ವರದಿ: ಹರೀಶ್ ಪೂಜಾರಿ ಕೊಣಾಜೆ
ಚಿತ್ರಗಳು: ಗಂಗಾಧರ್ ಕವಿತಾ ಸ್ಟುಡಿಯೋ ಕೊಣಾಜೆ
ಕೊಣಾಜೆ: ಬ್ರಹ್ಮ ಶ್ರೀನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ಅಂಗಸಂಸ್ಥೆಗಳಾದ ಬ್ರಹ್ಮಶ್ರೀ ನಾರಾಯಣ ಗುರು ಕೊಣಾಜೆ ಗ್ರಾಮ ಸಮಿತಿ ಯುವ ಘಟಕ ಮತ್ತು ಮಹಿಳಾ ಘಟಕ ಕೊಣಾಜೆ ಇದರ ಜಂಟಿ ವಾರ್ಷಿಕ ವiಹಾಸಭೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಯುವ ಘಟಕದ ದಶಮ ಸಂಭ್ರಮದ ಸಮಾರೋಪ ಸಮಾರಂಭ ಕೊಣಾಜೆ ಮುಟ್ಟಿಂಜದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮಚಾವಡಿ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಘವ ಪೂಜಾರಿ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ದ್ಯೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಮಾತನಾಡಿ ನಾರಾಯಣ ಗುರು ಸಂಘದ ಕೊಣಾಜೆ ಗ್ರಾಮದ ಯುವ ಘಟಕ, ಗ್ರಾಮಸಮಿತಿ, ಮಹಿಳಾ ಘಟಕಗಳು ಉತ್ತಮ ಸಮಾಜ ಸೇವೆತಯಲ್ಲಿ ಪಾಲ್ಗೊಂಡು ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ. ಇದರ ಜತೆಗೆ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ.ಸುವರ್ಣ, ತಾಲೂಕು ಪಂಚಾಯತ್ ಸದಸ್ಯೆ ಪದ್ಮಾವತಿ ಪೂಜಾರಿ, ಶ್ರೀದೇಯಿ ಬೈದೇತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನಬಿತ್ತಿಲ್ ಉಳ್ಳಾಲ ವಲಯ ಸಮಿತಿ ಕಾರ್ಯಾಧ್ಯಕ್ಷ ಯಶವಂತ ದೇರಾಜೆ, ಕೋಶಾ„ಕಾರಿ ಆನಂದ .ಕೆ.ಅಸೈಗೋಳಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗ್ರಾಮಚಾವಡಿ ಇದರ ಕೋಶಾ„ಕಾರಿ ವಿಜಯ ಕುಮಾರ್ ಪಾವೂರು, ಮಹಿಳಾ ಘಟಕದ ಅಧ್ಯಕ್ಷೆ ಸರೀತ ರವೀಂದ್ರ ಬಂಗೇರ ಮುಟ್ಟಿಂಜ, ಪ್ರಕಾರ್ಯದರ್ಶಿ ಹೇಮಾವತಿ, ಕಟ್ಟಡ ಸಮಿತಿ ಪ್ರ. ಕಾರ್ಯದರ್ಶಿ ರವೀಂದ್ರ ಬಂಗೇರ, ಕೊಣಾಜೆ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ವೇದಶ್ರೀ, ವಿಜೇತ್ ಪಜೀರು, ಅಜಿತ್ ಪೂಜಾರಿ, ಜಯಂತ್ ಕಿನ್ಯಾ, ಚಂದ್ರಹಾಸ್ ಅಮೀನ್, ಯುವಘಟಕದ ಅಧ್ಯಕ್ಷ ಮಿಥುನ್ ಕುಮಾರ್ ಮುಟ್ಟಿಂಜ, ತಾರನಾಥ ಭಂಡಾರಮನೆ, ಮನೋಜ್ ಕುಮಾರ್ ಭಂಡಾರಮನೆ, ಗೋಪಾಲ ಕೋಟ್ಯಾನ್, ಪುರುಷೋತ್ತಮ ಬಂಗೇರ, ಕೃಷ್ಣಪ್ಪ ಪೂಜಾರಿ, ಪ್ರಶಾಂತ್ ಪರಂಡೆ, ನಾರಾಯಣ ಪೂಜಾರಿ, ರಾಮಕೃಷ್ಣ ಸನಿಲ್, ಶೇಖರ್ ಕೋಟ್ಯಾನ್ ಉಪಸ್ಥಿತರಿದ್ದರು,
ಈ ಸಂದರ್ಭ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಹರೇಕಳ ಇವರನ್ನು ಸನ್ಮಾನಿಸಲಾಯಿತು.
ಸುರೇಖಾ ಹರೀಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಸಮಿತಿ ಅಧ್ಯಕ್ಷರಾಧ ಲೋಕೇಶ್ ಅಮೀನ್ ತಚ್ಚಿಲ ಸ್ವಾಗತಿಸಿದರು. ಹರೀಶ್ ಪೂಜಾರಿ ಕೊಣಾಜೆ ವಂದಿಸಿದರು. 





