ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಉಳ್ಳಾಲ ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಪದವಿಪೂರ್ವ ಕಾಲೇಜಿಗೆ ಶೇ. 85 ಪಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ 107 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ದಿವ್ಯಾ ವಿ.ಸಿ.(581), ವಾಣಿಜ್ಯ ವಿಭಾಗದ ಸ್ನೇಹ ದಲಬಂಜನ್ (572), ಪೂಜಾ ಲಕ್ಷ್ಮಿ(558), ರಮ್ಯಕೃಷ್ಣ (533), ಜೋಯ್ಲಿಟಾ ಸಂಡ್ರಿಯಾ ಡಿ.ಸೋಜಾ (530), ಕಲಾ ವಿಭಾಗದ ಜಯಲಕ್ಷ್ಮೀ ಪರಶುರಾಮ ಮುಳಗುಂದ (509) ಅಂಕಗಳನ್ನು ಪಡೆದಿದ್ದಾರೆ.


