ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೋಟೆಕಾರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶು ಆಸ್ಪತ್ರೆ ಕೋಟೆಕಾರು ಇದರ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಕೋಟೆಕಾರು ಬೀರಿಯ ಪಶು ಆಸ್ಪತ್ರೆ ಆವರಣದಲ್ಲಿ ಗುರುವಾರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ನೆರವೇರಿಸಿದರು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ಮಲಾರ್, ಸೋಮೇಶ್ವರ ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ ಸದಸ್ಯರುಗಳಾದ ರವಿಶಂಕರ್, ಸುರೇಖಾ ಚಂದ್ರಹಾಸ್, ಸಿದ್ಧೀಖ್ ತಲಪಾಡಿ, ಪಶುಪಾಲನಾ ಹಾಗೂ ಪಶುವೈದ್ಯ ಸೇವೆಗಳ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ , ಕೆ.ಆರ್.ಐ.ಡಿ.ಎಲ್ ಇದರ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಸ್.ಪಾಟೀಲ್, ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಸೋಮೇಶ್ವರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ರವೀಂದ್ರನಾಥ ಶೆಟ್ಟಿ ದೊಡ್ಡಮನೆ, ಮುಖ್ಯ ಅತಿಥಿಗಳಾಗಿದ್ದರು.
ಮೋಹನ್ ಮೆಂಡನ್, ಗುತ್ತಿಗೆದಾರರಾದ ಪಿಯೂಷ್ ಮೊಂತೇರೊ, ಗಣೇಶ್ ಶೆಟ್ಟಿ ತಲಪಾಡಿ, ಕೋಟೆಕಾರು ಪ.ಪಂ. ಸದಸ್ಯರುಗಳಾದ ಹಮೀದ್ ಹಸನ್ ಮಾಡೂರು, ಮೊಯ್ದೀನ್ ಬಾವ, ಪುಷ್ಠಿ ಮಹಮ್ಮದ್, ಲ್ಯಾನ್ಸಿ ಡಿಸೋಜ, ರೇಣುಕಾ ಶೆಟ್ಟಿ, ತಲಪಾಡಿ ಪಂ, ಸದಸ್ಯ ಅಬ್ದುಲ್ ಖಾದರ್ ತಲಪಾಡಿ, ಶ್ರೀ ಕೊಂಡಾಣ ಪಿಲಿಚಾಮುಂಡಿ, ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ ಅಧ್ಯಕ್ಷ ಕೃಷ್ಣ ಶೆಟ್ಟಿ, ಆಲ್ವಿನ್ ಡಿಸೋಜಾ, ಮೋಹನ್ ಮುದ್ಯ, ಸುರೇಶ್ ಭಟ್ನಗರ, ದೀಪಕ್ ಪೂಜಾರಿ ಪಶುಪಾಲನಾ ಇಲಾಖೆ ಹಾಗೂ ಸಿಬ್ಬಂದಿ ವರ್ಗದ ಸಹಾಯಕ ನಿರ್ದೇಶಕ ಡಾ. ರಾಜಣ್ಣ ಎಂ.ಎನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ತಾ.ಪಂ ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರ್ವಹಿಸಿದರು.















