ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಎಸ್ಸೆಸ್ಸೆಫ್ ಸಂಘಟನೆ ಧಾರ್ಮಿಕ ಚಟುವಟಿಕೆಗಳೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಾರ್ಯವೈಖರಿ ಶ್ಲಾಘನೀಯ ಎಂದು ಕೊಣಾಜೆ ಠಾಣೆಯ ಉಪನಿರೀಕ್ಷಕ ಸುಗುಮಾರನ್ ಅಭಿಪ್ರಾಯಪಟ್ಟರು.
ಅವರು ಗುರುವಾರ ಎಸ್ಸೆಸ್ಸೆಫ್ ದೇರಳಕಟ್ಟೆ ವತಿಯಿಂದ ರಿಫಾಈ ಶೈಖ್ ರವರ ಅನುಸ್ಮರಣೆ ಅಂಗವಾಗಿ ಕೊಣಾಜೆ ಅಸೈಗೋಳಿಯ ಅಭಯ ಅಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.
ಧಾರ್ಮಿಕ ಸಂಘಟನೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯತೆ ಇದೆ. ಸಮಾಜದಲ್ಲಿ ಹಿಂದುಳಿದವರ ಸೇವೆಗೆ ನಿಲ್ಲುವ ಮೂಲಕ ಧಾರ್ಮಿಕ ಸಂಘಟನೆಗಳು ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದರು .
ಎಸ್ಸೆಸ್ಸೆಫ್ ದೇರಳಕಟ್ಟೆ ಅಧ್ಯಕ್ಷ ಹಸನ್ ಸಅದಿ, ಉಪಾಧ್ಯಕ್ಷರುಗಳಾದ ಜುನೈದ್ ಸಖಾಫಿ,ಸುಹೈಲ್ ಶಾಂತಿಬಾಗ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಸನ್ ಕಾರ್ಯದರ್ಶಿ ಶರೀಫ್ ಮುಡಿಪು, ಪ್ರ.ಕಾರ್ಯದರ್ಶಿ ಸಫೀರ್ ರೆಂಜಾಡಿ, ಸದಸ್ಯರಾದ ಸಿದ್ದೀಕ್ ಮದನಿ, ಸಿದ್ದೀಕ್ ಕೋಟೆಕಾರ್ ಹಮೀದ್ ನಾಟೆಕಲ್, ಅಲಿ ಬದ್ಯಾರ್, ನೌಷಾದ್ ಬದ್ಯಾರ್, ಅಲ್ತಾಫ್ ಕಲ್ಪಾದೆ, ಅಶ್ರಫ್ ಅಸೈ, ರಫೀಕ್ ತಿಬ್ಲೆಪದವು ಉಪಸ್ಥಿತರಿದರು.



