ಉಳ್ಳಾಲ್ ನ್ಯೂಸ್ ನೆಟ್ವರ್ಕ್
ಉಳ್ಳಾಲ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದೊಂದಿಗೆ ಲಂಡನ್ನ ಪ್ಲೇಮೌತ್ ಸ್ಕೂಲ್ ಆಫ್ ಬಯಾಲಾಜಿಕಲ್ ಆ್ಯಂಡ್ ಮರೈನ್ ಸೈನ್ಸ್ ವಿಶ್ವವಿದ್ಯಾನಿಲಯದೊಂದಿಗೆ ಹವಾಮಾನ ಬದಲಾವಣೆಯ ಪರಿಣಾಮ ಸಮುದ್ರ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಅದರ ಪರಿಣಾಮದ ವಿಚಾರದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಒಡಂಬಡಿಕೆಗೆ ಸಹಿ ಹಾಕಿದೆ.
ನಿಟ್ಟೆ ವಿಶ್ವವಿದ್ಯಾನಿಲಯದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವು ಪ್ಲೇಮೌತ್ ಸ್ಕೂಲ್ ಆಫ್ ಬಯೋಲಾಜಿಕಲ್ ಎಂಡ್ ಮೆರೈನ್ ಸೈನ್ಸ್ ವಿವಿಯೊಂದಿಗೆ ಯುನೆಸ್ಕೋ ಸೂಕ್ಷ್ಮಜೀವಿ ಸಂಪನ್ಮೂಲ ಕೇಂದ್ರದ ಭಾಗವಾಗಿ ಜಂಟಿ ಸಂಶೋಧನಾ ಅವಕಾಶಗಳು, ಹಾಗೂ ಬೋಧನೆ ಮತ್ತು ಎರಡೂ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಪ್ರಯೋಜನವನ್ನು ಈ ಒಡಂಬಡಿಕೆಯಿಂದ ಪಡೆಯಬಹುದು.
ಸ್ಕೂಲ್ ಆಫ್ ಯೂನಿವರ್ಸಿಟಿ ಪ್ಲೆಮೌತ್ ಬಯಲಾಜಿಕಲ್ ಮತ್ತು ಮರೈನ್ ಸೈನ್ಸ್ನ ಮುಖ್ಯಸ್ಥ ಡಾ| ಮೈರಿ ನೈಟ್, ಮಾತನಾಡಿ ಹವಾಮಾನ ಬದಲಾವಣೆಯು ನಮ್ಮ ಭೂಮಿ ಎದುರಿಸುತ್ತಿರುವ ಮುಖ್ಯ ಸವಾಲಾಗಿದ್ದು, ಈ ವಿಚಾರದ ಕುರಿತು ಸಂವಾದ ಸಂಶೋಧನೆಗಳು ಆಗಬೇಕಾಗಿದ್ದು, ಎರಡು ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೋ| ಎಸ್. ರಮಾನಂದ ಶೆಟ್ಟಿ ಮಾತನಾಡಿ ಪ್ಲೇಮೌತ್ ಕಡಲಿನ ಜೀವಶಾಸ್ತ್ರ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ್ದು, ನಿಟ್ಟೆ ವಿಶ್ವವಿದ್ಯಾನಿಲಯದೊಂದಿಗೆ ನಡೆಸಿರುವ ಒಡಂಬಡಿಕೆಯಿಂದ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಲು ಸಹಕಾರಿಯಾಗಲಿದೆ ನಿಟ್ಟೆ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೋ| ಇಂದ್ರಾಣಿ ಕರುಣಾ ಸಾಗರ್ ಅವರ ಮಾರ್ಗದರ್ಶನದಲ್ಲಿ ಸಂಶೋದನಾ ಕಾರ್ಯ ನಡೆಯಲಿದೆ ಎಂದರು.
ಲಂಡನ್ನ ಪ್ಲೇಮೌತ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಶೈಕ್ಷಣಿಕ ಮತ್ತು ಸಂಶೋಧನಾ ಒಡಂಬಡಿಕೆಗೆ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೋ| ರಮಾನಂದ ಶೆಟ್ಟಿ ಮತ್ತು ಪ್ಲೇಮೌತ್ ವಿಶ್ವವಿದ್ಯಾನಿಲಯದ ಮುಖ್ಯಸ್ಥರಾದ ಡಾ| ಮೈರಿ ನೈಟ್ ಸಹಿ ಹಾಕಿದರು. ಉಪನ್ಯಾಸಕ ಡಾ| ಲೂಸಿ ಟರ್ನರ್ ಮತ್ತಿತರರು ಉಪಸ್ಥಿತರಿದ್ದರು.



