ಉಳ್ಳಾಲ ನ್ಯೂಸ್ ನೆಟ್‍ವರ್ಕ್
ನರಿಂಗಾನ: ಹಲವು ವರ್ಷಗಳಿಂದ ಹೂಳೆತ್ತದೆ ಜನರಿಗೆ ಉಪಯೋಗವಾಗದ ರೀತಿಯಲ್ಲಿ ನರಿಂಗಾನ ಗ್ರಾಮದ ಅಗಳ್ದಬೆಟ್ಟುವಿನಲ್ಲಿದ್ದ ಕೆರೆ ಅಭಿವೃದ್ಧಿಗೆ ರೂ. 7 ಲಕ್ಷ ಅನುದಾನ ಕೊಡುವುದಾಗಿ ಕುರ್ನಾಡು ಕ್ಷೇತ್ರ ಜಿಲ್ಲಾ ಪಂಚಾಯಿತಿ ಸದಸ್ಯ ಮಮತಾ.ಡಿ.ಎಸ್ ಗಟ್ಟಿ ಹೇಳಿದ್ದಾರೆ.
ನರಿಂಗಾನದ ಅಗಳ್ದಬೆಟ್ಟುವಿನಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಿದ್ದು, ಈ ನಿಟ್ಟಿನಲ್ಲಿ ಸ್ಥಳದಲ್ಲಿರುವ ಕೆರೆಯನ್ನು ಅಭಿವೃದ್ಧಿ ನಡೆಸಿ ಗ್ರಾಮದ ಜನರಿಗೆ ಪೂರೈಕೆ ಮಾಡುವ ಉದ್ದೇಶದಿಂದ ಭೇಟಿ ನೀಡಿ ಅನುದಾನ ಒದಗಿಸುವ ಭರವಸೆ ನೀಡಿದರು.
ಅಭಿವೃದ್ಧಿಗೆ ಅನುದಾನ ಸಾಲದೇ ಇದ್ದಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಹೆಚ್ಚುವರಿ ಅನುದಾನ ಪೂರೈಸುವುದಾಗಿ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ತಿಳಿಸಿದರು.
ಈ ಸಂದರ್ಭ ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಉಪಾಧ್ಯಕ್ಷ ಮಿನಾಕ್ಷಿ, ಅಭಿವೃದ್ದಿ ಅಧಿಕಾರಿ ನಳಿನಿ ಎ.ಕೆ, ನರಿಂಗಾನ ಪಂ. ಸದಸ್ಯರಾದ ಮುರಳೀಧರ ಶೆಟ್ಟಿ, ಅಬ್ದುಲ್ ರಹಿಮಾನ್ ಚಂದಹಿತ್ಲು, ಫಯಾಝ್, ಬೇಬಿ,ಸಜಾತ, ಅಬ್ದುಲ್ ಲತೀಫ್ ಕಾಫಿಕಾಡ್, ಅಬ್ದುಲ್ ಖಾದರ್ ಸ್ಥಳೀಯರಾದ ಇಬ್ರಾಹೀಂ, ಪಿಯೂಸ್ ಡಿ’ಸೋಜಾ, ಜೋಗಿ ಡಿ’ಸೋಜಾ, ಜರ್ನಾಧನ್ ಉಪಸ್ಥಿತರಿದ್ದರು.





