ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕಿನ್ಯಾ : ಎಲ್ಲರಿಗೂ ಸಮಾನವಾಗಿ ಗೌರವ ನೀಡಬೇಕೆಂದು ಇಸ್ಲಾಂ ಕಲ್ಪಿಸುತ್ತದೆ. ಗೌರವ ಸ್ಥಾನಮಾನ ನೀಡುವ ವಿಚಾರದಲ್ಲಿ ಧರ್ಮ, ಸಂಪ್ರದಾಯ, ಜಾತಿ ಲೆಕ್ಕಾಚಾರ ಮಾಡಲು ಇಸ್ಲಾಂ ಅವಕಾಶ ನೀಡಲಿಲ್ಲ ಎಂದು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು.
ಅವರು ಕಿನ್ಯ ಮಸ್ಜಿದುಲ್ ಬುಖಾರಿ, ಎಸ್‍ವೈಎಸ್ ಮತ್ತು ಎಸ್ಸೆಸ್ಸೆಫ್ ಇದರ ಆಶ್ರಯದಲ್ಲಿ ಕಿನ್ಯದಲ್ಲಿ ಭಾನುವಾರ ನಡೆದ ಸುನ್ನಿ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.
ಇಸ್ಲಾಂನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರೆ ಮಾತ್ರ ಧರ್ಮದ ಮಹತ್ವ ಅರಿಯಲು ಸಾಧ್ಯ. ಧರ್ಮದ ವಿಚಾರದಲ್ಲಿ ಚರ್ಚೆ ಮಾಡುವ ಮೊದಲು ಅಧ್ಯಯನ ಅಗತ್ಯ ಎಂದರು.ಅಸಯ್ಯದ್ ಕೆ.ಎಸ್. ಆಲವಿ ತಂಙಳ್ ಅಲ್ ಐದರೂಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸ್ಸಯ್ಯದ್ ಕುಂಞ ಕೋಯ ತಂಙಳ್ ದುವಾ ನೆರವೇರಿಸಿದರು. ಶರಫ್ಪುಲ್ ಉಲಮಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅಶ್ರಫ್ ಸಖಾಫಿ ಕಿನ್ಯ , ಇಝುದ್ದೀನ್ ಅಹ್ಸನಿ ಕಿನ್ಯ, ಬುಖಾರಿ ಮಸ್ಜಿದ್ ಖತೀಬ್ ನಿಸಾರ್ ಮದನಿ, ಕಿನ್ಯ ಮಸೀದಿ ಅಧ್ಯಕ್ಷ ಹುಸೈನ್ ಕುಂಞ ಹಾಜಿ, ಎಸ್ಸೆಸ್ಸೆಎಫ್ ದ.ಕ. ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಕಿನ್ಯ ಗ್ರಾ.ಪಂ. ಉಪಾಧ್ಯಕ್ಷ ಸಿರಾಜುದ್ದೀನ್ ಕಿನ್ಯ, ಶೇಖಾ ಮರ್ಕಝ್ ಖುತುಬಿನಗರ ಅಧ್ಯಕ್ಷ ಅಬೂಬಕರ್ ಕತ್ತರ್ ಬಾವಾ ಮೆಹಬೂಬ್ ಸಖಾಫಿ ಕಿನ್ಯ ಮೊದಲಾದವರು ಉಪಸ್ಥಿತರಿದ್ದರು.



