ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ:ಎಲ್ಲ ಧರ್ಮ ಸಾರುವ ತತ್ವ ಒಂದೇ ಎಂಬ ಕಲ್ಪನೆಯನ್ನು ಪ್ರತಿಯೊಬ್ಬರು ಅನುಸರಿಸುವ ಮೂಲಕ ಧರ್ಮ ಮಧ್ಯೆ ಮನುಷ್ಯ ಸೃಷ್ಟಿಸಿದ ಗೋಡೆಯನ್ನು ಕಿತ್ತು ಹಾಕುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟುವಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಹಾಶಿವರಾತ್ರಿಯ ಪ್ರಯುಕ್ತ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಆಯೋಜಿಸಿದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗದ ಪ್ರದರ್ಶನ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಅದೆಷ್ಟೋ ಧರ್ಮಪ್ರಚಾರಕರೂ ಬಂದರೂ ಯಾರು ಧರ್ಮವನ್ನು ಸ್ಥಾಪನೆ ಮಾಡಿಲ್ಲ. ಅದರ ಬದಲು ಸಮಾಜದಲ್ಲಿರುವ ಸಮಸ್ಯೆಗಳನ್ನು ಬೋಧನೆಯ ಮೂಲಕ ಜನರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದರು. ಆದರೆ ಅದರ ನಂತರ ಬಂದ ಅವರ ಅನುಯಾಯಿಗಳು ಧರ್ಮ ಎಂಬ ಹೆಸರಿನಲ್ಲಿ ಗೋಡೆಗಳನ್ನು ಕಟ್ಟಲು ಶುರುಮಾಡಿದರು. . ಭಗವಂತ ಒಬ್ಬನೇ ಆದರೆ ಅವರ ನಾಮ ಹಲವು ಈ ನಿಟ್ಟಿನಲ್ಲಿ ಎಲ್ಲ ಧರ್ಮಗಳು ಸಾರಿದ ಒಳ್ಳೆಯ ವಿಚಾರಗಳನ್ನು ಪಾಲಿಸಬೇಕು. ಹಾಗೇ ಮಾಡುವ ಮನುಷ್ಯ ಮನುಷ್ಯನಾಗಿ ನೋಡುತ್ತೇವೆಯೆ ಹೊರತು ವೈರಿಗಳಾಗಿ ಅಲ್ಲ. ಚರ್ಚ್, ಮಸೀದಿ, ದೇವಸ್ಥಾನಗಳಿಗೆ ಹೋಗುವ ಪ್ರತಿಯೊಬ್ಬರು ಅವರಿಗೆ ಇಷ್ಟವಾಗುವ ರೀತಿಯಲ್ಲಿ ದೇವರನ್ನು ಕಲ್ಪಸಿಕೊಂಡು ಆರಾಧಿಸುತ್ತೇವೆ. ಎಂದ ಅವರು ಬದಲಾವಣೆ ಎಂಬ ಕೊಡಯನ್ನು ಇಡೀ ಪ್ರಪಂಚಕ್ಕೆ ಹಿಡಿಯಲು ಸಾಧ್ಯವಿಲ್ಲ ಆದರೆ ಎಲ್ಲರೂ ಸ್ಪಲ್ಪಪಟ್ಟಿಗೆ ಕೈಜೋಡಿಸಿದಾಗ ಬದಲಾವಣೆಯನ್ನು ತರಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞÂಮೋನು ವಹಿಸಿದ್ದರು. ನಗರಸಭೆ ಸದಸ್ಯ ಬಾಝಿಲ್ ಡಿಸೋಜಾ, ಶ್ರೀ ಕ್ಷೇತ್ರ ಸೋಮೇಶ್ವರದ ಆಡಳಿತಾ„ಕಾರಿ ಹಾಗೂ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ| ಯೋಗೀಶ್.ಹೆಚ್.ಆರ್, ಕೆಎಸ್ಆರ್ಟಿಸಿ ನಿರ್ದೇಶಕ ಟಿ. ಕೆ. ಸುಧೀರ್ ಕಾಸರಗೋಡು ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬ್ರಹ್ಮಾಕುಮಾರಿ ವಿಜಯಲಕ್ಷ್ಮೀ , ತೊಕ್ಕೊಟ್ಟು ಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ಪಾರ್ವತಿ ಭಾಗವಹಿಸಿದ್ದರು.
ಬಿಜೈ ಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ಅಂಬಿಕಾ ಸ್ವಾಗತಿಸಿದರು. ಮಂಗಳೂರು ಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ವಿಶ್ವೇಶ್ವರಿ ಕಾರ್ಯಕ್ರಮ ನಿರ್ವಹಿಸದರು. ಸುರತ್ಕಲ್ ಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ಪ್ರಭಾ ವಂದಿಸಿದರು.
ಜ್ಯೋತಿರ್ಲಿಂಗಗಳ ದರ್ಶನ: ಸೋಮನಾಥ ಮಲ್ಲಿಕಾರ್ಜುನಾ, ಮಹಾಕಾಳೇಶ್ವರ, ಓಂಕಾರೇಶ್ವರ, ಕೇದಾರನಾಥ, ಭೀಮಾಶಂಕರ, ಗ್ರಿಶನೇಶ್ವರ, ರಾಮೇಶ್ವರ, ನಾಗೇಶ್ವರ, ವೈದ್ಯನಾಥ, ತ್ರಯಂಭಕೇಶ್ವರ, ವಿಶ್ವನಾಥ ಎಂಬ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಪ್ರೇಕ್ಷಕರ ಗಮನ ಸೆಳೆಯಿತು


