ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಯೇನೆಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಆಶ್ರಯದಲ್ಲಿ ಯೇನೆಪೋಯ ನರ್ಸಿಂಗ್ ಕಾಲೇಜಿನ ಮಕ್ಕಳ ಆರೋಗ್ಯ ಶುಶ್ರೂಷಾ ವಿಭಾಗವು “ತಾಯಿ ಮತ್ತು ಅವರ ನವಜಾತ ಶಿಶುವಿನ ಆರೈಕೆಯಲ್ಲಿ-ಶುಶ್ರೂಷಕರ ಪಾತ್ರ ಎಂಬ ವಿಷಯದ ಬಗ್ಗೆ ಒಂದು ದಿನದ ಪ್ರಾದೇಶಿಕ ಕಾರ್ಯಾಗಾರ ಆಕ್ಟ್ಸ್ ಯೆನ್ ಆಡಿಟೋರಿಯಂನಲ್ಲಿ ನಡೆಯಿತು.
ಮಕ್ಕಳ ಆರೋಗ್ಯ ನರ್ಸಿಂಗ್ ಇಲಾಖೆಯ ಪ್ರೊಫೆಸರ್ ಉಮಾರಾಣಿ ಅವರು ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಿದರು.
ಮುಖ್ಯ ಅತಿಥಿಯಾಗಿ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ಪ್ರೊ ಎಚ್.ಓ.ಡಿ. ಡಾ. ಪ್ರೆಮಾ ಡಿ ಕುನ್ಹ ಅವರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪ್ರೆಮಾ ಡಿ ಕುನ್ಹಾ ” ತಾಯಿ ಮತ್ತು ಮಗುವಿನ ಸುರಕ್ಷತೆ ಹಾಗೂ ಆರೋಗ್ಯಕ್ಕೆ ಜನನ ಯೋಜನೆ” , ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ನ ಸಹಾಯಕ.ಪ್ರೊಫೆಸರ್, ಯಶೋಧ ಸತೀಶ್ “ನವಜಾತ ಶಿಶುಗಳ ಬೆಳವಣಿಗೆಯ ಆರೈಕೆ: ಸವಾಲುಗಳು ಮತ್ತು ಅತ್ಯುತ್ತಮ ಅಭ್ಯಾಸಗಳ ಹಂಚಿಕೆ , ಯೇನೆಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮುಖ್ಯ ನರ್ಸಿಂಗ್ ಅಧಿಕಾರಿ ಐಲೀನ್ ಮಥಿಯಾಸ್ “ಕಾರ್ಮಿಕರ ಕೊಠಡಿಯಲ್ಲಿ ಶುಶ್ರೂಷಕಿಯರ ಶ್ರಮ: ಅನುಭವದ ಹಂಚಿಕೆ “, ಯೇನೆಪೋಯ ಮೆಡಿಕಲ್ ಕಾಲೇಜ್ ನ ಮಕ್ಕಳ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಮಿಥುನ್ ಎಚ್.ಕೆ “ನವಜಾತ ಶಿಶುವಿನ ಆರೈಕೆ” ಎಂಬ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿವಿಧ ವಿದ್ಯಾಸಂಸ್ಥೆಗಳಿಂದ ಒಟ್ಟು 100 ಪ್ರತಿನಿಧಿಗಳು ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು.
ಎಂಟು ಪ್ರತಿನಿಧಿಗಳು ಭಿತ್ತಿಚಿತ್ರವನ್ನು ಪ್ರಸ್ತುತಪಡಿಸಿದರು.ಯೇನೆಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ. ವಿಜಯಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು, ಯೇನೆಪೆಪೋಯ ವಿಶ್ವವಿದ್ಯಾಲಯದ ಕುಲಸಚಿವರು ಡಾ. ಜಿ. ಶ್ರೀಕುಮಾರ್ ಮೆನನ್ ಉಪಸ್ಥಿತರಿದ್ದರು.
ಯೇನೆಪೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾ ಪಿ. ಶೆಟ್ಟಿ ಸ್ವಾಗತಿಸಿದರು. ಮಕ್ಕಳ ಆರೋಗ್ಯ ನರ್ಸಿಂಗ್ ಇಲಾಖೆಯ ಸಹಾಯಕ ಪ್ರೊಫೆಸರ್ ಶ್ರೀಮತಿ ಪ್ರಿಯಾ ರೇಶ್ಮಾ, ವಂದಿಸಿದರು.


