ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೊಣಾಜೆ: ವಿವಾಹಿತೆಯಾಗಿದ್ದರೂ ಪತಿಯನ್ನು ತೊರೆದಿದ್ದ ಸಹೋದರಿ ಮನೆಯಲ್ಲಿದ್ದುಕೊಂಡು ಬೇರೆ ಯುವಕನನ್ನು ಪ್ರೀತಿಸುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಸಹೋದರನ ಮೇಲೆ ದ್ವೇಷ ಬೆಳೆಸಿಕೊಂಡ ಸಹೋದರಿ ತನ್ನ ಪ್ರಿಯಕರನಿಗೆ ಸುಪಾರಿ ನೀಡುವ ಮೂಲಕ ಸಹೋದರನನ್ನೇ ಹತ್ಯೆಗೈದಿದ್ದಾಳೆ.
ಇದು ರಾಜ್ಯಾದ್ಯಂತ ಸುದ್ಧಿ ಮಾಡಿದ್ದ ಕೊಣಾಜೆ ಪಜೀರು ಸುದರ್ಶನಗರದ ಮಾಜಿ ತಾ.ಪಂ ಸದಸ್ಯ ಉಮೇಶ್ ಗಾಣಿಗ ಎಂಬವರ ಪುತ್ರ ಕಾರ್ತಿಕ್ ರಾಜ್ ಹತ್ಯೆ ಪ್ರಕರಣದ ಅಸಲಿಯತ್ತು. ಪ್ರಕರಣಕ್ಕೆ ಸಂಬಂಧಿಸಿ ಏಳು ತಿಂಗಳುಗಳ ಬಳಿಕ ಕೋಟೆಕಾರು ಮಾಡೂರು ನಿವಾಸಿಗಳಾದ ಗೌತಂ (26) ಹಾಗೂ ಆತನ ಸಹೋದರ ಪ್ರೀತಂ (23) ಸೇರಿದಂತೆ ಹತ್ಯೆಯಾದ ಕಾರ್ತಿಕ್ ರಾಜ್ ಸಹೋದರಿ ಕಾವ್ಯಾ ಳನ್ನು ಡಿಸಿಐಬಿ ಪೊಲೀಸರು ಬಂಧಿಸುವ ಮೂಲಕ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ.
ವಿವಾಹಿತೆಯಾಗಿದ್ದರೂ ಪತಿಯಿಂದ ದೂರವಿದ್ದ ಕಾವ್ಯಾಳನ್ನು ಗೌತಂ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದನ್ನು ಕಾವ್ಯಾಳ ಸಹೋದರ ಕಾರ್ತಿಕ್ ರಾಜ್ ವಿರೋಧಿಸಿದ್ದನಲ್ಲದೆ, ಆಕ್ಷೇಪವನ್ನು ಎತ್ತಿದ್ದನು. ಇದನ್ನೇ ದ್ವೇಷವಾಗಿ ಬೆಳೆಸಿಕೊಂಡ ಕಾವ್ಯ , ಗೌತಮನಿಗೆ ತನ್ನ ಒಡವೆಗಳನ್ನು ಅಡವಿಟ್ಟು ರಊ. 5 ಲಕ್ಷದ ಸುಪಾರಿ ನೀಡಿ ಹತ್ಯೆಗೈಯ್ಯುವ ಯೋಜನೆ ರೂಪಿಸಿದ್ದಾಳೆ.
ಅದರಂತೆ ಅ. 23 ರಂದು ಪಜೀರು ಮನೆಯಿಂದ ಅಸೈಗೋಳಿವರೆಗೆ ಜಾಗಿಂಗ್ ಗೆ ಹೋಗುವ ಸಂದರ್ಭ ಗಣೇಶಮಹಲ್ ಬಸ್ಸು ನಿಲ್ದಾಣದ ಸಮೀಪ ಅವಿತು ಕುಳಿತು , ಹಿಂದಿನ ದಿನ ತೊಕ್ಕೊಟ್ಟು ಹಾಡ್ ್ ವೇರ್ ಅಂಗಡಿಯಿಂದ ಖರೀದಿಸಿದ್ದ ಸುತ್ತಿಗೆಯಿಂದ ಕಾರ್ತಿಕ್ ರಾಜ್ ತಲೆಗೆ ಬಡಿದು ಹತ್ಯೆ ನಡೆಸಿದ್ದಾರೆ. ಗೌತಂ ಸುತ್ತಿಗೆಯಲ್ಲಿ ಹೊಡೆದಿದ್ದರೆ, ಸಹೋದರ ಪ್ರೀತಂ ಕಣ್ಣಿಗೆ ಮೆಣಸಿನ ಹುಡಿ ಹಾಕುವಲ್ಲಿ ಆತನಿಗೆ ಸಹಕರಿಸಿದ್ದ.
ಇನ್ನಷ್ಟು ವಿವರಗಳು ಸದ್ಯದಲ್ಲೇ …






