Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಪಾಕ್ ಉಗ್ರರೊಂದಿಗೆ ಕಾದಾಡಿ ಸಾವು ಗೆದ್ದ ಮುಡಿಪುವಿನ ವೀರಯೋಧ

UllalaVaniBy UllalaVaniApril 17, 2017Updated:April 17, 2017No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮುಡಿಪು : ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಗಡಿ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಮ್ಮ ಸೈನಿಕರ ನಡುವಿನ ಹೋರಾಟ ದಿನಂಪ್ರತಿ ನಡೆಯುತ್ತದೆ. ಅದೆಷ್ಟೋ ಸೈನಿಕರು ತಮ್ಮ ತಾಯ್ನಾಡಿಗಾಗಿ ಭಯೋತ್ಪಾದಕರೊಂದಿಗೆ ಕಾದಾಡಿ ಹುತಾತ್ಮರಾದರೆ, ಕೆಲವರು ಗಾಯಗೊಂಡು ಹುಟ್ಟೂರಿಗೆ ಹಿಂತಿರುಗುತ್ತಾರೆ. ಅಂತಹ ಒಬ್ಬ ಯೋಧ ಭಯೋತ್ಪಾದಕರೊಂದಿಗೆ ಹೋರಾಡಿ ನಾಲ್ಕು ಬಾರಿ ಸಾವಿನ ದವಡೆಯಿಂದ ಪಾರಾಗಿದ್ದು, ನಾಲ್ಕನೇಯ ಹೋರಾಟದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಅವರು ಐದೂವರೆ ತಿಂಗಳ ಚಿಕಿತ್ಸೆಯ ಬಳಿಕ ಸಾವಿನಿಂದ ಪಾರಾಗಿ ಇದೀಗ ತನ್ನ ಹುಟ್ಟೂರಿಗೆ ಮರಳಿದ್ದಾರೆ.

DSC_0390

DSC_0393

DSC_0396

DSC_0397

DSC_0399

DSC_0400

WhatsApp Image 2017-04-15 at 19.35.53

WhatsApp Image 2017-04-15 at 19.35.55

 

WhatsApp Image 2017-04-15 at 19.40.19WhatsApp Image 2017-04-15 at 19.40.18WhatsApp Image 2017-04-15 at 19.40.17WhatsApp Image 2017-04-15 at 19.36.00DSC_0400WhatsApp Image 2017-04-15 at 19.40.16
ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ನಿವಾಸಿಯಾಗಿರುವ ಸಂತೋಷ್ ಕುಲಾಲ್ ಅವರೇ ಭಯೋತ್ಪಾದಕರೊಂದಿಗೆ ಹೋರಾಡಿ ಸಾವಿನ ದವಡೆಯಿಂದ ಪಾರಾಗಿ ಬಂದ ಯೋದರಾಗಿದ್ದು, ಅ.12ರಂದು ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಪಾಂಪೆÇೀರ್‍ನಲ್ಲಿ ಭಯೋತ್ಪಾದಕರೊಡನೆ ಹೋರಾಡಿ ಗುಂಡಿನೇಟಿನಿಂದ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಸಾವನ್ನು ಜಯಿಸಿ ಬಂದವರಾಗಿದ್ದು, ಐದೂವರೆ ತಿಂಗಳ ಚಿಕಿತ್ಸೆಯ ಬಳಿಕ ಎಪ್ರಿಲ್‍ನಲ್ಲಿ ತನ್ನ ಹುಟ್ಟೂರಾದ ಮುಡಿಪುವಿಗೆ ಆಗಮಿಸಿದ್ದಾರೆ.

ಬಂಟ್ವಾಳ ತಾಲೂಕಿನ ರಾಮಣ್ಣ ಸಾಲಿಯಾನ್ ಮತ್ತು ವಿಮಲಾ ಅವರ ಇಬ್ಬರು ಮಕ್ಕಳಲ್ಲಿ ಸಂತೋಷ್ ಹಿರಿಯವ. ಸಣ್ಣ ಪ್ರಾಯದಲ್ಲಿ ತಂದೆ ನಿಧನವಾದ ಬಳಿಕ ತಾಯಿ ಮತ್ತು ಸಹೋದರಿಯೊಂದಿಗೆ ಮುಡಿಪುವಿನ ಕೊಡಕಲ್ಲಿನಲ್ಲಿರುವ ಅಜ್ಜಿ ಮನೆಗೆ ಬಂದಿದ್ದ ಸಂತೋಷ್ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಮುಡಿಪುವಿನ ಸರಕಾರಿ ಶಾಲೆಯಲ್ಲೇ ಕಲಿತವರು. ಪಿಯುಸಿ ಮುಗಿದ ದೇಶ ಸೇವೆ ಮಾಡುವ ಅದಮ್ಯ ಉತ್ಸಹದಿಂದ ಸೇನೆಯ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ ಸೇನೆಗೆ ಆಯ್ಕೆಯಾದರು 2003ರಿಂದ 2016ರವರೆಗೆ 13 ವರ್ಷಗಳ ಕಾಲ ನಿರಂತರವಾಗಿ ಜಮ್ಮು ಕಾಶ್ಮೀರ ಸೇರಿದಂತೆ, ನಾಗಲ್ಯಾಂಡ್, ಬರ್ಮಾ, ಮಣಿಪುರದಲ್ಲಿ ಸೇವೆಯನ್ನು ಸಲ್ಲಿಸಿ ನಕ್ಸಲ್, ಸೇರಿದಂತೆ ಉಗ್ರ ನಿಗ್ರಹ ಕಾರ್ಯಪಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆರ್ಮಿ ಸರ್ವಿಸ್ ಕೋರ್‍ನಲ್ಲಿದ್ದ ಸಂತೋಷ್ ಅವರು ಕಮಾಂಡೋ ಕೋರ್ಸು ಮುಗಿಸಿ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪಾಂಪೆÇೀರ್ ದಾಳಿಯಲ್ಲಿ ಗಂಭೀರ : 2016ರ ಸಪ್ಟೆಂಬರ್‍ನಲ್ಲಿ ಊರಿಗೆ ಬಂದಿದ್ದ ಸಂತೋಷ್‍ಗೆ ರಜೆ ಮುಗಿಯುವ ಮೊದಲೇ ಕಾರ್ಯಾಚರಣೆಗೆ ಹಾಜರಾಗುವಂತೆ ಕರೆ ಬಂದಿತ್ತು. ಭಾರತೀಯ ಪಡೆಯ ಸರ್ಜಿಕಲ್ ಸ್ಟೈಕ್‍ನ ತಂಡಕ್ಕೆ ಬ್ಯಾಕ್ ಸಪೋಟ್ ಮಾಡುವ ಕಾರ್ಯವನ್ನು ಸಂತೋಷ್ ಅವರಿದ್ದ ತಂಡಕ್ಕೆ ಸಿಕ್ಕಿತ್ತು. ಅದಾದ ಬಳಿಕ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯ ಪಾಂಪೆÇೀರ್‍ನಲ್ಲಿರುವ ಸರಕಾರಿ ಕಟ್ಟಡವೊಂದರಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎನ್ನುವ ಸುಳಿವಿನಂತೆ ಇವರಿದ್ದ 6 ಜನರ ಕಮಾಂಡೋ ಕಾರ್ಯಪಡೆಗೆ ಸರ್ಚಿಂಗ್ ಜವಬ್ದಾರಿ ನೀಡಲಾಗಿತ್ತು. ಕಟ್ಟಡ ಮತ್ತು ಕಟ್ಟಡದ ಪಕ್ಕದಲ್ಲಿದ್ದ ಗುಡ್ಡದಲ್ಲಿ ಭಯೋತ್ಪಾದಕರಿದ್ದ ಮಾಹಿತಿ ಸಿಕ್ಕಿತ್ತು ಅಷ್ಟೊತ್ತಿಗೆ ಎರಡೂ ಕಡೆಯಿಂದ ಗುಂಡಿನ ದಾಳಿ ಪ್ರಾರಂಭವಾಗಿತ್ತು. ನಾವು ಗುಡ್ಡದಲ್ಲಿದ್ದ ಮೂವರು ಭಯೋತ್ಪಾದಕರನ್ನು ಮತ್ತು ಕಟ್ಟಡದಲ್ಲಿ ಅಡಗಿದ್ದ ಓರ್ವ ಭಯೋತ್ಪಾದಕನನ್ನು ಕೊಲ್ಲುವಲ್ಲಿ ಯಶಸ್ವಿಯಾದೆವು, ಕಟ್ಟಡದಲ್ಲಿದ್ದ ಭಯೋತ್ಪಾದಕರು ನಮ್ಮ ಮೇಲೆ ದಾಳಿ ನಡೆಸಿದಾಗ ನನಗೆ ಎರಡು ಎದೆಗೆ ಮತ್ತು ಮೂರು ಕಾಲಿಗೆ ಗುಂಡು ತಗುಲಿತ್ತು. ನಾವಿದ್ದ ಆರು ಜನರಲ್ಲಿ ಉತ್ತರ ಪ್ರದೇಶದ ಗ್ಯಾನೆಂದರ್ ಮತ್ತು ಒರಿಸ್ಸಾದ ಬಿಸ್ವಾಸ್ ಸಾವನ್ನಪ್ಪಿದ್ದರು. ಎದೆಗೆ ಗುಂಡು ಬಿದ್ದ ಬಳಿಕ ಏನಾಯಿತೆಂದು ಗೊತ್ತೊರಲಿಲ್ಲ. ಎರಡೂವರೆ ವಾರ ಕೋಮಾದಲ್ಲಿದ್ದ ನನಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಇರುವ ವಿಚಾರ ತಿಳಿಯಿತು. ಈ ಘಟನೆಯಲ್ಲಿ ಸುಮಾರು 56 ಗಮಟೆಗಳ ಕಾರ್ಯಾಚರಣೆ ಬಳಿಕ ಇಡೀ ಆರು ಅಂತಸ್ತಿನ ಕಟ್ಟಡವನ್ನು ಸ್ಪೋಟಿಸಿ ಭಯೋತ್ಪಾದಕರನ್ನು ಕೊಂದ ವಿಚಾರ ತಿಳಿಯಿತು.

ನಾಲ್ಕು ದಾಳಿಯಲ್ಲಿ ಪಾರು : ಕಳೆದ 13 ವರ್ಷಗಳ ಸೇನಾ ಸೇವೆಯಲ್ಲಿ ಹಲವಾರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರೂ ನಾಲ್ಕು ಬಾರಿ ಸಾವಿನ ದವಡೆಯಿಮದ ಪಾರಾಗಿದ್ದೇನೆ ಎನ್ನುತ್ತಾರೆ ಸಂತೋಷ್. ಮಣಿಪುರದಲ್ಲಿ ಮಾವೋವಾದಿಗಳ ದಾಳಿಯಲ್ಲಿ ನಮ್ಮ ತಂಡದ ಮೂರು ವಾಹನಗಳನ್ನು ಸ್ಪೋಟಿಸಿದ್ದು ಅದರಲ್ಲಿ 14 ಸೈನಿಕರು ಹುತಾತ್ಮರಾಗಿದ್ದರು. ನಾಲ್ಕನೇಯ ವಾಹನದಲ್ಲಿದ್ದ ನಾವು ಕೂದಳೆಲೆಯ ಅಂತರದಲ್ಲಿ ಪಾರಾಗಿದ್ದೆವು. ಎರಡನೇ ದಾಳಿ ನಾಗಲ್ಯಾಂಡ್‍ನಲ್ಲಿ ರೈಲು ನಿಲ್ದಾಣ ಸ್ಪೋಟದಲ್ಲಿ ಕಾಲಿಗೆ ಗಾಯವಾಗಿತ್ತು. ಮೂರನೇಯ ದಾಳಿ ಪೂಂಛ್‍ನಲ್ಲಿ ನಡೆದಿದ್ದು ತಲೆಗೆ ಗುಂಡು ತಗಲಿತ್ತು, ನಾಲ್ಕನೇಯ ಪಾಂಪೆÇೀರ್ ದಾಳಿಯಲ್ಲಿ ಐದು ಗುಂಡು ತಗುಲಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ ಎನ್ನುವ ಅವರು ಇನ್ನೂ ಎರಡು ವರ್ಷ ಸೇವಾವ„ ಬಾಕಿಯಿದ್ದು ಗುಣಮುಖರಾಗಿ ದೇಶ ಸೇವೆಗೆ ಮರಳುವ ಆಶಾವಾದ ವ್ಯಕ್ತಪಡಿಸುತ್ತಾರೆ.

ಮನೆಯ ಏಕೈಕ ಆದಾರಸ್ತಂಭ : ಸಂತೋಷ್ ಮದುವೆಯಾಗಿ ಮೂರು ವರ್ಷ ಕಳೆದಿದೆ. ಪತ್ನಿ ಖಾಸಗಿ ಶಾಲೆಯಲ್ಲಿ ತತ್ಕಾಲಿಕ ನೆಲೆಯಲ್ಲಿ ಶಿಕ್ಷಕಿ, ಬಡ ಕುಟುಂಬವಾಗಿರುವ ಈ ಮನೆಯಲ್ಲಿ ಸಂತೋಷ್ ಅವರೇ ಆಧಾರ ಸ್ತಂಭ. ತಾಯಿ, ಸಹೋದರಿ, ಸಹೋದರಿಯ ಮಗುವನ್ನು ನೋಡುವ ಜವಾಬ್ದಾರಿ ಸಂತೋಷ್ ಅವರದು. ಆದರೆ ಘಂಭೀರವಾಗಿ ಗಾಯಗೊಂಡು ಸೇನೆಯಿಂದ ಮನೆಗೆ ವಾಪಾಸಾಗಿರುವ ಸಂತೋಷ್ ಕುಟುಂಬಕ್ಕೆ ಆರ್ಥಿಕ ಚೈತನ್ಯ ನೀಡುವ ಕಾರ್ಯ ಆಗಬೇಕಾಗಿದೆ.

ಮನೆಗೆ ತಿಳಿಸಿರಲಿಲ್ಲ: ಕಳೆದ ಸಪ್ಟೆಂಬರ್‍ನಲ್ಲಿ ಮನೆಗೆ ಬಂದಿದ್ದ ಸಂತೋಷ್ ಕೆಲವೇ ದಿನಗಳಲ್ಲಿ ಕರ್ತವ್ಯದ ಕರೆಗೆ ಓಗೊಟ್ಟು ತೆರಳಿದ್ದರು. ಅ. 12ರಂದು ನಡೆದ ದಾಳಿಯಲ್ಲಿ ತನಗೆ ಮಾರಣಾಂತಿಕ ಗಾಯವಾಗಿದೆ ಎನ್ನುವ ವಿಚಾರವನ್ನು ಪತ್ನಿ ಮತ್ತು ತಾಯಿ, ಸಹೋದರಿಗೆ ತಿಳಿಸಿರಲಿಲ್ಲ. ಪತ್ನಿಯ ಸಹೋದರನಿಗೆ ಮಾತ್ರ ಮಾಹಿತಿ ನೀಡಿದ್ದರು. ಜಮ್ಮುವಿನ ಪಠಾನ್‍ಕೋಟ್ ಆಸ್ಪತ್ರೆಯಲ್ಲಿದ್ದ ಸಂತೋಷ್ ಬಳಿಕ ದೆಹಲಿಯ ಕಮಾಮಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೆಹಲಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ತಲುಪಿ, ಬೆಂಗಳೂರಿನಿಂದ ಸೇನಾ ವಾಹನದಲ್ಲಿ ಎ.3ರಂದು ಮನೆಗೆ ಬಂದಾಗಲೇ ಪತ್ನಿ , ತಾಯಿ, ಸಹೋದರಿಗೆ ಕಾರ್ಯಾಚರಣೆಯಲ್ಲಿ ಗಾಯಗೊಂಡ ವಿಚಾರ ತಿಳಿದದ್ದು. ಕೋಮಾ ಸ್ಥಿತಿಯಿಂದ ಹೊರಬಂದ ಬಳಿಕ ಮನೆಯವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸುತ್ತಿದ್ದೆ ಎನ್ನುವ ಸಂತೋಷ್ ತಾನು ಗಾಯಗೊಂಡಿರುವ ಮನೆಯವರಿಗೆ ತಿಳಿದರೆ ಸಮಸ್ಯೆ ಆಗುತ್ತದೆ ಎಂದು ಮಾಹಿತಿ ನೀಡಿರಲಿಲ್ಲ ಎನ್ನತ್ತಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ :  ಪ್ರಶಾಂತ ಕಾಜವ

May 26, 2026

ಮಂಗಳೂರು: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ ಮತ್ತೊರ್ವ ಆರೋಪಿಯ ಬಂಧನ

May 26, 2026

ಕುರ್ನಾಡು ದತ್ತಾತ್ರೇಯ ಶಾಲೆ ಹಳೆ ವಿದ್ಯಾರ್ಥಿಗಳ ಮಹಾಸಂಗಮ

May 25, 2026
Leave A Reply

Advertise
ಸಂಪರ್ಕಿಸಿ

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025
All News

ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ :  ಪ್ರಶಾಂತ ಕಾಜವ

By UllalaVaniMay 26, 20260

ಕೊಣಾಜೆ: ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರಾದ ಪ್ರಶಾಂತ…

ಮಂಗಳೂರು: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ ಮತ್ತೊರ್ವ ಆರೋಪಿಯ ಬಂಧನ

May 26, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026

70 ವರ್ಷದ ಹಿರಿಯ ನಾಗರಿಕಳಿಗೆ ಗ್ಯಾಸ್ ಸಪ್ಲೈ ನಿರಾಕರಣೆ : ಆಹಾರ ಇಲಾಖೆಗೆ ದೇವಕಿ ಕೊಟ್ಯಾನ್ ಮನವಿ

May 26, 2026
1 2 3 … 1,935 Next
Automatic YouTube Gallery

ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯಕ್ಕೆ ಕಲಿಯುವ ಸ್ವಾತಂತ್ರ್ಯ ನೀಡಿದೆ; ಡಾ.ಯೆಸ್.ಯೆಸ್ ಇಂಜಗಣೇರಿ

ಪ್ರಾಜೆಕ್ಟ್ ಸಂಕಲ್ಪ್ ಕೋಡ್ 4 ಚೇಂಜ್ ರಾಷ್ಟ್ರೀಯ 24ಗಂಟೆಗಳ ಹ್ಯಾಕಥಾನ್ ;ಯೆನೆಪೋಯ ವಿಶ್ವವಿದ್ಯಾಲಯದ ಯೆಂಡ್ಯೂರನ್ಸ್ ಝೋನ್ ಸಭಾಂಗಣದಲ್ಲಿ ಚಾಲನೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸಹ್ಯಾದ್ರಿ ಇಂಜಿನಿಯರಿoಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜು ಪ್ರಾಂಶುಪಾಲರಾದ ಡಾ.ಯೆಸ್.ಯೆಸ್ ಇಂಜಗಣೇರಿ

📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯಕ್ಕೆ ಕಲಿಯುವ ಸ್ವಾತಂತ್ರ್ಯ ನೀಡಿದೆ; ಡಾ.ಯೆಸ್.ಯೆಸ್ ಇಂಜಗಣೇರಿ
Now Playing
ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯಕ್ಕೆ ಕಲಿಯುವ ಸ್ವಾತಂತ್ರ್ಯ ನೀಡಿದೆ; ಡಾ.ಯೆಸ್.ಯೆಸ್ ಇಂಜಗಣೇರಿ
ಪ್ರಾಜೆಕ್ಟ್ ಸಂಕಲ್ಪ್ ಕೋಡ್ 4 ಚೇಂಜ್ ರಾಷ್ಟ್ರೀಯ 24ಗಂಟೆಗಳ ಹ್ಯಾಕಥಾನ್ ;ಯೆನೆಪೋಯ ...
ಪ್ರಾಜೆಕ್ಟ್ ಸಂಕಲ್ಪ್ ಕೋಡ್ 4 ಚೇಂಜ್ ರಾಷ್ಟ್ರೀಯ 24ಗಂಟೆಗಳ ಹ್ಯಾಕಥಾನ್ ;ಯೆನೆಪೋಯ ವಿಶ್ವವಿದ್ಯಾಲಯದ ಯೆಂಡ್ಯೂರನ್ಸ್ ಝೋನ್ ಸಭಾಂಗಣದಲ್ಲಿ ಚಾಲನೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸಹ್ಯಾದ್ರಿ ಇಂಜಿನಿಯರಿoಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜು ಪ್ರಾಂಶುಪಾಲರಾದ ಡಾ.ಯೆಸ್.ಯೆಸ್ ಇಂಜಗಣೇರಿ

📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾರ್ಮಿಕರಿಗೆ ಸರಕಾರ ನೀಡುವ ಸೌಲಭ್ಯಗಳ ಪ್ರಯೋಜನ ಪಡೆಯಲು ಸ್ಪೀಕರ್ ಯು.ಟಿ. ಖಾದರ್ ಕರೆ
Now Playing
ಕಾರ್ಮಿಕರಿಗೆ ಸರಕಾರ ನೀಡುವ ಸೌಲಭ್ಯಗಳ ಪ್ರಯೋಜನ ಪಡೆಯಲು ಸ್ಪೀಕರ್ ಯು.ಟಿ. ಖಾದರ್ ಕರೆ
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ;ಹಿರಿಯ ಅಸಂಘಟಿತ ಕಾರ್ಮಿಕರಿಗೆ ...
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ;ಹಿರಿಯ ಅಸಂಘಟಿತ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ

ನಾಟೆಕಲ್ ತಿಪ್ಪೆಪದವು ಅಲ್ ಮದಿನಾ ಕಮ್ಯುನಿಟಿ ಹಾಲ್‌ನಲ್ಲಿ ಕಾರ್ಯಕ್ರಮ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version