Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಕನಕದಾಸರ ಕಾವ್ಯ ಸಾಹಿತ್ಯದ ಕೃತಿ ಅಲ್ಲ, ಸಾಂಸ್ಕøತಿಕ ಪಠ್ಯ – ಪ್ರೊ. ಎ.ವಿ. ನಾವಡ

UllalaVaniBy UllalaVaniApril 8, 2017No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮುಡಿಪು: ಕನಕದಾಸರ ಕೀರ್ತನೆ ಅಥವಾ ಅವರ ಕಾವ್ಯಗಳು ಬರಿ ಸಾಹಿತ್ಯ ಕೃತಿಗಳಾಗದೆ, ಅವು ಒಂದು ಸಾಂಸ್ಕøತಿಕ ಪಠ್ಯವಾಗಿವೆ. ಕೀರ್ತನೆಗಳನ್ನು ಸಾಹಿತ್ಯದ ನೆಲೆಗಳಾದ ಉಪಮೆ, ರೂಪಕದ ಭಾಷೆಯಾಗಿ ಮಾತ್ರ ನೋಡದೆ ಅದರ ಸಾಮಾಜಿಕ ಎಚ್ಚರದ ಬಗ್ಗೆ ಅಧ್ಯಯನವಾಗಬೇಕಾದ ಅಗತ್ಯತೆ ಇದೆ. ಆದರೆ ಅವಜ್ಞೆಯಲ್ಲಿದ್ದ ದಾಸ ಸಾಹಿತ್ಯಕ್ಕೆ ಇತ್ತೀಚಿನ ದಶಕಗಳಲ್ಲಿ ಕನಕದಾಸರ ಅಧ್ಯಯನ ಮೂಲಕ ಹೊಸ ನೆಲೆ ಬೆಲೆ ಅದರ ಪುನರ್ ಪರಿಶೀಲನೆಗೆ ಅವಕಾಶ ಸಿಕ್ಕಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಖ್ಯಾತ ಸಾಹಿತಿ ಪ್ರೊ.ಎ.ವಿ.ನಾವಡ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಗುರುವಾರ ಹಳೆಸೆನೆಟ್ ಸಭಾಂಗಣದಲ್ಲಿ ನಡೆದ `ಕನಕ ಸ್ಮøತಿ’ ಕಾರ್ಯಕ್ರಮದಲ್ಲಿ `ಕನಕ ಪ್ರಸರಣ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

7mdp1

ಕನಕದಾಸರ ಬಗ್ಗೆ ಹೊಸ ಎಚ್ಚರ, ಹೊಸ ಆಲೋಚನೆಗಳು ಹುಟ್ಟಿಕೊಳ್ಳುವ ಮೂಲಕ ಕರ್ನಾಟಕ ಸಾಂಸ್ಕøತಿಕ ಲೋಕದಲ್ಲಿ ಒಂದು ತಿರುವು ಕಾಣಿಸಿಕೊಂಡಿದೆ. ಕೆಳವರ್ಗದ ಒಬ್ಬ ಸಂತ ಮಹೋನ್ನತ್ತವಾದ ಸಾಧನೆ, ಹೊಸ ವಿಚಾರಧಾರೆಯು ಹರಿಯಬಿಟ್ಟಿದ್ದಾನೆ ಎನ್ನುವ ವಿಚಾರ ಸಾಂಸ್ಕøತಿಕ, ಸಾಹಿತ್ಯಿಕ, ಸಾಮಾಜಿಕ ವಲಯದಲ್ಲಿ ಸಾಧ್ಯವಾಯಿತು. ಆಧುನಿಕ ಕಾಲದಲ್ಲಿ ನಡೆದ ಮತ್ತು ನಡೆಯುತ್ತಿರುವ ಕನಕದಾಸರ ಅಧ್ಯಯನ ಫಲವಾಗಿ ಮಧ್ಯಕಾಲೀನ ಕನ್ನಡ ಸಾಂಸ್ಕøತಿಕ ಲೋಕದ ಪುನರ್ ಪರಿಶೀಲನೆ ಸಾಧ್ಯವಾಯಿತು ಎಂದರು. ಇಪ್ಪತ್ತೊಂದನೆಯ ಶತಮಾನದ ಬದುಕಿನ ತಲ್ಲಣಗಳಿಗೆ, ಆತಂಕಗಳಿಗೆ ನಮಗೆ ನೀರು, ಆಹಾರ, ಬೆಳಕು ಪಡೆಯುವ ಸಾಧ್ಯತೆಗಳು ಇವೆಯೇ? ಎನ್ನುವ ರೀತಿಯಲ್ಲಿ ನಮ್ಮ ವಿದ್ವಾಂಸರು ಕೆಲಸ ಮಾಡಿದರು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಕೆ. ಭೈರಪ್ಪ ಅವರು ವಹಿಸಿದ್ದರು.
ಕೇಂದ್ರದ ಸಂಯೋಜಕರಾದ ಡಾ. ಬಿ. ಶಿವರಾಮ ಶೆಟ್ಟಿಯವರು ಪ್ರಸ್ತಾವಿಕ ನುಡಿಯಲ್ಲಿ ಕನಕದಾಸ ಸಂಶೋಧನ ಕೇಂದ್ರವು ಅತ್ಯಂತ ನಿಷ್ಠೆ, ಬದ್ಧತೆ, ಪ್ರ್ರಾಮಾಣಿಕತೆಯಿಂದ ಕೇಂದ್ರದ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿದೆ ಎಂದರು.

‘ಕನಕ ಕೀರ್ತನ’ ಹಾಗೂ ‘ಕನಕ ಗಂಗೋತ್ರಿ’ ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮದಲ್ಲಿ ಒಟ್ಟು 69 ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕನಕ ಪುರಸ್ಕಾರ, ಕನಕ ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿ, ಕೀರ್ತನ ಪ್ರಸ್ತುತಿ ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಸಂಶೋಧನ ಸಹಾಯಕರಾದ ಆನಂದ ಎಂ. ನಿರೂಪಿಸಿ, ಕನ್ನಡ ಅಧ್ಯಯನ ಸಂಸ್ಥೆಯ ಜನಾರ್ದನ ವಂದಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಭಜನಾ ಮಂದಿರಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

August 31, 2026

ಮಂಗಳೂರಿನಲ್ಲಿ ‘ಹಲ್ಕಾ ಡಾನ್’ ಚಿತ್ರೀಕರಣ ಬಹುತೇಕ ಪೂರ್ಣ; ಕುತ್ತಾರು ಕೊರಗಜ್ಜ ಆದಿಸ್ಥಳಕ್ಕೆ ಚಿತ್ರತಂಡ ಭೇಟಿ; ತುಳು ಭಾಷೆಯಲ್ಲೂ ಚಿತ್ರ ಬಿಡುಗಡೆಗೆ ನಿರ್ಧಾರ

August 31, 2026

ಟೀಂ ಬುಖಾರಗೆ ಚಾಂಪಿಯನ್ ಪಟ್ಟ

August 31, 2026
Leave A Reply

Advertise
ಸಂಪರ್ಕಿಸಿ

ಕೋಟೆಕಾರು ಪಟ್ಟಣ ಪಂಚಾಯತ್‌ 80 ನೇ ಸ್ವಾತಂತ್ರೋತ್ಸವ

August 16, 2026

ಮಾಡೂರು ಶಾಲೆಯಲ್ಲಿ ವಿಭಿನ್ನವಾಗಿ ಜರಗಿದ 80 ರ ಸ್ವಾತಂತ್ರ್ಯ

August 16, 2026

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026
suddi

ಕಡಬ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ.4, 7 ಎರಡು ದಿನ ಆಶ್ಲೇಷಬಲಿ, ಸರ್ಪಸಂಸ್ಕಾರ ಸೇವೆಗಳು ರದ್ದು

By UllalaVaniSeptember 1, 20260

ಕಡಬ, ;ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಶಮಿ-ಏಕಾದಶಿ ವ್ರತಗಳ ಹಿನ್ನೆಲೆಯಲ್ಲಿ ಬರುವ ಸೆಪ್ಟಂಬರ್ ತಿಂಗಳ ಕೆಲವು…

ಮಂಗಳೂರು: ಮೀನುಗಾರಿಕೆ ವೇಳೆ ಸಮುದ್ರಕ್ಕೆ ಬಿದ್ದು ಆಂಧ್ರಪ್ರದೇಶದ ಮೂಲದ ಯುವಕ ನಾಪತ್ತೆ!

September 1, 2026

ಭಜನಾ ಮಂದಿರಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

August 31, 2026

ಮಂಗಳೂರು: ಚೂರಿ ಇರಿದು ಅಣ್ಣನನ್ನೇ ಕೊಲೆ ಮಾಡಿದ ತಮ್ಮ

August 31, 2026
1 2 3 … 2,082 Next
Automatic YouTube Gallery
Error 403 The request cannot be completed because you have exceeded your quota. : quotaExceeded
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version