ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಇಲ್ಲಿನ ಜಂಕ್ಷನ್ನಿನ ರಸ್ತೆಬದಿಯಲ್ಲಿ ಕಾರ್ಯಾಚರಿಸುತ್ತಿದ್ದ ವಿವಿಧ ವಸ್ತುಗಳ ಮಳಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಭಾರೀ ಅಗ್ನಿ ಅವಘಢ ಸಂಭವಿಸಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘmನೆ ಮಂಗಳವಾರ ತಡರಾತ್ರಿ ವೇಳೆ ನಡೆದಿದ್ದು, ಎರಡು ವಾರಗಳಲ್ಲಿ ತೊಕ್ಕೊಟ್ಟುವಿನಲ್ಲಿ ಸಂಭವಿಸಿದ ನಾಲ್ಕನೇ ಅಗ್ನಿ ಪ್ರಕರಣ ಇದಾಗಿದೆ.
ಮಂಗಳವಾರ ತಡರಾತ್ರಿ 11ರ ವೇಳೆಗೆ ಏಕಾಏಕಿ ಬಾಂಬೆ ಬಝಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲೆ ವ್ಯಾಪಕವಾಗಿ ಹರಡಲು ಆರಂಭವಾಗಿ ಇಡೀ ಮಳಿಗೆಯನ್ನೇ ವ್ಯಾಪಿಸಿತು. ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಬೆಂಕಿ ಹತೋಟಿಗೆ ಬರಲಿಲ್ಲ. ಒಳಗಿದ್ದ ಸೊತ್ತುಗಳೆಲ್ಲವೂ ಉರಿದು, ತಗಡು ಶೀಟುಗಳು ಕೆಂಡದಂತಾಗಿತ್ತು. ಸ್ಥಳಕ್ಕೆ ಅಗ್ನಿ ಶಾಮಕ ದಳ ಭೇಟಿ ನೀಡುವಷ್ಟರಲ್ಲಿ ಬಝಾರ್ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ನಾಲ್ಕನೇ ಅವಘಢ: ಫೆ.23 ರ ತಡರಾತ್ರಿ ಸಿಪಿಎಂ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದರು. ಫೆ.27ರ ತಡರಾತ್ರಿ ತೊಕ್ಕೊಟ್ಟು ರೈಲ್ವೇ ಹಳಿ ಸಮೀಪ ಎರಡು ಗೂಡಂಗಡಿಗಳು ಬೆಂಕಿಗೆ ಆಹುತಿಯಾಗಿತ್ತು. ಅದರ ಬೆನ್ನಿಗೆ ಅಲ್ಲಿಂದಲೇ ಸ್ವಲ್ಪ ದೂರದಲ್ಲಿರುವ ಕರ್ಣಾಟಕ ಬ್ಯಾಂಕಿನ ಕಿಟಕಿಯ ಮೂಲಕ ಬೆಂಕಿ ಹಾಕಿದ್ದ ದುಷ್ಕರ್ಮಿಗಳ ಕೃತ್ಯಕ್ಕೆ ಕೆಲ ದಾಖಲೆಗಳು ಸುಟ್ಟು ಹೋಗಿದ್ದವು. ಇದೀಗ ಅಲ್ಲಿಂದ ಮೀ. ಅಂತರದಲ್ಲಿರುವ ಬಾಂಬೆ ಬಝಾರ್ ಬೆಂಕಿಗೆ ಆಹುತಿಯಾಗಿದೆ. ಆದರೆ ಸ್ಥಳದಲ್ಲಿದ್ದ ಸೆಕ್ಯುರಿಟಿ ಗಾರ್ಡಿನ ಪ್ರಕಾರ ಶಾಟ್ ್ ಸಕ್ರ್ಯೂಟಿನಿಂದ ಬೆಂಕಿ ಅವಘಢ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಬದ್ರುದ್ದೀನ್ ಎಂಬವರಿಗೆ ಸೇರಿದ ಮಳಿಗೆ ಕಳೆದ ಎರಡು ವರ್ಷಗಳಿಂದ ತೊಕ್ಕೊಟ್ಟುವಿನಲ್ಲಿ ಕಾರ್ಯಾಚರಿಸುತಿತ್ತು.





