ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ರಿಕ್ಷಾ ಬ್ರೇಕ್ ವೈಫಲ್ಯಕ್ಕೀಡಾಗಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಚಾಲಕ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೆಳಗೆಡೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ರಿಕ್ಷಾ ಚಾಲಕ ಅಬ್ದುಲ್ ಖಾದರ್ (42) ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ಆರೀಫ್ (16) ಮತ್ತು ಸುಹೈಲ್ (17) ಗಾಯಗೊಂಡವರು. ಉಳ್ಳಾಲದಿಂದ ತೊಕ್ಕೊಟ್ಟು ಒಳಪೇಟೆಗೆ ಪಾರ್ಕಿಗೆ ಬರುವ ಸಂದರ್ಭ ಓವರ್ ಬ್ರಿಡ್ಜ್ ಇಳಿಜಾರು ಪ್ರದೇಶದಲ್ಲಿ ರಿಕ್ಷಾ ಬ್ರೇಕ್ ವೈಫಲ್ಯಕ್ಕೀಡಾಗಿತ್ತು. ಪರಿಣಾಮ ಕೆಳಗಿದ್ದ ರಾಘವ.ಯಸ್.ಉಚ್ಚಿಲ್ ಎಂಬವರ ವಾಚ್ ರಿಪೇರಿ ಅಂಗಡಿಯೊಳಗೆ ನುಗ್ಗಿದ ರಿಕ್ಷಾ , ಅಂಗಡಿ ಷೋಕೇಸಿಗೆ ಢಿಕ್ಕಿ ಹೊಡೆದು ಮಗುಚಿಬಿದ್ದಿದೆ. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಶಾಲೆಗೆ ಬರುವವರಿದ್ದ ವಿದ್ಯಾರ್ಥಿಗಳನ್ನು ರಿಕ್ಷಾ ಚಾಲಕ ಕರೆತಂದಿದ್ದರು.




