ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಕುಡಿದ ಮತ್ತಿನಲ್ಲಿ ರೈಲ್ವೇ ಹಳಿಯ ಮೇಲೆ ಕುಳಿತಿದ್ದ ಅಪರಿಚಿತ ವ್ಯಕ್ತಿಯೊಬ್ಬನಿಗೆ ರೈಲು ಬಡಿದು ಮೃತಪಟ್ಟ ಘಟನೆ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿಯಲ್ಲಿ ನಿನ್ನೆ ಸಂಜೆ ನಡೆದಿದೆ.
ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈತ ಕುಡಿದ ಮತ್ತಿನಲ್ಲಿ ತೂರಾಡುತ್ತಾ ರೈಲ್ವೇ ಹಳಿಯ ಮೇಲೆ ಕುಳಿತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ವೇಳೆ ಮಂಗಳೂರಿನಿಂದ ತಿರುವನಂತಪುರಂ ಕಡೆಗೆ ಸಾಗುತ್ತಿದ್ದ ರೈಲು ಅಪರಿಚಿತ ವ್ಯಕ್ತಿಗೆ ಡಿಕ್ಕಿಯಾಗಿದೆ. ಈ ನಡುವೆ ಹಳಿಯ ಮೇಲೆ ವ್ಯಕ್ತಿಯೊಬ್ಬ ಕುಳಿತಿರುವುದನ್ನು ಗಮನಿಸಿದ ಚಾಲಕ ರೈಲಿನ ವೇಗ ಕಡಿತಗೊಳಿಸಿದ್ದು, ಆದರೆ ಅದಾಗಲೇ ರೈಲು ವ್ಯಕ್ತಿಗೆ ಢಿಕ್ಕಿಯಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಮಧ್ಯೆ ರೈಲು ಕೂಡ ಅನತಿ ದೂರ ಸಾಗಿ ನಿಂತಿದ್ದು, ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮೃತವ್ಯಕ್ತಿ ಯಾರೆಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ರೈಲು ನಿಲ್ಲಿಸಿ ಕುಡುಕನ ಪ್ರಾಣ ಉಳಿಸಲು ಯತ್ನಿಸಿದ ಚಾಲಕನ ಸಮಯಪ್ರಜ್ಞೆ ವಿಶೇಷವಾಗಿತ್ತು. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


