಯ ಡೆಪ್ಯುಟಿ ಚೀಫ್ ನರ್ಸಿಂಗ್ ಅಧಿಕಾರಿ ಡ್ಯಾರಿಲ್ ಅರಾನ್ಹಾ ಇವರು ಮಿಡ್ ವೈಫ್ ತಾಯಂದಿರು, ಕುಟುಂಬಸ್ಥರು, ಜೀವನದ ಪಾಲುದಾರರು ಈ ವಿಷಯದ ಬಗ್ಗೆ ವಿವರಿಸಿದರು. ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲೆ ಪ್ರೊ| ಸಬಿತಾ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಪ್ರೊ| ಶೈನಿ ಪೌಲ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಸುನಂದಾ ಬಿ. ವಂದಿಸಿದರು.


