ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸಮಸ್ತ ಜಾಗತಿಕ ನಾಯಕರೂ, ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರೂ ಆಗಿರುವ ಸಯ್ಯಿದ್ ಜೆಫ್ರಿ ಮುತ್ತುಕೋಯ ತಂಙಳ್ ಅವರು ಬುಧವಾರ ಉಳ್ಳಾಲಕ್ಕೆ ಆಗಮಿಸಲಿದ್ದು ಮೇಲಂಗಡಿ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇತಿಹಾಸ ಪ್ರಸಿದ್ಧ ಹೊಸಪಳ್ಳಿ ಎಂದೇ ಖ್ಯಾತಿ ಹೊಂದಿರುವ ಮುಹಿಯ್ಯುದ್ದೀನ್ ಜುಮಾ ಮಸೀದಿ 2012ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು 650 ಕುಟುಂಬಗಳನ್ನು ಒಳಗೊಂಡಿದ್ದು, 2013ರಲ್ಲಿ ಜುಮಾ ಆರಂಭಿಸಲಾಗಿದೆ. ಪ್ರಸ್ತುತ ಮಸೀದಿಯ ಅಧೀನದಲ್ಲಿ 400 ವಿದ್ಯಾರ್ಥಿಗಳನ್ನು ಹೊಂದಿರುವ ಖಂಝುಲ್ ಉಲೂಂ ಮದರಸ, ಮಹಿಳಯೆರಿಗೆ ಹೊಲಿಗೆ ತರಬೇತಿ ಕೇಂದ್ರ ಹಾಗೂ ಹಿರಿಯ ಮಹಿಳೆಯರಿಗೆ ಧಾರ್ಮಿಕ ಬೋಧನಾ ಕೇಂದ್ರ ನಡೆಸಲಾಗುತ್ತಿದ್ದು ಎಂದು ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್ ಸೋಮವಾರ ಮಸೀದಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಹೆಣ್ಮಕ್ಕಳಿಗೆ ಮಹಿಳಾ ಶಿಕ್ಷಕರಿಂದ ಧಾರ್ಮಿಕ ಶಿಕ್ಷಣ, ಮಹಿಳಾ ಆಲಿಂ ಕೋರ್ಸ್, ಬಡ ಹೆಣ್ಮಕ್ಕಳ ವಿವಾಹಕ್ಕೆ ನೆರವು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಬಡರೋಗಿಗಳಿಗೆ ವೈದ್ಯಕೀಯ ನೆರವು ನೀಡುವ ಯೋಜನೆಯೂ ಇದೆ. ಮಸೀದಿಯ ಕಟ್ಟಡ ಉದ್ಘಾಟನಾ ಸಮಾರಂಭ ಏ.26ರಂದು ನಡೆಯಲಿದ್ದು, ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಶೈಖುನಾ ಸಯ್ಯಿದ್ ಜೆಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ದುವಾ ಮಾಡಲಿದ್ದಾರೆ. ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಯು.ಟಿ.ಖಾದರ್ ಧಾರ್ಮಿಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಸೀದಿಯ ಮಾಜಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಪದಾಧಿಕಾರಿಗಳಾದ ಬಶೀರ್ ಗುಂಡಿಹಿತ್ಲು, ರಝಾಕ್ ಹರೇಕಳ, ಬಶೀರ್ ಇಲ್ಯಾಸ್, ಅಬ್ದುಲ್ ರಹೀಂ ಮುಟ್ಟಿಕ್ಕಲ್, ಅಬ್ದುಲ್ ಲತೀಫ್, ಅಬ್ದುಲ್ ಜಬ್ಬಾರ್, ಆಸಿಫ್ ಅಬ್ದುಲ್ಲಾ, ಬಾವಾ ಫಕೀರ್ ಸಾಬ್, ಜಮಾಲ್ ಬಾರ್ಲಿ ಹಾಗೂ ಸಲಾಂ ಉಪಸ್ಥಿತರಿದ್ದರು.


